ಸಿನೆಮಾ : Tulu Times l ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ವಿಶ್ವದಾದ್ಯಂತ ₹100 ಕೋಟಿ ಗಳಿಕೆ ಮಾಡುವ ಮೂಲಕ ಈ ಚಿತ್ರ ಮಹಿಳಾ ಪ್ರಧಾನ ಕಥಾಹಂದರ ಹೊಂದಿದ ಮೊದಲ ತೆಲುಗು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂನ್ 19, 2026ರಂದು ಬಿಡುಗಡೆಯಾದ ಈ ಆಕ್ಷನ್–ಕಾಮಿಡಿ ಕುಟುಂಬ ಕಥಾಹಂದರದ ಸಿನಿಮಾ, ಕಳೆದ ವಾರವೇ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿತ್ತು. ಇದೀಗ ₹100 ಕೋಟಿ ಕ್ಲಬ್ ಸೇರಿ ಭಾರತೀಯ ಸಿನಿರಂಗದ ಯಶಸ್ವಿ ಮಹಿಳಾ ಪ್ರಧಾನ ಸಿನಿಮಾಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಚಿತ್ರ ನಿರ್ಮಾಪಕರ ಮಾಹಿತಿ ಪ್ರಕಾರ, ಈ ಸಿನಿಮಾ ತನ್ನ ನಿರ್ಮಾಣ ವೆಚ್ಚಕ್ಕಿಂತ 300 ಪ್ರತಿಶತಕ್ಕೂ ಹೆಚ್ಚು ಲಾಭ ಗಳಿಸಿದೆ.
ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲಿಯೂ ‘ಮಾ ಇಂಟಿ ಬಂಗಾರಂ’ ಉತ್ತಮ ಪ್ರದರ್ಶನ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 2.5 ಮಿಲಿಯನ್ ಅಮೆರಿಕನ್ ಡಾಲರ್ ಗಳಿಕೆ ದಾಖಲಿಸಿದ್ದು, ವಿದೇಶಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಿತ್ರ ಎಂಬ ಹೊಸ ದಾಖಲೆಯನ್ನೂ ನಿರ್ಮಿಸಿದೆ. ಇದರೊಂದಿಗೆ, ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಏಕೈಕ ಮಹಿಳಾ ಪ್ರಧಾನ ಸಿನಿಮಾಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.

ಚಿತ್ರದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಸಮಂತಾ, ಇದು ನಮಗೆ ಕೇವಲ ಒಂದು ಸಂಖ್ಯೆ ಅಲ್ಲ. ಭಾಷೆಯ ಮಿತಿಯನ್ನು ಮೀರಿ ಉತ್ತಮ ಮಹಿಳಾ ಪ್ರಧಾನ ಕಥೆಗಳಿಗೆ ಪ್ರೇಕ್ಷಕರು ಬೆಂಬಲ ನೀಡುತ್ತಾರೆ ಎಂಬುದಕ್ಕೆ ‘ಮಾ ಇಂಟಿ ಬಂಗಾರಂ’ ಸಾಕ್ಷಿಯಾಗಿದೆ, ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದ ನಿರ್ಮಾಪಕ ಹಿಮಾಂಕ್ ರೆಡ್ಡಿ ದುವ್ವೂರು ಮಾತನಾಡಿ, ಮಹಿಳಾ ಪ್ರಧಾನ ಸಿನಿಮಾ ₹100 ಕೋಟಿ ಗಳಿಕೆ ಮಾಡಿರುವುದು ಚಿತ್ರರಂಗಕ್ಕೆ ಮಹತ್ವದ ಮೈಲಿಗಲ್ಲು. ಮುಂದಿನ ದಿನಗಳಲ್ಲಿ ಈ ಸಿನಿಮಾ ನಿರ್ಮಾಣ ಮತ್ತು ಮಾರುಕಟ್ಟೆ ತಂತ್ರಗಳ ಅಧ್ಯಯನದ ಮಾದರಿಯಾಗಲಿದೆ, ಎಂದು ಹೇಳಿದ್ದಾರೆ. ಚಿತ್ರವು ₹100 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಅದರ ಒಟಿಟಿ ಬಿಡುಗಡೆಯ ದಿನಾಂಕವನ್ನೂ ಪ್ರಕಟಿಸಲಾಗಿದೆ. ಜುಲೈ 17ರಿಂದ ಈ ಸಿನಿಮಾ ಜಿಯೋ ಹಾಟ್ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಚಿತ್ರದಲ್ಲಿ ಸಮಂತಾ ಜೊತೆಗೆ ಗುಲ್ಶಾನ್ ದೇವಯ್ಯ, ದಿಗಂತ್, ಗೌತಮಿ, ಶ್ರೀಮುಖಿ ಹಾಗೂ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಭಾವನಾತ್ಮಕ ದೃಶ್ಯಗಳು, ಹಾಸ್ಯ ಮತ್ತು ಸಮಂತಾ ಅವರ ಸಹಜ ಆ್ಯಕ್ಷನ್ ಅಭಿನಯಕ್ಕೆ, ವಿಶೇಷವಾಗಿ ಮಹಿಳಾ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
The highest-grossing female-led film in India – ತುಳುಟೈಮ್ಸ್
ಇದನ್ನೂ ಓದಿ :ಬೋರ್ಡ್ ಪರೀಕ್ಷೆಗೆ ಬದಲಾಗಿ ಮೌಲ್ಯಮಾಪನ ಪರೀಕ್ಷೆ: ಶಿಕ್ಷಣ ಇಲಾಖೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MS_WjTs_Vqo











