ಬ್ರೇಕಿಂಗ್ ನ್ಯೂಸ್
ದೇಶ

ಮಸೀದಿ ಭೂಮಿಯಲ್ಲಿ ಹಿಂದೂ ದೇವರ ವಿಗ್ರಹ ಪತ್ತೆ : ಅಹಿತರ ಘಟನೆ ನಡೆಯದಂತೆ ಎಚ್ಚರಿಕೆ..!

ಮಧ್ಯಪ್ರದೇಶ : Tulu Times ಮಸೀದಿ ಉತ್ಖನನ ವೇಳೆ ರಾಮ ಸೀತಾ ವಿಗ್ರಹವು ಪತ್ತೆಯಾಗಿರುವ ಘಟನೆಯು ಮಧ್ಯಪ್ರದೇಶದ ಸಾಗರ್ ಪ್ರದೇಶದಲ್ಲಿ ಕಂಡುಬಂದಿದೆ. ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು ಎಂದು ಹಿಂದೂ ಸಮುದಾಯವು ಆ ದೇವಾಲಯಕ್ಕೆ ನಿರ್ಮಾಣಕ್ಕೆ ಆಗ್ರಹಿಸಿತು ಎಂದು ಕೂಡ ಹೇಳಲಾಗಿದೆ.

ಪುರಾತತ್ವ ಇಲಾಖೆಗೆ ತಕ್ಷಣ ಮಾಹಿತಿ ;

ಈ ಸಂದರ್ಭ ಹಿಂದೂ ಮುಖಂಡರು ಉತ್ಖನನ ವೇಳೆ ಸಿಕ್ಕಿದ ವಿಗ್ರಹಕ್ಕೆ ಪೂಜೆ ಸಲ್ಲಿಸಲು ವೇದಿಕೆ ನಿರ್ಮಿಸಿದ್ದು, ಇದಕ್ಕೆ ಮುಸ್ಲಿಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಯೋಜನೆಗೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆಯಿಂದ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ಥಳಕ್ಕೆ ನಿರ್ಮಾಣದ ಸಂಘಟನೆಗಳ ಕಾರ್ಯಕರ್ತರು ಮತ್ತು ಸ್ಥಳೀಯ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.

ಮಸೀದಿಯಲ್ಲಿ ವಿಗ್ರಹಗಳು ಸಿಕ್ಕ ಸ್ಥಳಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ ಅಲ್ಲಿನ ಡಿವೈಎಸ್ಪಿ ಸೇರಿದಂತೆ ಭಾರೀ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿ ಭದ್ರತೆಯನ್ನು ಕೂಡ ಕಲ್ಪಿಸಿತು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಪೊಲೀಸರು ಪುರಾತತ್ವ ಇಲಾಖೆಗೆ ತಕ್ಷಣ ಮಾಹಿತಿಯನ್ನು ನೀಡಿ ಅಧಿಕಾರಿಗಳನ್ನು ಕರೆಸಿದರು. ವಿಗ್ರಹಗಳನ್ನು ಪೊಲೀಸ್ ಕಸ್ಟಡಿಗೆ ವಶಪಡಿಸಿಕೊಳ್ಳಲಾಗಿದ್ದು, ಪುರಾತತ್ವ ತಜ್ಞರು ಆಗಮಿಸಿ ತಪಾಸಣೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಈ ಭೂಮಿಯನ್ನು ಸುಮಾರು 200 ವರ್ಷಗಳ ಹಿಂದೆಯೇ ಮಸೀದಿಗೆ ದಾನವಾಗಿ ನೀಡಲಾಗಿತ್ತು ;

ವಿಗ್ರಹಗಳ ಇತಿಹಾಸ ಅದರ ಮಹತ್ವದ ಮತ್ತು ಮಾಲೀಕತ್ವವನ್ನು ತನಿಖೆ ಮಾಡಿ ಅದು ಎಷ್ಟು ವರ್ಷ ಹಳೆಯದ್ದು ಹಾಗೂ ಅದರ ಇತಿಹಾಸವನ್ನು ತಿಳಿಯಲು ಆಡಳಿತ ಮೂಲಗಳು ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಪಾಪೆಟ್ ಗ್ರಾಮದ ಮಸೀದಿ ಸಮುದಾಯದ ಸಗೀರ್ ಖಾನ್ ಮಾತನಾಡಿ, ಇದು ಕೇವಲ ಚಾಂದೇಲಿ ಕಲ್ಲುಗಳು. ಹತ್ತಿರದ ಕಲ್ಲುಗಣಿಗಳಿಂದ ತಂದಿರಬಹುದು. ಯಾವುದೇ ವಿಗ್ರಹಗಳು ಇರಲಿಲ್ಲ ಈ ಭೂಮಿಯನ್ನು ಸುಮಾರು 200 ವರ್ಷಗಳ ಹಿಂದೆಯೇ ಮಸೀದಿಗೆ ದಾನವಾಗಿ ನೀಡಲಾಗಿತ್ತು. ಈಗ ಕೆಲವರು ಆವರಣದಲ್ಲಿ ಕಲ್ಲುಗಳನ್ನ ಇಟ್ಟು ಪೂಜೆ ಮಾಡುತ್ತಿದ್ದಾರೆ ಇದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ಕೂಡ ಆಗ್ರಹಿಸಿದರು. ಇಲ್ಲಿ ಎರಡೂ ಸಮುದಾಯದ ಗೊಂದಲಗಳು ಮುಂದೆ ವೈಶಮ್ಯಕ್ಕೆ ಕಾರಣವಾಗಬಾರದೆಂಬ‌ ನೆಲೆಯಿಂದ ಬಹಳ ನಾಜೂಕಿನ‌ ತನಿಖೆಯಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾಗುತ್ತದೆ.

Idol of Hindu God found on mosque land: Warning against untoward incident – ತುಳು ಟೈಮ್ಸ್

ಇದನ್ನೂ ಓದಿ :ದೇಶದ ಮೀನು ಉತ್ಪಾದನೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ : ಸಿ ಎಂ ಸಿದ್ಧರಾಮಯ್ಯ

 

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=U42XMUvT9of7QRAN

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 22

You cannot copy content of this page