ಬ್ರೇಕಿಂಗ್ ನ್ಯೂಸ್
ಕರ್ನಾಟಕ

Dasara Festival: KSRTC ಯಿಂದ ದಸರಾ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ!

Dasara Festival: KSRTC ಯಿಂದ ದಸರಾ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ!: KSRTC  ಬಸ್ ನಲ್ಲಿ ಪ್ರಯಾಣಿಸಿ ದಸರಾ ವೀಕ್ಷಿಸಿ ಸಂಭ್ರಮಿಸಲು ಸಜ್ಜಾಗುತ್ತಿರುವ ಪ್ರಯಾಣಿಕರಿಗೆ KSRTC  ಶಾಕ್‌ ನೀಡಿದೆ. ದಿಢೀರನೆ ಬಸ್‌ ದರ ಏರಿಸಿ ಖಜಾನೆ ತುಂಬಿಸಿಕೊಳ್ಳುವ ಪ್ಲಾನ್‌ ಮಾಡಿದೆ. ಪ್ರತಿ ಪರ್ಷವೂ ದಸರಾ ಹಬ್ಬದ ಸಂದರ್ಭದಲ್ಲಿ ದರ ಏರಿಕೆ ಮಾಡುವುದು KSRTCಗೆ ಅಭ್ಯಾಸವಾಗಿ ಬಿಟ್ಟಿದೆ. ಅದರಂತೆ ಈ ಬಾರಿ ಟಿಕೆಟ್‌ ನ ಬೆಲೆಯನ್ನು 20 ರೂ ಹೆಚ್ಚಳ ಮಾಡಿದೆ. ಈ ಮೂಲಕ ನಾಡ ಹಬ್ಬ ದಸರಾ ನೋಡಲು ಹೊರಟ ಪ್ರಯಾಣಿಕರಿಗೆ KSRTC ಟಿಕೆಟ್‌ ದರ ಏರಿಕೆಯ ಬಿಸಿ ಮುಟ್ಟಿಸಿದೆ.

ದಸರಾ ವಿಶೇಷ ಬಸ್ಸ್‌ ಗಳ ಟಿಕೆಟ್‌ ದರವನ್ನು ಹೆಚ್ಚಿಸಿರುವ ಬಗ್ಗೆ ಕೆಎಸ್‌ಆರ್ ಟಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ರಾಜಹಂಸ, ಐರಾವತ, ವೇಗದೂತ, ತಡೆರಹಿತ ಸೇರಿದಂತೆ ನಾಡಹಬ್ಬ ದಸರಾಕ್ಕೆ ತೆರಳುವ ಎಲ್ಲಾ ಬಸ್‌ಗಳ ಮೇಲೆ ಟಿಕೆಟ್‌ ದರವನ್ನು ಹೆಚ್ಚಳ ಮಾಡಿರುವುದು ಅಧಿಕೃತ ಪ್ರಕಟಣೆಯಲ್ಲಿ ತಿಳಿದು ಬಂದಿದೆ. ದಸರಾ ವೀಕ್ಷಿಸಲು ಉತ್ಸಾಹದಲ್ಲಿ ಹೊರಟ ಪ್ರಯಾಣಿಕರಿಗೆ ಕೆಎಸ್‌ಆರ್ ಟಿಸಿಯ ದರ ಹೆಚ್ಚಳ ಬೇಸರ ಮೂಡಿಸಿದೆ.

ಬದಲಾದ ಟಿಕೆಟ್‌ ದರ ಇಂತಿದೆ:

ವೇಗದೂತ ರೂ 170 ರಿಂದ 190 ಕ್ಕೆ ಏರಿಕೆಗೊಂಡಿದೆ.

ತಡೆರಹಿತ ಬಸ್‌ಗಳ ದರ ರೂ 210 ರಿಂದ 240 ಕ್ಕೆ30 ರೂ ಗಳ ಏರಿಕೆಯನ್ನು ಕಂಡಿದೆ.

ರಾಜಹಂಸ ರೂ 270 ರಿಂದ ರೂ 290 ಕ್ಕೆ ಏರಿಕೆ ಕಂಡಿದೆ.

ಏರಾವತ ರೂ 430 ರಿಂದ 450 ಕ್ಕೆ ಏರಿಕೆ.

ಏರಾವತ ಕ್ಲಬ್‌ ಕ್ಲಾಸ್‌ ರೂ 440ರಿಂದ 460 ಕ್ಕೆ ಏರಿಕೆ.

ಹೀಗೆ ಸಡನ್ನಾಗಿ ದರ ಏರಿಸಿರುವ ಸರ್ಕಾರದ ಕ್ರಮದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಸರಾ ಹಬ್ಬವನ್ನು ಸಂಭ್ರಮಿಸಲು ಬಿಡುತ್ತಿಲ್ಲ ಎಂದು ಸರ್ಕಾರದ ಆದೇಶವನ್ನು ಖಂಡಿಸಿದ್ದಾರೆ.

ಇದನ್ನು ಓದಿ: RBI ಗೆ ಉಪ ಗವರ್ನರ್‌ ಆಗಿ ಶಿರಿಶ್‌ ಚಂದ್ರ ಮುರ್ಮ ನೇಮಕ

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page