ಕರ್ನಾಟಕ : Tulu Times l ಕರ್ನಾಟಕದಲ್ಲಿ ಈ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶಗಳು ಇತಿಹಾಸ ನಿರ್ಮಿಸಿವೆ. ಒಟ್ಟು 94.10% ಪಾಸ್ ಪ್ರಮಾಣ ದಾಖಲಾಗಿ, ಇದುವರೆಗೆ ಕಂಡ ಅತ್ಯುತ್ತಮ ಫಲಿತಾಂಶವೆಂದು ಘೋಷಿಸಲಾಗಿದೆ.
ಈ ವರ್ಷ ಒಟ್ಟು 8,65,988 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನೋಂದಾಯಿಸಿಕೊಂಡಿದ್ದು, 4,44,172 ಹುಡುಗರು, 4,21,816 ಹುಡುಗಿಯರು, ರಾಜ್ಯದಾದ್ಯಂತ 2,870 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.ಇವರಲ್ಲಿ 7,70,209 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,24,794 ಮಂದಿ ಉತ್ತೀರ್ಣರಾಗಿದ್ದಾರೆ.
ಮೂರನೇ ಭಾಷೆಯಲ್ಲಿ ಭರ್ಜರಿ ಸಾಧನೆ;
ಮೂರನೇ ಭಾಷಾ ವಿಷಯದಲ್ಲಿ 98.55% ಪಾಸ್ ಪ್ರಮಾಣ ದಾಖಲಾಗಿದೆ. 7,69,751 ವಿದ್ಯಾರ್ಥಿಗಳು ಹಾಜರಾಗಿದ್ದು, 7,58,623 ಮಂದಿ ಪಾಸ್ ಆಗಿದ್ದಾರೆ. ಈ ವರ್ಷ 7 ವಿದ್ಯಾರ್ಥಿಗಳು 625/625 ಪೂರ್ಣ ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ಇದಲ್ಲದೆ,
21 ವಿದ್ಯಾರ್ಥಿಗಳು – 624 ಅಂಕ
28 ವಿದ್ಯಾರ್ಥಿಗಳು – 623 ಅಂಕ
74 ವಿದ್ಯಾರ್ಥಿಗಳು – 622 ಅಂಕ
98 ವಿದ್ಯಾರ್ಥಿಗಳು – 621 ಅಂಕ
150 ವಿದ್ಯಾರ್ಥಿಗಳು – 620 ಅಂಕ
ಜಿಲ್ಲಾವಾರು ಫಲಿತಾಂಶ;
ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದರೆ, ಉಡುಪಿ ಎರಡನೇ ಸ್ಥಾನ ಪಡೆದಿದೆ. ಕಲಬುರ್ಗಿ ಕಡಿಮೆ ಫಲಿತಾಂಶ ದಾಖಲಿಸಿದೆ. ಈ ವರ್ಷದ ಪ್ರಮುಖ ವಿಶೇಷವೆಂದರೆ ಗ್ರಾಮೀಣ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳನ್ನು ಮೀರಿಸಿ ಸಾಧನೆ ಮಾಡಿರುವುದು. ಇದು ಶಿಕ್ಷಣ ಕ್ಷೇತ್ರದಲ್ಲಿ ಸಮತೋಲನದ ಬೆಳವಣಿಗೆಗೆ ಸೂಚಕವಾಗಿದೆ.
History-making results, achievements of rural students – ತುಳುಟೈಮ್ಸ್
ಇದನ್ನೂ ಓದಿ :ಕನ್ಯಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ನವ ಜೋಡಿಗಳು
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=jObOmQAemFrQ7vb0











