ಸಿನೆಮಾ : Tulu Times | ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನು ಹಲವು ಸೀಸನ್‌ಗಳಿಂದ ನಿರೂಪಿಸುತ್ತಿರುವ ಸುದೀಪ್, ತಮ್ಮ ಮಾತಿನ ಮ್ಯಾಜಿಕ್ ಮತ್ತು ವ್ಯಕ್ತಿತ್ವದಿಂದ ಪ್ರೇಕ್ಷಕರ ಮನಗೆಲ್ಲುತ್ತಾ ಬಂದಿದ್ದಾರೆ. ವರ್ಷಕ್ಕೊಮ್ಮೆ ಪ್ರೇಕ್ಷಕರು ಸುದೀಪ್ ನಿರೂಪಣೆ, ಮಾತುಗಳನ್ನು ಕೇಳಿಸೋದಕ್ಕಾಗಿಯೇ ಕಾಯುತ್ತಾರೆ ಕೂಡಾ. ಹೀಗಿರುವಾಗ ಸುದೀಪ್ ನಟನೆಯ ‘ಮಾರ್ಕ್’ ಟ್ರೈಲರ್ ಬಿಡುಗಡೆ ಹಂತದಲ್ಲಿದೆ.
ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ತನ್ನ ವಿಭಿನ್ನ ಅಭಿನಯ ಶೈಲಿ, ಅದ್ವಿತೀಯ ಧ್ವನಿ ಶೈಲಿ ಮತ್ತು ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿರುವವರು ನಟ ಕಿಚ್ಚ ಸುದೀಪ್. ನಟನಾಗಿ, ನಿರ್ದೇಶಕರಾಗಿ, ಗಾಯಕನಾಗಿ ಹಾಗೂ ನಿರ್ಮಾಪಕರಾಗಿ ತಮ್ಮದೇ ಆದ ಮರೆಯಲಾಗದ ಗುರುತನ್ನು ಮೂಡಿಸಿದವರಲ್ಲಿ ಒಬ್ಬರು. ನಿನ್ನೆಯಷ್ಟೇ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಕುತೂಹಲ ಮೂಡಿಸಿ ಯಶಸ್ವಿಯಾಗಿದ್ದು, ಇದೇ ತಿಂಗಳು ಸಿನಿಮಾ ಬಿಡುಗಡೆ ಆಗಲಿದೆ. ದರ್ಶನ್ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬೆನ್ನಲ್ಲೇ ಸುದೀಪ್ ಅವರ ಹೊಸ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗುತ್ತಿದೆ. ಸುದೀಪ್ ಅವರ ‘ಮಾರ್ಕ್’ ಸಿನಿಮಾ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.
ಮಾರ್ಕ್ ಸಿನಿಮಾದ ಟ್ರೈಲರ್ ನಾಳೆ ಅಂದರೆ ಡಿಸೆಂಬರ್ 07ರಂದು ಬೆಳಿಗ್ಗೆ 11:58ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ ಪಾತ್ರವರ್ಗ ತುಸು ಬದಲಾಗಿದೆ ಹೊರತಾಗಿ ತಂತ್ರಜ್ಞರು ಬಹುತೇಕ ‘ಮ್ಯಾಕ್ಸ್’ಗೆ ಕೆಲಸ ಮಾಡಿದವರೇ ಇದ್ದಾರೆ. ಕಿಚ್ಚ ಸುದೀಪ್ ಕೇವಲ ನಟ ಅಲ್ಲ, ಕನ್ನಡ ಸಿನಿಮಾ ಕ್ಷೇತ್ರದ ಶೈಲಿ, ಸಮರ್ಪಣೆ ಮತ್ತು ಸೃಜನಾತ್ಮಕತೆಯ ಪ್ರತೀಕ. ತಮ್ಮ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಅವರು ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮಾಡುವ ಹೊಸ ಪ್ರಯತ್ನಗಳತ್ತ ಪ್ರೇಕ್ಷಕರು ಸದಾ ಕಾತರದಿಂದ ಎದುರು ನೋಡುತ್ತಿದ್ದಾರೆ. Date set for trailer of Sudeep’s ‘Mark’ – ತುಳು ಟೈಮ್ಸ್
ಇದನ್ನೂ ಓದಿ :ದಿನವಿಡೀ ನೆಗೆಟಿವ್ ಯೋಚನೆಗಳಿಂದ ತಲೆ ಕೆಟ್ಟೋಗಿದ್ಯಾ..ಇಲ್ಲಿದೆ ನೆಮ್ಮದಿಯ ದಾರಿ!
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B6prUvD0mUk?si=uoKk42Rv22JtggQv











