ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯ: ಉಬರಡ್ಕ, ಯಕ್ಷ ಪ್ರಶಸ್ತಿ ಪ್ರದಾನ 125ನೇ ಯಕ್ಷಗಾನ ತಾಳಮದ್ದಳೆ

ಸುಳ್ಯ: ಸುಳ್ಯ ತಾಲೂಕಿನ ಉಬರಡ್ಕದ ಕೊಂಬೋಟು ತರವಾಡು ಮನೆಯಲ್ಲಿ ಕೀರ್ತಿಶೇಷ ನೀಲಾವತಿ ಮತ್ತು ಪದ್ಮನಾಭ ದಂಪತಿಗಳ 3ನೇ ವರ್ಷದ ಸಂಸ್ಮರಣೆಯ ಅಂಗವಾಗಿ ನೀಲಪದ್ಮ ಯಕ್ಷ ಪ್ರಶಸ್ತಿ ಪ್ರದಾನ ಮತ್ತು ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನದ 125ನೇ ಮಹಾಭಾರತ ಸರಣಿ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಯಕ್ಷ ನಾಟ್ಯಗುರು ಬಿ.ನಾರಾಯಣ ಭಟ್ಟ ಅವರಿಗೆ ನೀಲಪದ್ಮ ಯಕ್ಷ ಪ್ರಶಸ್ತಿ – 2026 ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸಂಯೋಜಕರಾದ ಶ್ರೀಧರ ಎಸ್.ಪಿ. ಕೃಷ್ಣಾಪುರ ಅವರು ನಾಟ್ಯಗುರುಗಳ ಸೇವೆಯನ್ನು ಸ್ಮರಿಸಿ ಅಭಿನಂದನಾ ನುಡಿಗಳನ್ನಾಡಿದರು.

ಯಕ್ಷ ಇತಿಹಾಸದಲ್ಲಿ ದಾಖಲೆಯ 125ನೇ  ಸರಣಿ ತಾಳಮದ್ದಳೆ

ಸಂಸ್ಮರಣೆಯ ಅಂಗವಾಗಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನ (ರಿ.) ಉಪ್ಪಿನಂಗಡಿ*ಯವರಿಂದ ಶ್ರೀ ಮಹಾಭಾರತ ಸರಣಿಯ 125ನೇ ಕಾರ್ಯಕ್ರಮವಾಗಿ *”ರತಿ ಕಲ್ಯಾಣ” ತಾಳಮದ್ದಳೆ ಪ್ರದರ್ಶನಗೊಂಡಿತು. ಯಕ್ಷಗಾನದ ಇತಿಹಾಸದಲ್ಲಿಯೇ ಒಂದು ಸರಣಿಯಲ್ಲಿ 125 ತಾಳಮದ್ದಳೆ ನಡೆಸಿದ ದಾಖಲೆಯ ಕಾರ್ಯಕ್ರಮವಾಗಿ ಇದು ಮೂಡಿಬಂದಿತು.

ಅರ್ಥಧಾರಿಗಳು: 
ಕಮಲ ಭೂಪಾನಾಗಿ ಜಬ್ಬಾರ್ ಸಮೊ, ಸಂಪಾಜೆ, ಕೌoಡ್ಲಿಕನಾಗಿ ಗುಡ್ಡಪ್ಪ ಬಲ್ಯ, ದ್ರೌಪದಿಯಾಗಿ ಅಂಬಾ ಪ್ರಸಾದ ಪಾತಾಳ, ಶ್ರೀ ಕೃಷ್ಣನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ದ್ವಾರಪಾಲಕನಾಗಿ ಮಹೇಶ್ ಮಣಿಯಾಣಿ, ರತಿಯಾಗಿ ಶ್ರೀಮತಿ ಗೀತಾ ಬಿ.ಕೆ, ಮೇಘಸ್ತನಿಯಾಗಿ ಶ್ರೀಮತಿ ಶ್ರುತಿ, ಭೀಮಸೇನನಾಗಿ ಜಯರಾಮ ಬಲ್ಯ, ಅರ್ಜುನನಾಗಿ ಶ್ರೀಧರ ಎಸ್.ಪಿ. ಕೃಷ್ಣಾಪುರ, ಮನ್ಮಥನಾಗಿ ದೇವದಾಸ ಎಸ್.ಪಿ ಅವರುಗಳು ಅರ್ಥಗಾರಿಕೆಯಿಂದ ಪ್ರೇಕ್ಷಕರನ್ನು ರಂಜಿಸಿದರು.

ಹಿಮ್ಮೇಳ: 
ಭಾಗವತಿಕೆಯಲ್ಲಿ ಶ್ರೀ ಪದ್ಮನಾಭ ಕುಲಾಲ್ ಇಳಂತಿಲ, ಸಂತೋಷ್ ಕುಮಾರ್, ಸತೀಶ್ ಆಚಾರ್ಯ ವೀರಕಂಬ ಮತ್ತು ಚಂಡೆ-ಮದ್ದಳೆಯಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಅವರು ಸಹಕರಿಸಿದರು.

ಭಾಗವಹಿಸಿದ ಕಲಾವಿದರನ್ನು  ಕುಟುಂಬಿಕರ ಪರವಾಗಿ ನಾಗೇಶ್ ಕೇರ್ಪಳ, ಮಹೇಶ್ ಮಾಣಿ, ಶೇಷಪ್ಪ, ಬಾಬಣ್ಣ, ಕರಿಯಪ್ಪ, ದೇವದಾಸ್ ಹರಿಹರ, ಶ್ರೀಧರ ಎಸ್.ಪಿ, ಪವಿತ್ರಾಕ್ಷಿ ಮೊದಲಾದವರು ಫಲ-ಪುಷ್ಪ ನೀಡಿ, ಶಾಲು ಹೊದಿಸಿ ಗೌರವಿಸಿದರು.ಯಕ್ಷ ಕಲೆಯ ಪೋಷಣೆಗೆ ಕೊಂಬೋಟು ಕುಟುಂಬದ ಈ ಕಾರ್ಯಕ್ರಮ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.

Sullia: Ubaradka – Yaksha Award presentation and 125th Yakshagana Talamaddale.tulutimes 

Read more:ನಾಗರ ಪಂಚಮಿ 2026: ಸೂರ್ಯ–ಕೇತು ಸಂಯೋಗ; ಈ 4 ರಾಶಿಯವರು ಎಚ್ಚರಿಕೆ ವಹಿಸಬೇಕು…!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page