ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಿಗ್ ಬಾಸ್ ಕನ್ನಡ 13ಕ್ಕೆ ಡೇಟ್ ಫಿಕ್ಸ್: ಕಿಚ್ಚ ಸುದೀಪ್ ಹೊಸ ಅವತಾರ

ಮನರಂಜನೆ : Tulu Times l ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಬಹುದಿನಗಳಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕಾರ್ಯಕ್ರಮಕ್ಕೆ ಇದೀಗ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದೆ.

ಹೊಸ ಪ್ರೊಮೋ ಮೂಲಕ ಕಾರ್ಯಕ್ರಮದ ಆರಂಭದ ದಿನಾಂಕ ಹಾಗೂ ಸಮಯವನ್ನು ಬಹಿರಂಗಪಡಿಸಲಾಗಿದೆ. ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ಬಿಗ್ ಬಾಸ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ 13’ ವಿಶೇಷ ಥೀಮ್‌ನೊಂದಿಗೆ ಮೂಡಿಬರಲಿದೆ ಎನ್ನಲಾಗಿದ್ದು, ಪ್ರೋಮೋದಲ್ಲಿಯೇ ಅದರ ಸುಳಿವು ನೀಡಲಾಗಿದೆ. ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಈ ಬಾರಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ಸುದೀಪ್ ಅವರು ವಿಮಾನದ ಕ್ಯಾಪ್ಟನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸ ಸೀಸನ್ ಯಾವ ರೀತಿಯ ಥೀಮ್ ಹೊಂದಿರಲಿದೆ ಎಂಬ ಕುತೂಹಲವನ್ನು ಹೆಚ್ಚಿಸಿದ್ದಾರೆ.

Process to purchase 15,000 new buses set in motion: Transport Minister Byrathi Suresh
Credit to original source

ಪ್ರೊಮೋದ ದೃಶ್ಯಗಳು ಹಾಗೂ ಸುದೀಪ್ ಅವರ ಹೊಸ ಅವತಾರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೋಮೋ ವೈರಲ್ ಆಗಿದ್ದು, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪ್ರವೇಶಿಸಲಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಪ್ರತಿ ಸೀಸನ್‌ನಲ್ಲೂ ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳು, ಮನರಂಜನೆ, ಟಾಸ್ಕ್‌ಗಳು, ಸ್ನೇಹ, ಭಿನ್ನಾಭಿಪ್ರಾಯ ಹಾಗೂ ಭಾವನಾತ್ಮಕ ಕ್ಷಣಗಳ ಮೂಲಕ ವೀಕ್ಷಕರ ಗಮನ ಸೆಳೆಯುವ ‘ಬಿಗ್ ಬಾಸ್ ಕನ್ನಡ’, ಈ ಬಾರಿಯೂ ಹೊಸತನದ ನಿರೀಕ್ಷೆ ಮೂಡಿಸಿದೆ.

ಸೀಸನ್ 13ರಲ್ಲಿ ಭಾಗವಹಿಸುವ ಸ್ಪರ್ಧಿಗಳ ಅಧಿಕೃತ ಪಟ್ಟಿಯನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಕಾಲಿಡಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಒಟ್ಟಿನಲ್ಲಿ ಸೆಪ್ಟೆಂಬರ್ 6ರ ಸಂಜೆ 7 ಗಂಟೆಗೆ ನಡೆಯಲಿರುವ ಗ್ರ್ಯಾಂಡ್ ಪ್ರೀಮಿಯರ್‌ಗೆ ಕಿರುತೆರೆ ಪ್ರೇಕ್ಷಕರು ಸಜ್ಜಾಗುತ್ತಿದ್ದಾರೆ. ಸುದೀಪ್ ಅವರ ಕ್ಯಾಪ್ಟನ್ ಅವತಾರ ಮತ್ತು ವಿಶೇಷ ಥೀಮ್‌ನೊಂದಿಗೆ ಆರಂಭವಾಗಲಿರುವ ‘ಬಿಗ್ ಬಾಸ್ ಕನ್ನಡ 13’ ಈ ಬಾರಿ ಯಾವ ರೀತಿಯ ಮನರಂಜನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Date fix for Bigg Boss Kannada 13: Kiccha Sudeep new avatar – ತುಳು ಟೈಮ್ಸ್

ಇದನ್ನೂ ಓದಿ : ಟೈಪ್ ಮಾಡೋದಕ್ಕಿಂತ ಕೈಬರಹವೇ ಬೆಸ್ಟ್? ಮೆದುಳಿನ ಬಗ್ಗೆ ಹೊಸ ಸಂಶೋಧನೆ

 

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page