ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Udupi: ನೇಣಿಗೆ ಶರಣಾದ ಯುವ ಪ್ರೇಮಿಗಳು

Udupi: ಯುವಪ್ರೇಮಿಗಳಿಬ್ಬರು ಚೂಡಿದಾರದ ಶಾಲಿನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.16 ಗುರುವಾರ ಸಂಜೆ ನಡೆದಿದೆ.

ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿ ಎಂಬಲ್ಲಿ ಯುವತಿ ವಾಸವಾಗಿರುವ, ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಾಲೇಜು ವಿದ್ಯಾರ್ಥಿನಿ ಪವಿತ್ರ (17), ವಲಸೆ ಕಾರ್ಮಿಕ ಮಲ್ಲೇಶ (23) ಆತ್ಮಹತ್ಯೆ ಮಾಡಿಕೊಂಡವರು.

ನಗರ ಪೊಲೀಸ್ ಠಾಣೆಯ ಎಸ್.ಐ ಭರತೇಶ್, ಎ.ಎಸ್.ಐ ಪರಮೇಶ್ವರ್ ಕೆ, ಎ.ಎಸ್.ಐ ರಮೇಶ್, ಮುಖ್ಯ ಆರಕ್ಷಕ ಜಯಕರ್, ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಇವರು, ಎರಡು ಶವಗಳನ್ನು ಪೊಲೀಸರ ಸಮಕ್ಷಮದಲ್ಲಿ ನೇಣುಕುಣಿಕೆಯಿಂದ ತೆರವುಗೊಳಿಸಿದರು.

ಬಳಿಕ ಅಂಬುಲೆನ್ಸ್ ವಾಹನದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಪೊಲೀಸ್ ಇಲಾಖೆಗೆ ನೆರವಿನೊಂದಿಗೆ ಸಾಗಿಸಿದರು.

ಇದನ್ನೂ ಓದಿ:BBK12 Update: ತಪ್ಪು ಮಾಡಿಯೂ ಜೋಡೆತ್ತುಗಳ ದರ್ಬಾರ್‌.! ಒಂಚೂರು ಹೆದ್ರಿಲ್ಲ ಶೆಟ್ರು 


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 194

You cannot copy content of this page