ಬ್ರೇಕಿಂಗ್ ನ್ಯೂಸ್
ದೇಶ

ಕರೀನಾ ರಿಂದ ಆಲಿಯಾ ತನಕ: ಅಂಡರ್-ಐ ಪ್ಯಾಚ್‌ಗಳು ಹೇಗೆ ಬಾಲಿವುಡ್‌ನಲ್ಲಿ ಸೇರಿಕೊಂಡಿರೋದು ?

ಫ್ಯಾಶನ್ : Tulu Times l ವಿಮಾನ ನಿಲ್ದಾಣದ ಸೆಲ್ಫಿ‌ಗಳಿಂದ ಹಿಡಿದು ವ್ಯಾನಿಟಿಯ ಮುಂದೆ ಮಾಡುವ Get Ready With Me ರೀಲ್ಸ್‌ಗಳ ತನಕ, ಅಂಡರ್-ಐ ಪ್ಯಾಚ್‌ಗಳು ನಿಶ್ಯಬ್ದವಾಗಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ಬ್ಯೂಟಿ ಆಕ್ಸೆಸರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣ ಸರಳ ಅಂತ ಹೇಳ್ಬೋದು. ಹೌದು… ಇವು ಸ್ವಯಂ ಆರೈಕೆ ಅನ್ನೋ ಫೀಲಿಂಗ್ ಕೊಡುತ್ತವೆ ಮತ್ತು ಎಂಟು ಗಂಟೆ ನಿದ್ದೆ ಮಾಡಿದ್ದೇನೆ ಅನ್ನುವ ತಾಜಾತನದ ಲುಕ್ ಅನ್ನು ತಕ್ಷಣ ಕೊಡುತ್ತವೆ.

ದಿನವೂ ಕೆಲಸಕ್ಕೆ ಹೋಗುವ ಮುನ್ನ ಇದಕ್ಕಿಂತ ಬೇರೆ ಏನು ಬೇಕು?

ಇದು ಯಾವ ಫ್ಯಾಶನ್ ಅಂತ ತಿಳಿದಿರದವರಿಗೆ ಇಲ್ಲಿ ಹೇಳ್ತಾರೆ ಕೇಳಿ… ಅಂಡರ್-ಐ ಪ್ಯಾಚ್‌ಗಳು ಸಿಲಿಕಾನ್ ಅಥವಾ ಜೆಲ್‌ನಿಂದ ತಯಾರಿಸಲಾದ ಸಣ್ಣ ಪ್ಯಾಡ್‌ಗಳು. ಇವು ಸೀರಮ್‌ನಿಂದ ತೇವಗೊಂಡಿದ್ದು, ಕಣ್ಣಿನ ಕೆಳಭಾಗದಲ್ಲಿ 10 ರಿಂದ 30 ನಿಮಿಷಗಳವರೆಗೆ ಇಡಲಾಗುತ್ತದೆ. ಇವು ಒಮ್ಮೆ ಮಾತ್ರ ಬಳಸಿ ಬಿಸಾಡುವ ಮತ್ತು ಮತ್ತೆ ಮತ್ತೆ ಬಳಸಬಹುದಾದ ಎರಡೂ ರೂಪಗಳಲ್ಲಿ ಲಭ್ಯವಿವೆ.

ಹಾಗಾದ್ರೆ ಇವು ಹೇಗೆ ಉಪಯುಕ್ತ?

ಈ ಪ್ಯಾಚ್‌ಗಳಲ್ಲಿ ಹೈಯಾಲುರಾನಿಕ್ ಆಸಿಡ್, ನೈಸಿನಮೈಡ್, ರೆಟಿನಾಲ್ ಮುಂತಾದ ಉಪಯುಕ್ತ ಅಂಶಗಳು ಸೇರಿರುತ್ತವೆ. ಇದರಿಂದ ಕಣ್ಣಿನ ಕೆಳಭಾಗದ ಚರ್ಮಕ್ಕೆ ಉತ್ತಮ ತೇವಾಂಶ ಸಿಗುತ್ತದೆ, ಡಾರ್ಕ್ ಸರ್ಕಲ್‌ಗಳು ಕಡಿಮೆಯಾಗುತ್ತವೆ ಮತ್ತು ಮುಖ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ.

ಅತ್ಯುತ್ತಮ ವಿಷಯವೇನೆಂದರೆ ; ಇದರ ಬಳಕೆ ತುಂಬಾ ಸುಲಭ ! ಹಾಗಾಗಿ, ಕರೀನಾ ಕಪೂರ್ ಖಾನ್‌ನಿಂದ ಆಲಿಯಾ ಭಟ್‌ವರೆಗೆ, ಅನೇಕ ಸೆಲೆಬ್ರಿಟಿಗಳು ತಮ್ಮ ಗ್ಲೋ ರೂಟೀನ್‌ನ ಭಾಗವಾಗಿ ಅಂಡರ್-ಐ ಪ್ಯಾಚ್‌ಗಳನ್ನು ಬಳಸುತ್ತಿರುವುದು ಈಗ ಸಾಮಾನ್ಯ ದೃಶ್ಯವಾಗಿದೆ.

From Kareena to Alia: How under-eye patches have made their way into Bollywood?‌ – ತುಳುಟೈಮ್ಸ್

ಇದನ್ನೂ ಓದಿ : 24 ಗಂಟೆ ನೀರು ಪೂರೈಕೆಯತ್ತ ಚೆನ್ನೈ: ಪೈಪ್‌ಲೈನ್ ಯೋಜನೆ ಜಾರಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=32GMjo9CMGbm3QW0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 22

You cannot copy content of this page