Eye twitching: ನಮ್ಮ ದೇಹದಲ್ಲಿ ಕಣ್ಣುಗಳ ಸುರಕ್ಷತೆ ಬಹಳ ಮುಖ್ಯ. ಪ್ರತೀ ದಿನ ಜಗತ್ತನ್ನು ನೋಡುವ ನಮ್ಮ ಕಣ್ಣಿಗೆ ಒಂದಿನ ಚಿಕ್ಕ ಸಮಸ್ಯೆ ಆದ್ರೂ ಇಡೀ ದೇಹವೇ ಸೊರಗಿ ಹೋಗುತ್ತದೆ. ಅದೇ ರೀತಿ ನಿಮ್ಮ ಕಣ್ಣು ಅದ್ರಲ್ಲೂ ಮಹಿಳೆಯರ ಎಡಗಣ್ಣು ಅದುರಿದರೆ ಖಂಡಿತಾ ನಿಮಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು. ಹೌದು, ಹಾಗಾದ್ರೆ ನಿಮ್ಮ ಕಣ್ಣು ಅದುರೋದು ಯಾಕೆ ನೋಡೋಣ..
ಅಯ್ಯೋ ಕಣ್ಣು ಅದುರುತ್ತಿದೆ ಏನಾಗುತ್ತೋ..ಚಿಂತೆ ಯಾಕೆ..?
ಒಮ್ಮೆ ನಮ್ಮ ಬಲಗಣ್ಣು ಅದರಿದರೇ ಮತ್ತೊಮ್ಮೆ ಎಡಗಣ್ಣು ಅದರುತ್ತೆ. ಹೀಗೆ ಕಣ್ಣು ಅದುರುವುದನ್ನು ಅನುಭವಿಸಿದವರು ಗೊಂದಲಕ್ಕೀಡಾಗೋದಂತು ಸತ್ಯ. ಏಕೆಂದರೆ ಇದರ ಹಿಂದೆ ಶುಭ, ಅಶುಭ ಎಂಬ ನಂಬಿಕೆಗಳು ನಮ್ಮನ್ನು ಸಂಪೂರ್ಣ ಆವರಿಸಿದೆ. ಈಗಲೂ ಕೂಡ ಇಂತಹ ನಂಬಿಕೆಗಳನ್ನು ಹೆಚ್ಚಿನ ಜನ ಫಾಲೋ ಮಾಡೋರಿದ್ದಾರೆ. ಮಹಿಳೆಯರಿಗೆ ಎಡಗಣ್ಣು, ಪುರುಷರಿಗೆ ಬಲಗಣ್ಣು ಶುಭ ಎಂದು ಹೇಳಲಾಗುತ್ತೆ. ಇವೆಲ್ಲವನ್ನು ನಂಬುವ ಮಂದಿ ನಂಬುತ್ತಾರೆ. ಆದರೆ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳಿವೆ ಅನ್ನೋದನ್ನು ನಾವು ತಿಳಿಯಲೇಬೇಕು.
ವಿಪರೀತ ಒತ್ತಡದಿಂದಿರುವಿರಿ !
ಕೆಲವೊಬ್ಬರು ಅತಿಯಾದ ಯೋಚನೆಯೊಂದಿಗೆ ಜೀವನ ನಡೆಸ್ತಾ ಇರುತ್ತಾರೆ. ಪ್ರತೀ ದಿನ ಒತ್ತಡವನ್ನೇ ತಲೆ ಮೇಲೆ ಹೊತ್ತುಕೊಂಡು ಜೀವನವನ್ನು ಬರೀ ಚಿಂತೆಯಲ್ಲೇ ಕಳೆಯುತ್ತಾರೆ, ಇಂತಹ ಜನರಿಗೆ ಹೆಚ್ಚಾಗಿ ಕಣ್ಣು ಅದುರುತ್ತದೆ. ಅದೆಷ್ಟೇ ಕಂಟ್ರೋಲ್ ಮಾಡಿದರೂ ಕಣ್ಣು ಅದುರೋದು ನಿಲ್ಲೋದಿಲ್ಲ. ಇದು ಖಂಡಿತವಾಗಲೂ ಯಾವುದೇ ಶಕುನ ಅಲ್ಲ. ಬದಲಾಗಿ ನಿಮ್ಮ ಆರೋಗ್ಯ ಕೆಟ್ಟೋಗಿದೆ ಅನ್ನೋದರ ಸೂಚನೆ.
ಅತಿ ಆಯಾಸ ಬೇಡ..!
ನಿಮ್ಮ ದೇಹಕ್ಕೆ ಹೆಚ್ಚಿನ ರೆಸ್ಟ್ ಇಲ್ಲದೇ ಇರೋದರಿಂದ ಕಣ್ಣು ಅದುರಲು ಶುರುವಾಗುತ್ತದೆ. ಪ್ರತೀ ದಿನ ಕೆಲಸ ಮಾಡಿ ಒಂದಿನವೂ ರೆಸ್ಟ್ ಅನ್ನೋದು ಇಲ್ಲದೇ ಇದ್ದಾಗ ಇಂತಹ ಸಮಸ್ಯೆ ಉಂಟಾಗುತ್ತದೆ. ಅತಿಯಾಗಿ ದೇಹ ದಂಡಿಸೋದು ತಪ್ಪು. ಇದರಿಂದ ದೇಹಕ್ಕೆ ಕೊಂಚವೂ ರಿಲ್ಯಾಕ್ಸೇಶನ್ ಸಿಗೋದಿಲ್ಲ. ಮನೆಗೆಲಸ ಇದ್ದದ್ದೇ ಆದರೆ ಮಹಿಳೆಯರು ತಮ್ಮ ದೇಹಕ್ಕೆ ಆರಾಮದಾಯಕ ಸಮಯ ಕೊಡುವುದು ಬಹಳ ಮುಖ್ಯ. ಹೀಗಾಗಿ ಆಯಾಸ ಪಟ್ಟುಕೊಂಡು ಅತಿಯಾಗಿ ಓಡಾಟ ನಡೆಸಿ ದೇಹಾರೋಗ್ಯ ಹಾಳುಮಾಡಿಕೊಳ್ಳುವುದು ಬೇಡ.
ಕಣ್ಣಿಗೆ ರೆಸ್ಟ್ ಕೊಡಿ..!
ನಮ್ಮ ಕಣ್ಣು ಇಪ್ಪತ್ತನಾಲ್ಕು ಗಂಟೆ ಓಪನ್ ಆಗಿಯೇ ಇರುತ್ತದೆ. ಇದರಿಂದ ಕಣ್ಣಿಗೆ ಹಿತ ಅಂತ ಅನಿಸೋದಿಲ್ಲ. ಆಫೀಸು ಸಮಯದಲ್ಲಿ ಕಣ್ಣು ಸಂಪೂರ್ಣವಾಗಿ ಲ್ಯಾಪ್ ಟಾಪ್ ಮೇಲೆ ದೃಷ್ಟಿ ಹೊಂದಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನಿಮ್ಮ ಕಣ್ಣಿನ ಸುರಕ್ಷತೆ ಮುಖ್ಯ. ಅದ್ರಲ್ಲೂ ಮನೆಗೆ ಬಂದ ನಂತರವೂ ಮೊಬೈಲ್ ಮೇಲೆ ನಿಮ್ಮ ಸಂಪೂರ್ಣ ಗಮನದಿಂದ ಕಣ್ಣಿನ ದೃಷ್ಟಿ ಕುಂದಲು ಕಾರಣವಾಗುತ್ತದೆ. ಹೀಗಾಗಿ ಆದಷ್ಟು ಲ್ಯಾಪ್ ಟಾಪ್ ಅಥವಾ ಮೊಬೈಲ್ ಫೋನ್ ನೋಡುವುದನ್ನು ಕಡಿಮೆ ಮಾಡುವ ರೂಢಿ ಇರಲಿ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











