ಸುಳ್ಯ : Tulu Times l ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನಲ್ಲಿ ಆ.6ರಂದು ನಡೆದ ‘ಫಿಲೋ ಪ್ರತಿಭಾ-2026’ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಸ್ನೇಹ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದು, ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಸ್ನೇಹ ಶಾಲೆಯ ವಿದ್ಯಾರ್ಥಿಗಳು ಎರಡು ಪ್ರಥಮ ಹಾಗೂ ಮೂರು ದ್ವಿತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಶಾಲೆಗೆ ಹೆಮ್ಮೆ ತಂದಿದ್ದಾರೆ.
ಕಸದಿಂದ ರಸ ಸ್ಪರ್ಧೆಯಲ್ಲಿ 10ನೇ ತರಗತಿಯ ಸೃಜನ್ ಎಸ್.ಜೆ. ಮತ್ತು ಗಿರೀಶ್ ಪ್ರಥಮ ಬಹುಮಾನ ಪಡೆದರೆ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ 10ನೇ ತರಗತಿಯ ಅಪ್ರಮೇಯ ಆರ್.ಯು. ಮತ್ತು ನಿಶಾಲ್ ವೈ.ಪಿ. ಪ್ರಥಮ ಸ್ಥಾನ ಗಳಿಸಿರುತ್ತಾರೆ. ಅಲ್ಲದೇ, ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಕಾರ್ತಿಕ್ ಎನ್.ಎನ್. ಹಾಗೂ 9ನೇ ತರಗತಿಯ ವೈಷ್ಣವ್ ಪಿ.ಎನ್. ದ್ವಿತೀಯ ಬಹುಮಾನ, ಕಾಳುಗಳಿಂದ ರಂಗೋಲಿ ರಚನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಮನ್ವಿತ್ ಹಾಗೂ 8ನೇ ತರಗತಿಯ ಧೃತಿ ಟಿ.ಪಿ. ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಅದೇ ರೀತಿ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿಯೂ ಸ್ನೇಹ ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ತಂಡದಲ್ಲಿ 10ನೇ ತರಗತಿಯ ವಿಬಿಶ್ ಎಸ್. ನಾಯ್ಕ್, ವಿಹಿತ್ ಎಸ್. ನಾಯ್ಕ್, ಬಿ.ಜಿ. ಮನ್ವಿತಾ ಹಾಗೂ ವೈಷ್ಣವಿ ಎಸ್., 8ನೇ ತರಗತಿಯ ಸಾತ್ವಿಕ್ ಎಸ್. ಪ್ರಸನ್ನಕುಮಾರ್, ಲಿಜೇಶ್ ಕುಮಾರ್ ಹಾಗೂ ಪ್ರಾಂಜಲಿ ಕೆ.ಬಿ. ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಮುಂದಿನ ಸ್ಪರ್ಧೆಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ.
Sullia: Multifaceted talent showcased; Sneha School wins Second Overall Award – ತುಳುಟೈಮ್ಸ್
ಇದನ್ನೂ ಓದಿ :ಕ್ಯೂ ಮುಗಿಯುವ ಮೊದಲೇ ಪ್ರಸಾದ ನಿಮ್ಮ ಕೈಯಲ್ಲಿ ; ತಿರುಪತಿಯಲ್ಲಿ ಹೊಸ ವ್ಯವಸ್ಥೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/46i6dcSGIf8











