ಬೆಂಗಳೂರು: Tulu Times l ಬೆಂಗಳೂರಿನ ಕ್ಯಾಪ್‌ಜೆಮಿನಿ ಕ್ಯಾಂಪಸ್‌ನಲ್ಲಿರುವ ಡೇ ಕೇರ್ ಕೇಂದ್ರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಆರೋಪದ ಬಳಿಕ, ರಾಜ್ಯದ ಎಲ್ಲಾ ಡೇ ಕೇರ್ ಕೇಂದ್ರಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಯೋಗವು ಎಲ್ಲಾ ಡೇ ಕೇರ್ ಕೇಂದ್ರಗಳ ಕಡ್ಡಾಯ ನೋಂದಣಿ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಪೋಷಕರಿಗೆ ಲೈವ್ ಸಿಸಿಟಿವಿ ವೀಕ್ಷಣೆಯ ಅವಕಾಶ, ತರಬೇತಿ ಪಡೆದ ಸಿಬ್ಬಂದಿ ನೇಮಕ, ವೈದ್ಯಕೀಯ ಸೌಲಭ್ಯ, ತುರ್ತು ಪರಿಸ್ಥಿತಿ ನಿರ್ವಹಣಾ ವ್ಯವಸ್ಥೆ ಹಾಗೂ ನಿಯಮಿತ ತಪಾಸಣೆ ಮತ್ತು ಸುರಕ್ಷತಾ ಆಡಿಟ್ ಕಡ್ಡಾಯಗೊಳಿಸುವಂತೆ ಸಲಹೆ ನೀಡಿದೆ.
ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇ ಕೇರ್ ಕೇಂದ್ರಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲದಿರುವುದು ನಿಯಂತ್ರಣ ವ್ಯವಸ್ಥೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಡೇ ಕೇರ್ ಕೇಂದ್ರಗಳನ್ನು ಒಂದೇ ಸರ್ಕಾರಿ ಇಲಾಖೆಯ ವ್ಯಾಪ್ತಿಗೆ ತಂದು ನೋಂದಣಿ, ನಿಯಂತ್ರಣ ಮತ್ತು ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸಲು ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ, ಮಕ್ಕಳ ಆರೈಕೆ ಸೇವೆಯನ್ನು ಹೊರಗುತ್ತಿಗೆ ನೀಡುವ ಕಂಪನಿಗಳು ಸಿಬ್ಬಂದಿಯ ಅರ್ಹತೆ, ತರಬೇತಿ ಮತ್ತು ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಯೋಗ ಸೂಚಿಸಿದೆ. ಇದೀಗ ರಾಜ್ಯಾದ್ಯಂತ ಡೇ ಕೇರ್ ಕೇಂದ್ರಗಳ ತಪಾಸಣೆ ಆರಂಭವಾಗಿದ್ದು, ಬೆಂಗಳೂರಿನ ಎಲ್ಲಾ ಡೇ ಕೇರ್ ಕೇಂದ್ರಗಳ ಕಾರ್ಯವೈಖರಿಯನ್ನು ನಗರ ಪೊಲೀಸರು ಕೂಡ ಪರಿಶೀಲಿಸಲಿದ್ದಾರೆ.
Government surveillance on day-care centers following a case of child abuse. – ತುಳು ಟೈಮ್ಸ್
ಇದನ್ನೂ ಓದಿ : HIV ಸೋಂಕು ತಡೆಗೆ ಕರ್ನಾಟಕದ ಬಿಗಿ ಕ್ರಮ: ಗೌಪ್ಯ ಪರೀಕ್ಷೆಗೆ ಸರ್ಕಾರದ ಕರೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/zL6G6JE_ZwA











