ಬ್ರೇಕಿಂಗ್ ನ್ಯೂಸ್
ಕರಾವಳಿ

ನಾಗರ ಪಂಚಮಿಗೆ ಅರಿಶಿನ ಎಲೆ ಕಡುಬು; ಕರಾವಳಿ–ಮಲೆನಾಡಿನ ಸಾಂಪ್ರದಾಯಿಕ ಸಿಹಿ

ಆಹಾರ : Tulu Times l ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಮನೆಮನೆಗಳಲ್ಲಿ ಹಬ್ಬದ ಸಂಭ್ರಮವೂ ಹೆಚ್ಚಾಗುತ್ತದೆ. ಶ್ರಾವಣ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದಿನ ನಾಗದೇವರಿಗೆ ಪೂಜೆ ಸಲ್ಲಿಸಿ, ಹಾಲು ಅರ್ಪಿಸಿ ಕುಟುಂಬದ ಸುಖ–ಸಮೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ.

ನಾಗರ ಪಂಚಮಿ ಎಂದರೆ ಧಾರ್ಮಿಕ ಆಚರಣೆಗಳ ಜತೆಗೆ ವಿಶೇಷ ಸಾಂಪ್ರದಾಯಿಕ ಅಡುಗೆಗಳಿಗೂ ಮಹತ್ವ ನೀಡಲಾಗುತ್ತದೆ. ಎಳ್ಳುಂಡೆ, ಪಂಚಕಜ್ಜಾಯ, ಕಡುಬು ಸೇರಿದಂತೆ ಹಲವು ತಿನಿಸುಗಳನ್ನು ಮನೆಗಳಲ್ಲಿ ತಯಾರಿಸಲಾಗುತ್ತದೆ. ಇವುಗಳ ಪೈಕಿ ಅರಿಶಿನ ಎಲೆ ಕಡುಬು ಕರಾವಳಿ ಹಾಗೂ ಮಲೆನಾಡು ಭಾಗದ ವಿಶೇಷ ಸಾಂಪ್ರದಾಯಿಕ ತಿನಿಸಾಗಿದೆ. ಅರಿಶಿನ ಎಲೆಯಲ್ಲಿ ಆವಿಯಲ್ಲಿ ಬೇಯಿಸುವುದರಿಂದ ಕಡುಬಿಗೆ ವಿಶಿಷ್ಟವಾದ ಪರಿಮಳ ಹಾಗೂ ರುಚಿ ದೊರೆಯುತ್ತದೆ. ಅರಿಶಿನ ಎಲೆಯ ನೈಸರ್ಗಿಕ ಸುವಾಸನೆಯು ಅಕ್ಕಿ ಹಿಟ್ಟಿನೊಂದಿಗೆ ಬೆರೆತು ತಿನಿಸಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಾಗರ ಪಂಚಮಿಯಂದು ಕುಟುಂಬದ ಸದಸ್ಯರೆಲ್ಲರೂ ಸೇರಿ ಈ ಸಾಂಪ್ರದಾಯಿಕ ಕಡುಬನ್ನು ಸವಿಯುವುದು ಹಲವೆಡೆ ವಾಡಿಕೆಯಾಗಿದೆ.

ಈ ಅರಶಿನ ಎಲೆ ಹಿಟ್ಟನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು
* ಬೆಳ್ತಿಗೆ ಅಕ್ಕಿ
* ಅರಿಶಿನ ಎಲೆ
* ತುರಿದ ತೆಂಗಿನಕಾಯಿ
* ಬೆಲ್ಲ
* ಏಲಕ್ಕಿ ಪುಡಿ ಹಾಗೂ ಎಳ್ಳು (ಬೇಕಾದಲ್ಲಿ ಮಾತ್ರ)
* ಉಪ್ಪು

Process to purchase 15,000 new buses set in motion: Transport Minister Byrathi Suresh
Credit to original source

ತಯಾರಿಸುವ ವಿಧಾನ ;
ಮೊದಲು ಅಕ್ಕಿಯನ್ನು 2–3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಬಳಿಕ ನೀರು ಬಸಿದು, ಸ್ವಲ್ಪ ಉಪ್ಪು ಸೇರಿಸಿ ನಯವಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಈ‌ ಹಿಟ್ಟನ್ನು ಸ್ವಲ್ಪ ಮಾದಿಸಿದಂತೆ ಬೇಯಿಸಿಕೊಳ್ಳಬೇಕು.
ನಂತರ ತುರಿದ ತೆಂಗಿನಕಾಯಿ, ಪುಡಿ ಮಾಡಿದ ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಸಿಹಿ ಹೂರಣ ಸಿದ್ಧಪಡಿಸಬೇಕು. ಅರಿಶಿನ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಒರೆಸಿಕೊಳ್ಳಬೇಕು. ಪ್ರತಿ ಎಲೆಯ ಮೇಲೆ ಅಕ್ಕಿ ಹಿಟ್ಟನ್ನು ತೆಳುವಾಗಿ ಹರಡಿ, ಮಧ್ಯದಲ್ಲಿ ತೆಂಗಿನಕಾಯಿ–ಬೆಲ್ಲದ ಹೂರಣವನ್ನು ಉದ್ದವಾಗಿ ಇಟ್ಟು ಎಲೆಯನ್ನು ಮಡಚಬೇಕು.
ಮಡಚಿದ ಕಡುಬುಗಳನ್ನು ಇಡ್ಲಿ ಪಾತ್ರೆ ಅಥವಾ ಆವಿಯಲ್ಲಿ ಬೇಯಿಸುವ ಪಾತ್ರೆಯಲ್ಲಿ ಇಟ್ಟು 20–25 ನಿಮಿಷ ಬೇಯಿಸಿದರೆ ಸಾಕು. ಬೇಯಿಸಿದ ಬಳಿಕ ಬಿಸಿಯಾಗಿರುವಾಗಲೇ ಎಲೆಯನ್ನು ನಿಧಾನವಾಗಿ ಬಿಡಿಸಿ ತೆಗೆದರೆ ಸುವಾಸನೆಯ ಅರಿಶಿನ ಎಲೆ ಕಡುಬು ಸವಿಯಲು ಸಿದ್ಧ. ಮೇಲಿನಿಂದ ಸ್ವಲ್ಪ ಶುದ್ಧ ಹಸುವಿನ ತುಪ್ಪ ಹಾಕಿಕೊಂಡು ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಹಬ್ಬದ ಸಂಭ್ರಮದೊಂದಿಗೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ಅವಕಾಶ ಇದಾಗಿದೆ.

Turmeric leaf cake for Nagar Panchami; A traditional dessert of Coastal-Mountain – ತುಳುಟೈಮ್ಸ್

ಇದನ್ನೂ ಓದಿ :ಕೈಬರಹದಿಂದ ಅಂಕಕ್ಕೆ ಸಮಸ್ಯೆ ಆಗುತ್ತಾ? ಎಸ್ಎಸ್ಎಲ್ ಸಿ, ಪಿಯುಸಿ ಆನ್‌ಲೈನ್ ಮೌಲ್ಯಮಾಪನಕ್ಕೆ ಆತಂಕ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/OI2pvxDU5y0

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 32

You cannot copy content of this page