ಪುತ್ತೂರು:ತುಳುಟೈಮ್ಸ್ ಪುರುಷರಕಟ್ಟೆಯಿಂದ-ಶಾಂತಿಗೋಡು-ಆನಡ್ಕ ಸಂಪರ್ಕ ರಸ್ತೆಯು ಮಾಯಂಗಲದಿಂದ ಕೂಡುರಸ್ತೆಯವರೆಗೆ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿದೆ.ಈ ಬಗ್ಗೆ ತುಳುಟೈಮ್ಸ್ ಈಗಾಗಲೇ ವರದಿ ಮಾಡಿತ್ತು.
ಸದ್ರಿ ರಸ್ತೆಯನ್ನು ಶೀಘ್ರದಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾಗಿಸಬೇಕೆಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಪುತ್ತೂರು ಇವರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಭೇಟಿ ನೀಡಿ ಮನವಿ ನೀಡಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು,ಅನಿಲ್ ತೆಂಕಿಲ,ವಿಶ್ವನಾಥ ಬಲ್ಯಾಯ,ಜಯರಾಮ ಪೂಜಾರಿ,ಲಕ್ಷ್ಮೀಪ್ರಸಾದ್ ಆನಾಜೆ,ಅವಿನಾಶ್ ಪುರುಷರಕಟ್ಟೆ,ರಾಕೇಶ್ ಓಜಾಲ ಉಪಸ್ಥಿತರಿದ್ದರು.
ತಕ್ಷಣ ಮನವಿಗೆ ಸ್ಪಂದಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರಾಮದ ಪಿಡಿಓ ರವರನ್ನು ಹದಗೆಟ್ಟಿರುವ ರಸ್ತೆಯ ಸ್ಥಳಕ್ಕೆ ಕಳುಹಿಸಿದ್ದಾರೆ.ಸ್ಥಳದಲ್ಲಿ ಪುತ್ತಿಲ ಪರಿವಾರ ನಿಯೋಗ ಹಾಗೂ ಗ್ರಾಮಸ್ಥರು ಪಿಡಿಓ ರವರನ್ನು ರಸ್ತೆ ಕೂಡಲೇ ಸಂಚಾರಕ್ಕೆ ಯೋಗ್ಯವಾಗಿಸಬೇಕೆಂದು ಆಗ್ರಸಿದ್ದಾರೆ.ಪಿಡಿಓ ರವರು ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ ಎನ್ನುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದ್ದಾರೆ.
Putthila urges repair of the Purusharakatte-Shanthigodu connecting road.tulutimes
ಇದನ್ನೂ ಓದಿ :ರಾತ್ರಿ ವೇಳೆ ಬಟ್ಟೆ ಒಗೆಯುವುದು ಅಥವಾ ಒಣಗಿಸುವುದು ಒಳ್ಳೆಯದಲ್ಲವೇ? ವಿಜ್ಞಾನ ಏನು ಹೇಳುತ್ತದೆ?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











