ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಯೋಗವು ಆರೋಗ್ಯಕರ ವೃದ್ಧಾಪ್ಯ, ದೈಹಿಕ ಕ್ಷಮತೆ ಮತ್ತು ಮಾನಸಿಕ ನೆಮ್ಮದಿಗೆ ಪರಿಣಾಮಕಾರಿ

ಯೋಗ : Tulu Times l ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಗವು ಆರೋಗ್ಯಕರ ವೃದ್ಧಾಪ್ಯ, ದೈಹಿಕ ಕ್ಷಮತೆ ಮತ್ತು ಮಾನಸಿಕ ನೆಮ್ಮದಿಗೆ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಹೇಳಿದರು. ಈ ವರ್ಷದ ಯೋಗ ದಿನದ ಧ್ಯೇಯವಾದ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಲ್ಲ ವಯೋಮಾನದ ಜನರಿಗೆ ಅನ್ವಯಿಸುತ್ತದೆ‌. ಇದು ಕೇವಲ ಹಿರಿಯ ನಾಗರಿಕರಿಗಾಗಿ ಮಾತ್ರವಲ್ಲ ಎಂದು ಅವರು ತಿಳಿಸಿದರು.

ಪ್ರಧಾನಿ ಮೋದಿ ಮಾತನಾಡುತ್ತಾ, ವಯಸ್ಸು ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಬಾರದು. 40ನೇ ವಯಸ್ಸಿನಲ್ಲಿ 20ರ ವಯಸ್ಸಿಗಿಂತ ಹೆಚ್ಚು ನಮ್ಯತೆ, 50ರಲ್ಲಿ 30ರಿಗಿಂತ ಹೆಚ್ಚು ಶಕ್ತಿ ಮತ್ತು 70ರಲ್ಲಿ 50ರಿಗಿಂತ ಹೆಚ್ಚು ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದುವುದು ನಮ್ಮ ಗುರಿಯಾಗಬೇಕು. ಇದನ್ನು ಸಾಧಿಸಲು ಯೋಗ ನೆರವಾಗುತ್ತದೆ, ಎಂದು ಹೇಳಿದರು.

ಯೋಗವು ದೇಹವನ್ನು ನಮ್ಯವಾಗಿರಿಸುವುದರ ಜೊತೆಗೆ ಶಕ್ತಿಯನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳಂತಹ ಜೀವನಶೈಲಿ ಕಾಯಿಲೆಗಳಿಂದ ರಕ್ಷಿಸಲು ಸಹಕಾರಿಯಾಗುತ್ತದೆ ಎಂದು ಅವರು ತುಳುಟೈಮ್ಸ್

 

ಯೋಗದ ಜಾಗತಿಕ ಪ್ರಭಾವದ ಕುರಿತು ಮಾತನಾಡಿದ ಮೋದಿ, ಇಂದು ಯೋಗವು ಗಡಿ, ಭಾಷೆ ಮತ್ತು ಸಂಸ್ಕೃತಿಯ ಎಲ್ಲ ಭೇದಗಳನ್ನು ಮೀರಿ ವಿಶ್ವದ ಜನರನ್ನು ಒಂದಾಗಿಸುವ ಶಕ್ತಿಯಾಗಿ ಬೆಳೆದಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರವರೆಗೆ, ಈಶಾನ್ಯದಿಂದ ಸೌರಾಷ್ಟ್ರದವರೆಗೆ ಭಾರತದೆಲ್ಲೆಡೆ ಯೋಗದ ಉತ್ಸಾಹ ಕಂಡುಬರುತ್ತಿದೆ, ಎಂದರು.

ಜೂನ್ 21ರ ಮಹತ್ವವನ್ನು ವಿವರಿಸಿದ ಅವರು, ಭೂಮಿಯ ಕೆಲವು ಭಾಗಗಳಲ್ಲಿ ಇದು ವರ್ಷದ ಅತಿ ಉದ್ದದ ದಿನ. ಈಗ ಅಂತರರಾಷ್ಟ್ರೀಯ ಯೋಗ ದಿನದ ಕಾರಣದಿಂದ ಜೂನ್ 21 ವಿಶ್ವದ ಅತಿದೊಡ್ಡ ಸಾಮೂಹಿಕ ಆಚರಣೆಯ ದಿನವಾಗಿದೆ, ಎಂದು ಹೇಳಿದರು. ವಿಶ್ವದ ಜನತೆಗೆ ಯೋಗ ದಿನದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ಯೋಗ ಎಲ್ಲರನ್ನು ಸಂಪರ್ಕಿಸುತ್ತದೆ, ಒಂದಾಗಿಸುತ್ತದೆ. ಇಡೀ ಮಾನವ ಸಮುದಾಯಕ್ಕೆ ಅಂತರರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು, ಎಂದರು.

Yoga is effective for healthy aging, physical fitness, and mental well-being – ತುಳುಟೈಮ್ಸ್

ಇದನ್ನೂ ಓದಿ :ಮಕ್ಕಳಲ್ಲಿ ಕಾಲು-ಬಾಯಿ-ಕೈ ರೋಗವಿದ್ದರೆ ಮುನ್ನೆಚ್ಚರಿಕೆ ಹೇಗಿರಬೇಕು?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=Got7BRIlKq8YbfCg

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page