ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಮೆಡಿಕಲ್ ಸೀಟ್ ಕೊಡಿಸುತ್ತೇವೆ’ ಎನ್ನುವ ಏಜೆಂಟರಿಂದ ಎಚ್ಚರ; ಕೆಇಎ ಮಹತ್ವದ ಸೂಚನೆ

ಬೆಂಗಳೂರು : Tulu Times l ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುವ ವಂಚಕರ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ನೀಟ್  ಅಭ್ಯರ್ಥಿಗಳು ಹಾಗೂ ಪೋಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಡಿ ನೇರವಾಗಿ ಸೀಟ್ ಕೊಡಿಸಿಕೊಡುವುದಾಗಿ ಕೆಲ ವ್ಯಕ್ತಿಗಳು ಮತ್ತು ಏಜೆಂಟರು ಸುಳ್ಳು ಭರವಸೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕೆಇಎ ಈ ಎಚ್ಚರಿಕೆ ಪ್ರಕಟಿಸಿದೆ. ಇಂತಹ ಹೇಳಿಕೆಗಳನ್ನು ನಂಬಬಾರದು ಹಾಗೂ ಯಾವುದೇ ವ್ಯಕ್ತಿಗೆ ಹಣ ಪಾವತಿಸಬಾರದು ಎಂದು ಪ್ರಾಧಿಕಾರ ಮನವಿ ಮಾಡಿದೆ.

ಕೆಇಎ ಸ್ಪಷ್ಟಪಡಿಸಿರುವಂತೆ, ಕರ್ನಾಟಕದ ಎಲ್ಲಾ ಎಂಬಿಬಿಎಸ್ ಸೀಟುಗಳನ್ನು ಅಧಿಕೃತ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಯಾವುದೇ ಖಾಸಗಿ ವೈದ್ಯಕೀಯ ಕಾಲೇಜು ಅಥವಾ ವ್ಯಕ್ತಿಗೆ ನೇರವಾಗಿ ಸೀಟು ಹಂಚಿಕೆ ಮಾಡುವ ಅಧಿಕಾರ ಇರುವುದಿಲ್ಲ. ಮ್ಯಾನೇಜ್‌ಮೆಂಟ್ ಕೋಟಾದ ಸೀಟುಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ಮಾತ್ರ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಇದ್ದು, ಸೀಟು ಹಂಚಿಕೆ ಅಥವಾ ಪ್ರವೇಶವನ್ನು ದೃಢೀಕರಿಸುವ ಅಧಿಕಾರ ಅವರಿಗಿಲ್ಲ ಎಂದು ಕೆಇಎ ತಿಳಿಸಿದೆ.

ಒಟ್ಟು ವೈದ್ಯಕೀಯ ಸೀಟುಗಳಲ್ಲಿ 15 ಶೇಕಡಾ ಸೀಟುಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಕೌನ್ಸೆಲಿಂಗ್ ಮೂಲಕ ಹಂಚಿಕೆ ಮಾಡಲಿದ್ದು, ಉಳಿದ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ಮೂಲಕ ಹಂಚಿಕೆ ಮಾಡಲಿದೆ. ಸೀಟು ಹಂಚಿಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ನೀಟ್ ಪರೀಕ್ಷೆಯ ರ್ಯಾಂಕ್ ಆಧಾರದಲ್ಲೇ ನಡೆಯಲಿದ್ದು, ಎನ್‌ಎಂಸಿ ಅಧಿಕೃತ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದ ಬಳಿಕವೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಕೌನ್ಸೆಲಿಂಗ್, ಸೀಟು ಹಂಚಿಕೆ ಮತ್ತು ಪ್ರವೇಶಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಕೆಇಎ ಅಧಿಕೃತ ಪ್ರಕಟಣೆಗಳನ್ನಷ್ಟೇ ನಂಬಬೇಕು. ಯಾವುದೇ ಏಜೆಂಟ್, ಮಧ್ಯವರ್ತಿ ಅಥವಾ ಅನಧಿಕೃತ ವ್ಯಕ್ತಿಗಳ ಮಾತು ನಂಬಿ ಹಣ ಪಾವತಿಸದಂತೆ ಕೆಇಎ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Beware of agents promising medical seats; KEA issues important advisory – ತುಳುಟೈಮ್ಸ್

ಇದನ್ನೂ ಓದಿ :ಖಾಸಗಿ ಕೋಚಿಂಗ್‌ಗೆ ಗುಡ್‌ಬೈ; ಸರ್ಕಾರಿ ಪಿಯು ಕಾಲೇಜುಗಳಲ್ಲೇ ಸಿಇಟಿ ತರಬೇತಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://tulutimes.com/10039/belthangady/leopard-enters-cattle-shed-in-bandaru-attacks-calf/

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page