ಬ್ರೇಕಿಂಗ್ ನ್ಯೂಸ್
ಕ್ರೀಡೆ

ರಬ್ಬರ್ ತೋಟ ಕಿತ್ತು ರಂಬುಟಾನ್ ಬೆಳೆದ ರೈತ: ವರ್ಷಕ್ಕೆ 2 ಕೋಟಿ ಆದಾಯ

ಕೃಷಿ : Tulu Times l ಕೇರಳದ ರೈತ ಪಿ.ಜೆ ಚಾಕೋ ಸಾಂಪ್ರದಾಯಿಕ ರಬ್ಬರ್ ಕೃಷಿಯನ್ನು ಬಿಟ್ಟು ರಾಂಬುಟಾನ್ ಹಾಗೂ ದುರಿಯನ್ ಹಣ್ಣುಗಳ ಬೆಳೆಗಾರಿಕೆಗೆ ತಿರುಗಿ ಇಂದು ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ವಿದೇಶಿ ಹಣ್ಣುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದ ಚಾಕೊ, 2020ರಲ್ಲಿ ತಮ್ಮ 25 ಏಕರೆ ರಬ್ಬರ್ ತೋಟವನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಅದರಲ್ಲಿ ರಂಬುಟಾನ್ ತೋಟ ಹಾಗೂ ಐದು ಎಕರೆಯಲ್ಲಿ ದುರಿಯನ್ ಹಣ್ಣಿನ ಬೆಳೆ ಬೆಳೆದರು. ಇಂದು ಅವರು ರಂಬುಟಾನ್ ಹಣ್ಣು ಮಾರಾಟದಿಂದ ವರ್ಷಕ್ಕೆ ಸುಮಾರು 1 ಕೋಟಿ ರೂ. ಮತ್ತು ಸಸಿಗಳ ನರ್ಸರಿ ವ್ಯವಹಾರದಿಂದ ಪ್ರತ್ಯೇಕ 1 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ.

ನೀರಾವರಿ ಮತ್ತು ರಸಗೊಬ್ಬರ ಬಳಕೆಯೂ ಹೆಚ್ಚು ಪರಿಣಾಮಕಾರಿ ;

1985ರಲ್ಲಿ ಕೃಷಿ ಪದವಿ ಪಡೆದ ಚಾಕೊ ಮೊದಲಿಗೆ ಫೆಡೆರಲ್ ಬ್ಯಾಂಕ್ ನಲ್ಲಿ ಒಂಬತ್ತು ವರ್ಷ ಕೆಲಸ ಮಾಡಿದರು. ಬಳಿಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರೂ ಕೃಷಿಯ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ. ಅವರ ಕುಟುಂಬದ ಏಲಕ್ಕಿ ತೋಟಗಳು ಗರಿಷ್ಠ ಉತ್ಪಾದನೆಗಾಗಿ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದವು. ಇದರಿಂದ ತೋಟ ನಿರ್ವಹಣೆ ಮತ್ತು ಬೆಳೆ ಆರ್ಥಿಕತೆಯ ಬಗ್ಗೆ ಅವರಿಗೆ ಉತ್ತಮ ಅನುಭವ ದೊರಕಿತು. ಸಾಮಾನ್ಯವಾಗಿ ರಂಬುಟಾನ್ ಮರಗಳನ್ನು 40 ಅಡಿ × 40 ಅಡಿ ಅಂತರದಲ್ಲಿ ನೆಡಲಾಗುತ್ತದೆ. ಇದರಿಂದ ಒಂದು ಎಕರೆಯಲ್ಲಿ ಕೇವಲ 30 ರಿಂದ 35 ಮರಗಳನ್ನು ಮಾತ್ರ ಬೆಳೆಸಬಹುದು. ಆದರೆ ಚಾಕೊ ಹೈ-ಡೆನ್ಸಿಟಿ ಫಾರ್ಮಿಂಗ್ ವಿಧಾನ ಅನುಸರಿಸಿದ್ದಾರೆ. ಅವರು 15 ಅಡಿ ಅಂತರದಲ್ಲಿ ಗಿಡಗಳನ್ನು ಮತ್ತು 18 ಅಡಿ ಅಂತರದಲ್ಲಿ ಸಾಲುಗಳನ್ನು ಇಟ್ಟು ನೆಡುವ ಮೂಲಕ ಪ್ರತಿ ಎಕರೆಯಲ್ಲಿ ಸುಮಾರು 160 ಮರಗಳನ್ನು ಬೆಳೆಸುತ್ತಿದ್ದಾರೆ. ಹೆಚ್ಚು ಮರಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಉತ್ಪಾದನೆಯೂ ಹೆಚ್ಚುತ್ತದೆ. ನೀರಾವರಿ ಮತ್ತು ರಸಗೊಬ್ಬರ ಬಳಕೆಯೂ ಹೆಚ್ಚು ಪರಿಣಾಮಕಾರಿಯಾಗುತ್ತದೆ, ಎಂದು ಚಾಕೊ ಹೇಳುತ್ತಾರೆ.

ನಾಲ್ಕು ವರ್ಷಗಳಲ್ಲಿ 12 ಟನ್ ಉತ್ಪಾದನೆ ;

ರಬ್ಬರ್ ತೋಟ ತೆರವು ಮಾಡಿದ ಬಳಿಕ ಅವರು ಕೇರಳ ಮತ್ತು ಮಲೇಷ್ಯಾದಿಂದ ರಂಬುಟಾನ್ ಸಸಿಗಳನ್ನು ತರಿಸಿಕೊಂಡರು. ವಿಶೇಷವಾಗಿ ‘ಎನ್18’ ತಳಿಯನ್ನು ಆಯ್ಕೆ ಮಾಡಿದರು. ಈ ತಳಿ ಸಮಾನ ಗುಣಮಟ್ಟದ ಹಣ್ಣು ಮತ್ತು ಸ್ಥಿರ ಉತ್ಪಾದನೆಗಾಗಿ ಪ್ರಸಿದ್ಧವಾಗಿದೆ. ಪ್ರಸ್ತುತ ಚಾಕೊ ಅವರ ತೋಟದಲ್ಲಿ ಪ್ರತಿಯೊಂದು ಮರವು ಸುಮಾರು 25 ಕೆಜಿ ಹಣ್ಣು ನೀಡುತ್ತಿದೆ. ಇದರಿಂದ ಪ್ರತಿ ಎಕರೆಗೆ ಸುಮಾರು ನಾಲ್ಕು ಟನ್ ಉತ್ಪಾದನೆ ದೊರೆಯುತ್ತಿದೆ. ಮುಂದಿನ ವರ್ಷ ಐದು ಟನ್ ಮತ್ತು ಇನ್ನೂ ನಾಲ್ಕು ವರ್ಷಗಳಲ್ಲಿ 12 ಟನ್ ಉತ್ಪಾದನೆ ನಿರೀಕ್ಷಿಸುತ್ತಿದ್ದಾರೆ. ರಂಬುಟಾನ್ ಮಾರುಕಟ್ಟೆ ಬೆಲೆ ಪ್ರತಿ ಕೆಜಿಗೆ 100 ರೂ. ರಿಂದ ರೂ. 120ರವರೆಗೆ ಇರುವುದರಿಂದ, ಐದನೇ ವರ್ಷದಿಂದ ರೈತರು ಪ್ರತಿ ಏಕರಿಗೆ 4 ಲಕ್ಷದಿಂದ 5 ಲಕ್ಷವರೆಗೆ ಆದಾಯ ಗಳಿಸಬಹುದು ಎಂದು ಅವರು ಹೇಳುತ್ತಾರೆ.

ರಾಂಬುಟಾನ್ ಕೃಷಿಗೆ ಏಕರಿಗೆ ಸುಮಾರು 75,000 ವೆಚ್ಚ ಬರುತ್ತದೆ. ನೀರಾವರಿ, ರಸಗೊಬ್ಬರ ಮತ್ತು ನಿರ್ವಹಣಾ ವೆಚ್ಚಗಳ ಬಳಿಕವೂ ರಬ್ಬರ್ ಬೆಳೆಗಿಂತ ಹೆಚ್ಚು ಲಾಭ ದೊರೆಯುತ್ತದೆ, ಎಂದು ಚಾಕೊ ತಿಳಿಸಿದ್ದಾರೆ. ಕೇರಳದ ತೇವಾಂಶಯುಕ್ತ ಉಷ್ಣವಲಯ ಹವಾಮಾನ ರಂಬುಟಾನ್ ಬೆಳೆಗಾಗಿ ಅತ್ಯಂತ ಸೂಕ್ತವಾಗಿದೆ. ಆದರೆ ಹಣ್ಣು ಹೆಚ್ಚು ದಿನ ತಾಜಾ ಇರದಿರುವುದು ಪ್ರಮುಖ ಸಮಸ್ಯೆಯಾಗಿದೆ. ಕೊಯ್ಲಿನ ಎರಡು ದಿನಗಳಲ್ಲೇ ಹಣ್ಣಿನ ಬಣ್ಣ ಮಂಕಾಗಲು ಆರಂಭಿಸುತ್ತದೆ. ಆದ್ದರಿಂದ ಬಹಳ ಜಾಗರೂಕತೆಯಿಂದ ಸಂಗ್ರಹಿಸಿ ಸಾಗಿಸಬೇಕು, ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಚೆನ್ನೈ, ಬೆಂಗಳೂರು ಮತ್ತು ಮುಂಬೈ ಮುಂತಾದ ನಗರಗಳಿಗೆ ಸ್ಥಳೀಯ ವ್ಯಾಪಾರಿಗಳು ಹಣ್ಣು ಸಾಗಿಸುತ್ತಿದ್ದಾರೆ. ಎಂಟರಿಂದ ಹತ್ತು ಗಂಟೆಗಳೊಳಗೆ ಮಾರುಕಟ್ಟೆ ತಲುಪುವುದರಿಂದ ಹಣ್ಣು ಉತ್ತಮ ಸ್ಥಿತಿಯಲ್ಲೇ ಉಳಿಯುತ್ತದೆ ಎಂದು ಚಾಕೊ ವಿವರಿಸಿದ್ದಾರೆ.

Farmer uproots rubber plantation and grows rambutan: Earns Rs 2 crore per year – ತುಳು ಟೈಮ್ಸ್

ಇದನ್ನೂ ಓದಿ :‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಾಧನೆ: ಏಳನೇ ದಿನದಲ್ಲಿ ರೂ.200 ಕೋಟಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EYKaZkoL8Qk?si=0kWbf0EJ9nWCRuOY

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page