Menstrual leave : ಈಗಾಗಲೇ ಕರ್ನಾಟಕ ಸರ್ಕಾರ ಮುಟ್ಟಿನ ರಜೆಯನ್ನು ನೀಡಬೇಕು ಎಂದು ಆದೇಶ ನೀಡಿದ್ದು ಸರ್ಕಾರದ ಈ ನಿರ್ಧಾರಕ್ಕೆ ಮಹಿಳೆಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂಬ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ಮಾಡಲಾಗಿದೆ. ಆದರೆ ಇಲ್ಲೊಂದು ಕಂಪೆನಿ ಈ ಆದೇಶವನ್ನು ಗೌರವಿಸಿ ಈಗಾಗಲೇ ತನ್ನ ಸಹೋದ್ಯೋಗಿ ಮಿತ್ರರಿಗೆ ಮುಟ್ಟಿನ ರಜೆ ಘೋಷಿಸಿದ್ದ ಬಗ್ಗೆ ಮಹಿಳೆಯೊಬ್ಬರು ಪೋಸ್ಟ್ ನಲ್ಲಿ ಹಾಕಿದ್ದು, ಅದೀಗ ವೈರಲ್ ಆಗುತ್ತಿದೆ. ಅದರಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿರುವುದು ಕಂಡು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್ ಆಗಿರುವ ಅದೆಷ್ಟೋ ಪೋಸ್ಟ್ಗಳಲ್ಲಿ ಕಂಪನಿಯ ವ್ಯವಸ್ಥೆಗಳ ಬಗ್ಗೆ ಅಥವಾ ಅಲ್ಲಿನ ಜನರ ಬಗ್ಗೆ ದೂರುವ ಪೋಸ್ಟ್ಗಳು ವೈರಲ್ ಆಗುತ್ತಿತ್ತು. ಆದರೆ ಇದೀಗ ಇಲ್ಲೊಂದು ವೈರಲ್ ಆಗಿರುವ ಪೋಸ್ಟ್ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಮಹಿಳೆಯರ ಮುಟ್ಟಿನ ಬಗ್ಗೆ ಒಂದು ಕಂಪನಿಯೂ ಎಷ್ಟೊಂದು ಕಾಳಜಿ ವಹಿಸುತ್ತದೆ ಎಂಬುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ.
ಈ ಪೋಸ್ಟ್ನ್ನು ಅರ್ಚನಾ ಶರ್ಮಾ ಎಂಬುವವರು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯ ಸಂಸ್ಥಾಪಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುತ್ತಾರೆ. . ಕಂಪನಿಯ ಸಂಸ್ಥಾಪಕರು ತಮ್ಮ ಉದ್ಯೋಗಿಗಳ ವಾಟ್ಸಾಪ್ ಗ್ರೂಪ್ನಲ್ಲಿ ಕಳಿಸಿರುವ ಸಂದೇಶದ ಸ್ಕ್ರೀನ್ಶಾಟ್ನ್ನು ಲಿಂಕ್ಡ್ಇನ್ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ, ಪ್ರಿಯ ಮಹಿಳಾ ಉದ್ಯೋಗಿಗಳೇ ಮುಟ್ಟಿನ ಆರೋಗ್ಯವು ಪ್ರತಿಯೊಬ್ಬ ಮಹಿಳೆಯ ಅತ್ಯಗತ್ಯ ಭಾಗವಾಗಿದೆ. ಇಂದಿನಿಂದ, ನಮ್ಮ ಮಹಿಳಾ ಸಹೋದ್ಯೋಗಿಗಳು ತಮ್ಮ ಮುಟ್ಟಿನ ಚಕ್ರಗಳಿಗೆ ಒಳಗಾಗುತ್ತಿದ್ದರೆ, ಅವರು ವಿಶ್ರಾಂತಿ ಪಡೆಯಬಹುದು ಮತ್ತು ಮನೆಯಲ್ಲಿಯೇ ಇರಬಹುದು. ಇದನ್ನು ರಜೆ ಎಂದು ಪರಿಗಣಿಸಲಾಗುವುದಿಲ್ಲ. ಆರೋಗ್ಯ ಮತ್ತು ಯೋಗಕ್ಷೇಮವು ಎಲ್ಲಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಈ ಒಂದು ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ.
ಇದನ್ನೂ ಓದಿ :Puttur: ಕೋಡಿಂಬಾಡಿ ಬಾರ್ನಲ್ಲಿ ಮಾರಾಮಾರಿ: ಪ್ರಕರಣ ಮುಚ್ಚಿ ಹಾಕಲು ಯತ್ನ!?
………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=9-p-hEdxSIH5NIgZ











