ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

Bajpe: ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಾಟ – ಪ್ರಯಾಣಿಕನ ಬಂಧನ

BAJPE: ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದಾತನನ್ನು ಸಿಐಎಸ್ಎಫ್ ಜವಾನರು ವಶಕ್ಕೆ ಪಡೆದು‌ ಬಜ್ಪೆ‌ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮುಂಬೈನಿಂದ ಮಂಗಳೂರಿಗೆ ವಿಮಾನದ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ.

ಶಂಕರ್ ನಾರಾಯಣ್ ಪೊದ್ದಾರ್ ಬಂಧಿತ ಆರೋಪಿ. ಈತ ಅ. 13ರ ಸೋಮವಾರ ಸಂಜೆ 6:30ಕ್ಕೆ ಮುಂಬೈನಿಂದ ಮಂಗಳೂರಿಗೆ ಬಂದ ಇಂಡಿಗೋ‌ ವಿಮಾನದಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ‌ ಸಿಕ್ಕಿದೆ. ಈ ಹಿನ್ನೆಲೆ ವಿಮಾನ‌ ನಿಲ್ದಾಣ ಸಿಬ್ಬಂದಿ ಆಧರಿಸಿ ವಿಮಾನ‌ ನಿಲ್ದಾಣದ ಭದ್ರತಾ ಸಿಬ್ಬಂದಿ‌ CISF ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಅದರಂತೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ‌ ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ‌‌ ನಡೆಸಿದ್ದಾರೆ. ಈ ವೇಳೆ ಶಂಕರ್ ನಾರಾಯಣ್ ಪೊದ್ದಾರ್ ನ ಚೆಕ್‌ – ಇನ್ ಬ್ಯಾಗೇಜ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ಈತನ ಚೆಕ್‌ – ಇನ್ ಬ್ಯಾಗೇಜ್‌ನಲ್ಲಿ ಸರಿಸುಮಾರು 512 ಗ್ರಾಂ ಹೈಡ್ರೋಪೋನಿಕ್ ಗಾಂಜಾ ಇತ್ತು.‌ ನಂತರ ಸಿಐಎಸ್‌ಎಫ್ ಬೆಂಗಳೂರಿನ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಮತ್ತು ಸ್ಥಳೀಯ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿ. ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: Raju thalikote:ಬಿಗ್ ಬಾಸ್ ಸ್ಪರ್ಧಿ ರಾಜು ತಾಳಿಕೋಟೆ ನಿಧನ


ವಿಡಿಯೋ ಸುದ್ದಿಗಳಿಗಾಗಿ ನಮ್ಮ ಯುಟ್ಯೂಬ್‌ ಚಾನೆಲ್‌ ಕ್ಲಿಕ್‌ ಮಾಡಿ https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 228

You cannot copy content of this page