ಸುಳ್ಯ: Tulu Times l ಜೇಸಿಐ ಸುಳ್ಯ ಸಿಟಿ ಹಾಗೂ ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಟ್, ಗ್ಲೋಬಲ್ ಕಂಪ್ಯೂಟರ್ & ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆ ಮತ್ತು ಕಲರ್ಸ್ ಗಾರ್ಮೆಂಟ್ಸ್ ಹೊಲಿಗೆ ತರಬೇತಿ ಕೇಂದ್ರದ ಸಹಯೋಗದಲ್ಲಿ ಆ.15ರಂದು ಸುಳ್ಯದಲ್ಲಿ ‘ಆಟಿ ಕೂಟ’ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.15ರಂದು ಶನಿವಾರ ಬೆಳಗ್ಗೆ 11 ಗಂಟೆಯಿಂದ ಅಂಬಟೆಡ್ಕದ ವರ್ತಕರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷೆ JFM ನಾಗವೇಣಿ ದಾಮೋದರ ಕೋರಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಪ್ರಗತಿಪರ ಕೃಷಿಕರಾದ ಯಶವಂತ ಕುಡೆಕಲ್ಲು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಲಯ 15, ಜೇಸಿಐ ಭಾರತದ ರಕ್ತದಾನ ವಿಭಾಗದ ವಲಯ ಸಂಯೋಜಕರಾದ ಜೆಸಿ ಪ್ರದೀಪ್ ಕುಮಾರ್ ರೈ ಹಾಗೂ B2B ವಿಭಾಗದ ವಲಯ ಸಂಯೋಜಕರಾದ HGF ವಿಷ್ಣುಪ್ರಕಾಶ್ ನಾರ್ಕೋಡು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಜೇಸಿಐ ಸುಳ್ಯ ಸಿಟಿಯ ಕಾರ್ಯದರ್ಶಿ ಜೆಸಿ ತೇಜಸ್ವಿ ಪ್ರಕಾಶ್ ನಾರ್ಕೋಡು ಸ್ವಾಗತ ಕೋರಲಿದ್ದಾರೆ. ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷರು, ಪೂರ್ವಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದ ಆಯೋಜನೆಯಲ್ಲಿ ಭಾಗಿಯಾಗಿದ್ದಾರೆ.

ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಟ್‌ನ ವ್ಯವಸ್ಥಾಪಕ ಜೆಸಿ ವಿನಯ್ ರಾಜ್ ಮಡ್ತಿಲ, ಗ್ಲೋಬಲ್ ಕಂಪ್ಯೂಟರ್ & ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕಿ ಜೆಸಿ ತೇಜಾಕ್ಷಿ ನಂದಕುಮಾರ್ ಹಾಗೂ ಕಲರ್ಸ್ ಗಾರ್ಮೆಂಟ್ಸ್ ಹೊಲಿಗೆ ತರಬೇತಿ ಕೇಂದ್ರದ ವ್ಯವಸ್ಥಾಪಕಿ ರಜನಿ ಶುಭಕರ್ ಕಾರ್ಯಕ್ರಮದ ಸಹಯೋಜಕರಾಗಿದ್ದಾರೆ. ಆಟಿ ತಿಂಗಳು ತುಳುನಾಡಿನ ಜನಜೀವನದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಈ ಸಂದರ್ಭದಲ್ಲಿ ನಡೆಯುವ ಆಟಿ ಕೂಟಗಳು ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ, ಜಾನಪದ ಕಲೆ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಪರಿಚಯಿಸುವ ವೇದಿಕೆಯಾಗಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನತೆ ಹಾಗೂ ಮುಂದಿನ ಪೀಳಿಗೆಗೆ ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಪ್ರಯತ್ನವೂ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಆಟಿ ಗಮ್ಮತ್‌ನ ವಿಶೇಷ ಅನುಭವ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಿ ಕೂಟದ ಸವಿಯನ್ನು ಅನುಭವಿಸುವಂತೆ ಜೇಸಿಐ ಸುಳ್ಯ ಸಿಟಿ ಹಾಗೂ ಸಹಯೋಜಕರು ಮನವಿ ಮಾಡಿದ್ದಾರೆ.
Sullia: ‘Aati Koota’ on August 15 in collaboration with JCI Sullia City. – ತುಳು ಟೈಮ್ಸ್
ಇದನ್ನೂ ಓದಿ : ಆಟಿ ಅಮಾವಾಸ್ಯೆ: ತುಳುನಾಡಿನ ಸಂಪ್ರದಾಯದಲ್ಲಿ ಹಾಲೆಮರದ ಕಷಾಯಕ್ಕೆ ವಿಶೇಷ ಮಹತ್ವ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w











