ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಎಲ್‌ಪಿಜಿ ಸಿಲಿಂಡರ್ ಗ್ರಾಹಕರಿಗೆ ಕೇಂದ್ರದಿಂದ ಸಿಹಿ ಸುದ್ದಿ

ಎಲ್‌ಪಿಜಿ : Tulu Times l ಗ್ರಾಮೀಣ ಪ್ರದೇಶಗಳ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ಸಿಲಿಂಡರ್ ರಿಫೀಲ್ ಬುಕಿಂಗ್‌ಗೆ ಇದ್ದ ಕಾಯುವಿಕೆ ಅವಧಿಯ ಅಂತರವನ್ನು ಗಣನೀಯವಾಗಿ ಕಡಿತಗೊಳಿಸಿದೆ. ಇನ್ಮುಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರ ಗೃಹಬಳಕೆದಾರರು ತಮ್ಮ ಮುಂದಿನ ಸಿಲಿಂಡರ್ ಅನ್ನು ಕೇವಲ 25 ದಿನಗಳಿಗೊಮ್ಮೆ ಬುಕ್ ಮಾಡಬಹುದಾಗಿದೆ.

ಕಳೆದ ಮಾರ್ಚ್ ನಲ್ಲಿ ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ಪೂರೈಕೆ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಾತ್ಕಾಲಿಕವಾಗಿ ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಅಂತರ ನಿಗದಿಪಡಿಸಿತ್ತು. ಇದರಿಂದಾಗಿ ಗ್ರಾಮೀಣ ಭಾಗದ ಕುಟುಂಬಗಳಿಗೆ ಹೆಚ್ಚುವರಿ ಸಿಲಿಂಡರ್ ಸಿಗದೆ ತೀವ್ರ ಸಮಸ್ಯೆಯಾಗಿತ್ತು. ಆದರೆ, ಈಗ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸರಾಗಗೊಂಡಿದ್ದು, ಬ್ಯಾಕ್‌ಲಾಗ್ ಗಣನೀಯವಾಗಿ ತಗ್ಗಿರುವ ಕಾರಣ ಗ್ರಾಮೀಣ ಭಾಗದ ಗ್ರಾಹಕರ ಕಾಯುವಿಕೆ ಅವಧಿಯನ್ನು 20 ದಿನಗಳಷ್ಟು ಕಡಿತಗೊಳಿಸಿ, ನಗರ ಪ್ರದೇಶಗಳ ಸಾಲಿಗೆ ತರಲಾಗಿದೆ.

ಸಂಸ್ಥೆಗಳಿಗೆ ಅಧಿಕೃತ ನಿರ್ದೇಶನ ;

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ನೂತನ ಮಾರ್ಗದರ್ಶನವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಪ್ರಮುಖ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳಿಗೆ ಅಧಿಕೃತ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ದೇಶದ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ, ವಿಶೇಷವಾಗಿ ಹೆಚ್ಚು ಅಡುಗೆ ಅನಿಲ ಬಳಸುವ ದೊಡ್ಡ ಕುಟುಂಬಗಳಿಗೆ ಬಹುದೊಡ್ಡ ಸಮಾಧಾನ ಸಿಕ್ಕಂತಾಗಿದೆ.

Good news from the Centre for LPG cylinder consumers – ತುಳು ಟೈಮ್ಸ್

ಇದನ್ನೂ ಓದಿ : ವಿಮಲ್ ಏಲಕ್ಕಿ ಜಾಹೀರಾತು ವಿವಾದ: ಬಾಲಿವುಡ್ ನಟರಿಗೆ ಎಫ್‌ಡಿಎ ನೋಟಿಸ್

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page