ಬ್ರೇಕಿಂಗ್ ನ್ಯೂಸ್
ದೇಶ

Bollywood : ಹಿರಿಯ ನಟ ನಿಧನದ ಸುದ್ದಿ ಸುಳ್ಳು : ನಟ ಧರ್ಮೇಂಧ ಆರೋಗ್ಯದಲ್ಲಿ ಚೇತರಿಕೆಯಿದೆ

Bollywood : ಇದೀಗ ಹಿರಿಯ ನಟ ಧರ್ಮೇಂದ್ರ ನಿಧನದ ಸುದ್ದಿ ಸುಳ್ಳು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನಟ ಧರ್ಮೇಂದ್ರ ನಿಧನ ಸುದ್ದಿಗಳು ಹರಿದಾಡುತ್ತಿದ್ದು, ಪುತ್ರಿ ಇಶಾ ಡಿಯೋಲ್ ತನ್ನ ತಂದೆಯ ಆರೋಗ್ಯ ಚೇತರಿಸಿಕೊಳ್ಳುತ್ತಿದೆಯೆಂದು, ಸುಳ್ಳು ವರದಿಗಳನ್ನು ಹಬ್ಬಿಸಬೇಡಿ ಎಂದು ಮಾಧ್ಯಮದ ಜೊತೆ ಕೇಳಿಕೊಂಡಿರುತ್ತಾರೆ.
ನಿಮ್ಮೆಲ್ಲಾ ಪ್ರಾರ್ಥನೆಯಿಂದ ತಂದೆಯವರು ಆದಷ್ಟು ಬೇಗ ಉಷಾರುಗುವಂತೆ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿರುತ್ತಾರೆ.

ಆರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸಿನಿ ಪಯಣದಲ್ಲಿ ಧರ್ಮೇಂದ್ರ ಅವರು ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಹಿರಿ ಕಲಾವಿದರೂ ಕೂಡಾ ಹೌದು. ಡಿಸೆಂಬರ್ 25 ರಂದು ಬಿಡುಗಡೆಯಾಗಲಿರುವ ‘ಇಕ್ಕೀಸ್’ ಅವರ ತೆರೆಮೇಲಿನ ಚಿತ್ರವಾಗಿರಲಿದೆ. ಅಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು ಭಾರತೀಯ ಜನತಾ ಪಕ್ಷದ (BJP) ಪರವಾಗಿ ಬಿಹಾರದ ಬೆಕನೆರ್ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದರು. ಪಂಜಾಬ್‌ನ ಲುಧಿಯಾನ ಜಿಲ್ಲೆಯ ಹಳ್ಳಿಯೊಂದರಲ್ಲಿ ಧರ್ಮೇಂದ್ರ ರವರು ಕೃಷ್ಣ ಡಿಯೋಲ್ ಅಂತ ಹೆಸರಾಗಿದ್ದರು. ಇವರು 2012ರಲ್ಲಿ ಪದ್ಮ ಭೂಷಣ ಪ್ರಶಸ್ತಿ, ಹಲವಾರು ಚಿತ್ರರಂಗ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡ ಹೆಗ್ಗಳಿಕೆ ಇವರದ್ದು.

ಇದನ್ನೂ ಓದಿ :Delhi : ದೆಹಲಿ‌ ಕೆಂಪುಕೋಟೆಯಲ್ಲಿ ಸ್ಪೋಟ : 13 ಮಂದಿ ಸಾವು, ಹಲವರು ಗಂಭೀರ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/86NRSuR13h0?si=COPs2buOt8DbCiMm

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 22

You cannot copy content of this page