ಬ್ರೇಕಿಂಗ್ ನ್ಯೂಸ್
ಕರ್ನಾಟಕ

Gossip: ಡಿವೋರ್ಸ್‌ ರೂಮರ್ಸ್‌ಗೆ ಫುಲ್‌ ಸ್ಟಾಪ್‌ ಇಟ್ಟ ಮುರುಗ ಇಶಿತಾ ಜೋಡಿ..!

Gossip: ಇತ್ತೀಚೆಗೆ ಸಿನಿಮಾ ರಂಗದಲ್ಲಿ ಡಿವೋರ್ಸ್‌ ಕೇಸ್‌ ಗಳು ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ಕೆಲವು ತಿಂಗಳಿನಿಂದ ಕೇಳಿಬರುತ್ತಿದ್ದ ಮುರುಗ ಇಶಿತಾ ಡಿವೋರ್ಸ್‌ ಕಥಗೆ ಇಬ್ಬರು ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ತಮ್ಮ ಮದುವೆಯ ವಾರ್ಷಿಕೋತ್ಸವದ ಫೋಟೋ ಶೇರ್‌ ಮಾಡಿಕೊಂಡು ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಮುದ್ದಾದ ಫೋಟೋ ಶೇರ್‌ ಮಾಡಿಕೊಂಡ ಕಪಲ್ಸ್..!

ಆನಿವರ್ಸರಿಗೆ ಸ್ಪೆಷಲ್ ಫೋಟೊ ಶೇರ್ ಮಾಡಿರುವ ಕಪಲ್ಸ್‌, ಸೋಷಿಯಲ್‌ ಮೀಡಿಯಾದಲ್ಲಿ ಯಾವತ್ತೂ ಬಹಳ ಆಕ್ಟೀವ್‌ ಆಗಿರುತ್ತಾರೆ. ಕೊರಿಯೋಗ್ರಫರ್ ಮುರುಗನಂದ ಮತ್ತು ನಟಿ ಇಶಿತಾ ವರ್ಷ ಇತ್ತೀಚೆಗೆ ತಮ್ಮ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿಕೊಂಡು, ತಮ್ಮ ಡಿವೋರ್ಸ್ ರೂಮರ್ಸ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಇಶಿತಾ ವರ್ಷ ಹಾಗೂ ಡ್ಯಾನ್ಸ್ ಕೊರಿಯೋಗ್ರಫರ್ ಮುರುಗಾನಂದ ಪ್ರೀತಿಸಿ ಮದುವೆಯಾದ  ಜೋಡಿ. ಕೆಲವು ದಿನಗಳಿಂದ ಇಬ್ಬರೂ ಕೂಡ ವೀಡಿಯೋ ಮಾಡುವುದನ್ನು ಬಿಟ್ಟಿದ್ದರು.  ಇದನ್ನು ಗಮನಿಸಿದ ಜನ ಇಬ್ಬರಿಗೂ ಡಿವೋರ್ಸ್‌ ಆಗಿರಬೇಕು ಎಂದು ಅಂದುಕೊಂಡು ಕಾಮೆಂಟ್ಸ್‌ ಮಾಡುತ್ತಿದ್ದರು. ಇದೀಗ ತಮ್ಮ ಆರನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದು, ಮುರುಗಾ ಇಬ್ಬರ ಮುದ್ದಾದ ಫೋಟೊಗಳು ಶೇರ್‌ ಆಗಿವೆ.  ಕೋರಿಯೋಗ್ರಾಫರ್‌  ಮುರುಗಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಇಶಿತಾ ಜೊತೆಯಲ್ಲಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡು, Wish you Happy wedding anniversary my dear wifey ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಪರ್ಸನಲ್‌ ಮ್ಯಾಟರ್‌ ಶೇರ್‌ ಮಾಡಿಕೊಳ್ಳಲ್ಲ!

ಇದೀಗ ಮುರುಗಾ ಎಲ್ಲಾ ಊಹಾಪೋಹಗಳಿಗೆ ತಮ್ಮ ಹೊಸ ಫೋಟೊ ಶೂಟ್ ಮೂಲಕ ಉತ್ತರ ನೀಡಿದ್ದಾರೆ. ನಟಿ ಇಶಿತಾ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ತಮ್ಮ ವೈವಾಹಿಕ ಜೀವನದ ಪರ್ಸನಲ್ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ತಮ್ಮ ಗಂಡ ಮುರುಗಾ ಫೋಟೊಗಳಿಗೆ ಉತ್ತರಿಸೋದು ಇಲ್ಲ. ಹಾಗಾಗಿ ಜನರಿಗೆ ಇವರಿಬ್ಬರ ಸಂಬಂಧ ಸರಿಯಾಗಿಲ್ಲ ಎಂಬ ಡೌಟ್‌ ಇತ್ತು.  ಮುರುಗಾ ಕೂಡ ಅವರ ಕರಿಯರ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳುವ ಬಗ್ಗೆ ಈ ಹಿಂದೆ ಮಾತನಾಡಿದ್ದು, ತಮಗೆ ಪರ್ಸನಲ್ ಲೈಫ್ ಪರ್ಸನಲ್ ಆಗಿಡೋದಕ್ಕೇನೆ ಇಷ್ಟ ಎಂದಿದ್ದರು. ಇದೀಗ ಹಲವಾರು ಸಮಯದ ಬಳಿಕ ಇಶಿತಾ ಮತ್ತು ಮುರುಗಾ ಅವರು ಜೊತೆಯಾಗಿರುವ ಫೋಟೋಗಳನ್ನು ನೊಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 209

You cannot copy content of this page