Climate News : ಬೆಳಗ್ಗೆಯ ಮಂಜು ಇನ್ನೇನು ಚಳಿಗಾಲ ಸುರುವಾಯ್ತಾ ಎನ್ನುವಷ್ಟರಲ್ಲೇ ಹವಾಮಾನ ಇಲಾಖೆ ನವೆಂಬರ್ 4 ಅಥವಾ 5 ರಿಂದ ಮಳೆ ಬರುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ. ಒಂದು ವಾರದ ಒಣಹವೆಯ ಬಳಿಕ ಇದೀಗ ಮೋಡಕವಿದ ವಾತಾವರಣದ ಜೊತೆಗೆ ಸಂಜೆಯ ವೇಳೆ ಹಗುರ ಮಳೆ ಬರುವ ಮುನ್ಸೂಚನೆಯಿದೆ ಎಂದು ತಿಳಿಸಲಾಗಿದೆ.
ನವೆಂಬರ್ 4 ಮಂಗಳವಾರದಿಂದ ಉತ್ತರ ಕರ್ನಾಟಕದ ಕೆಲವೆಡೆ ಹಾಗೂ ನವೆಂಬರ್ 5 ರಿಂದ 7 ರವರೆಗೆ 3 ದಿನ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿಯಾಗಿದೆ. ಇದು ನವೆಂಬರ್ 7 ರವರೆಗೂ ಮುಂದುವರಿಯಲಿದ್ದು ಮುಖ್ಯವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ, ಬೀದರ್, ಕಲಬುರ್ಗಿ, ಕೊಪ್ಪಳ, ಯಾದಗಿರಿ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ವಿಜಯನಗರ ಇತ್ಯಾದಿ ಕಡೆ ಸಾಧಾರಣ, ಗುಡುಗು-ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ತಿಳಿಸಿದೆ.
ದಕ್ಷಿಣ ಕನ್ನಡ ಪ್ರಸ್ತುತ ಹವಾಮಾನ ವರದಿ ;
ದಕ್ಷಿಣ ಕನ್ನಡದಲ್ಲಿ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಸುಮಾರು 29 ° ಸೆಲ್ಸಿಯಸ್ ತಾಪಮಾನವಿದ್ದು(84 °F), ಮಧ್ಯಾಹ್ನ ವೇಳೆಯಲ್ಲಿ 12:00 – 14:00 ನಡುವೆ ತಾಪಮಾನ 30–33 °ಸೆಲ್ಸಿಯಸ್ (87–91 °F) ವರೆಗೆ ಏರಲಿದ್ದು, ಸಂಜೆ 17:00 ನಂತರ ತಾಪಮಾನ 28 °ಸೆಲ್ಸಿಯಸ್ (83 °F)ತನಕ ಇಳಿಯುತ್ತದೆ. ನಂತರ ರಾತ್ರಿ ವೇಳೆ 25 °ಸೆಲ್ಸಿಯಸ್ (77 °F) ಬೆಳೆದು 24 °ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಪ್ರಕಾರ ತಿಳಿಸಲಾಗಿದೆ. ಮಧ್ಯಾಹ್ನದ ಸಮಯ ತಾಪಮಾನ ಹೆಚ್ಚಿರುವುದರಿಂದ ಹೊರಗಿನ ಕೆಲಸಗಳಿಗೆ ಸಮಯವನ್ನು ನಿಗದಿ ಪಡಿಸಿ, ಸಂಜೆ ಸಮಯದಲ್ಲಿ ಹೆಚ್ಚಾಗಿ ಓಡಾಡುವುದು ಉತ್ತಮ. ಹೆಚ್ಚಾಗಿ ನೀರು ಕುಡಿಯುವುದು ಉತ್ತಮ.
ಇದನ್ನೂ ಓದಿ :BBK12: ಕಿಚ್ಚನ ಜೊತೆ ಮಾಳು ಮನವಿ ಮಾಡಿದ್ದು ನಾಟಕೀಯವಾಗಿತ್ತಾ..?
…..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=MjdrEqd9L9xZirpC











