ಬ್ರೇಕಿಂಗ್ ನ್ಯೂಸ್
ಮಂಗಳೂರು

ಮಲ್ಪೆಯಲ್ಲಿ ಜಲಕ್ರೀಡೆ ನಿಷೇಧ : ನಾಲ್ಕು ತಿಂಗಳು ಈ ದ್ವೀಪಕ್ಕೆ ಪ್ರವೇಶ ಬಂದ್

ಉಡುಪಿ : Tulu Times l ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಮತ್ತು ಸೇಂಟ್ ಮೇರಿಸ್ ದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಮುಂಗಾರು ಹಿನ್ನಲೆ ಸುರಕ್ಷತಾ ಕಾರಣಗಳಿಂದ ಮೇ 16ರಿಂದ ಸೆಪ್ಟೆಂಬರ್ 15ರವರೆಗೆ ದೋಣಿ ಸೇವೆ ಮತ್ತು ಜಲ ಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತ ನಿಷೇಧಿಸಿದೆ. ಸಮುದ್ರದಲ್ಲಿ ಮುಂಗಾರು ಅವಧಿಯಲ್ಲಿ ಅಲೆಗಳ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟು ಈ ಕ್ರಮ ಕೈಗೊಳ್ಳಲಾಗಿದೆ. ಹಾರ್ಬರ್ ಕ್ರಾಪ್ಟ್ ರೂಲ್ಸ್ 1963 ಪ್ರಕಾರ, ಮೇ 16ರಿಂದ ಸೆಪ್ಟೆಂಬರ್ 15ರವರೆಗೆ “ಅಪಾಯಕಾರಿ ಹವಾಮಾನ ಅವಧಿ ಎಂದು ಘೋಷಿಸಲಾಗಿದ್ದು, ಪಶ್ಚಿಮ ಕರಾವಳಿಯ ಸಮುದ್ರ ಚಟುವಟಿಕೆಗಳನ್ನು ಈ ಅವಧಿಯಲ್ಲಿ ಸ್ಥಗಿತಗೊಳಿಸಲಾಗುತ್ತದೆ.

ಮುಂಗಾರು ಆರಂಭಕ್ಕೂ ಮುನ್ನವೇ ನಿರ್ಬಂಧ ಜಾರಿಗೆ ಬಂದಿರುವುದರಿಂದ ಈಗಾಗಲೇ ಪ್ರವಾಸ ಯೋಜನೆ ರೂಪಿಸಿದ್ದ ಹಲವಾರು ಪ್ರವಾಸಿಗರು ನಿರಾಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ನಾಲ್ಕು ತಿಂಗಳು ಸೇಂಟ್ ಮೇರೀಸ್ ದ್ವೀಪಕ್ಕೆ ದೋಣಿ ಸಂಚಾರ ಸಂಪೂರ್ಣ ಸ್ಥಗಿತವಾಗಲಿದ್ದು, ಮಲ್ಪೆ ಬೀಚ್‌ನಲ್ಲಿ ನಡೆಯುತ್ತಿದ್ದ ಜಲ ಸಾಹಸ ಕ್ರೀಡೆಗಳಿಗೂ ಬ್ರೇಕ್ ಬಿದ್ದಿದೆ.

ಪ್ರವಾಸೋದ್ಯಮ ವಲಯದವರ ಪ್ರಕಾರ, ಈ ವರ್ಷ ತೀವ್ರ ಬೇಸಿಗೆಯ ಕಾರಣದಿಂದಲೇ ಸೇಂಟ್ ಮೇರೀಸ್ ದ್ವೀಪಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿತ್ತು. ಉರಿ ಬಿಸಿಲಿನ ನಡುವೆ ಅನೇಕ ಪ್ರವಾಸಿಗರು ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಜೊತೆಗೆ ಯುದ್ಧದಂತಹ ಪರಿಸ್ಥಿತಿ ಹಾಗೂ ಅಡುಗೆ ಅನಿಲ ಪೂರೈಕೆ ವ್ಯತ್ಯಯದ ಆತಂಕವೂ ಕೆಲವು ಕುಟುಂಬಗಳ ಪ್ರವಾಸ ಯೋಜನೆಗೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಆದರೆ ಹವಾಮಾನ ಅನುಕೂಲಕರವಾಗಿದ್ದರೆ ಪ್ರವಾಸಿಗರಿಗೆ ಕಡಲತೀರದ ಅಲ್ಪ ಆಳದ ನೀರಿಗೆ ಇಳಿಯಲು ಅವಕಾಶ ನೀಡಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ದೋಣಿ ಸೇವೆ ಮತ್ತು ಸಾಹಸ ಕ್ರೀಡೆಗಳು ಸೆಪ್ಟೆಂಬರ್ 15ರವರೆಗೆ ಸಂಪೂರ್ಣ ನಿಷೇಧವಾಗಿರುತ್ತವೆ. ಸಮುದ್ರ ಅಲೆಗಳ ತೀವ್ರತೆ ಹೆಚ್ಚಾದ ಬಳಿಕ ಕಡಲ ತೀರದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಆ ನಂತರ ಸಮುದ್ರ ನೀರಿಗೆ ಇಳಿಯುವುದನ್ನೂ ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

Water sports banned in Malpe: Entry to this island closed for four months – ತುಳುಟೈಮ್ಸ್

ಇದನ್ನೂ ಓದಿ :ಬಾಸುಮ ಕೊಡಗು ನಿರ್ದೇಶನದ ಹೊಸ ಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ : ಆರ್ಯವರ್ಧನ್ ಗುರೂಜಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=UTP3KF9ixeTHKtsR

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page