ಬೆಳ್ತಂಗಡಿ : Tulu Times l ಕನ್ಯಾಡಿ ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಾಗೂ ಮೊಗ್ರು ಗ್ರಾಮ ಮುಗೇರಡ್ಕ- ಅಲೆಕ್ಕಿ ಶ್ರೀರಾಮ ಶಿಶುಮಂದಿರ ಮಕ್ಕಳ ಶಿಕ್ಷಣ ಮತ್ತು ಅನ್ನಯಜ್ಞ ಯೋಜನೆಗೆ ಮೊಗ್ರು ಗ್ರಾಮ ಹೇರ ನಿವಾಸಿ ಕುಸುಮಾಧರ ಮತ್ತು ಪೂರ್ಣಿಮ ಇವರ ಶುಭವಿವಾಹ ಸಂದರ್ಭದಲ್ಲಿ ನವಜೋಡಿಗಳಿಂದ ದೇಣಿಗೆ ಹಸ್ತಾಂತರ ಮಾಡಲಾಯಿತು.
ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಹೇರ ನಿವಾಸಿ, ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಸಿಬ್ಬಂದಿಯಾದ ಕುಸುಮಾಧರ ಹಾಗೂ ಪೂರ್ಣಿಮಾರವರ ಶುಭವಿವಾಹವು ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಎಪ್ರಿಲ್.20 ರoದು ನೆರವೇರಿತು. ಈ ಸಂದರ್ಭದಲ್ಲಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾoಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂ. 15,000/- ಹಾಗೂ ಮೊಗ್ರು ಗ್ರಾಮ ಮುಗೇರಡ್ಕ ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಶ್ರೀ ರಾಮ ಶಿಶುಮಂದಿರದ ಮಕ್ಕಳ ಶಿಕ್ಷಣ ಮತ್ತು ಅನ್ನಯಜ್ಞ ಯೋಜನೆಗೆ ರೂ. 5,000/- ದೇಣಿಗೆಯನ್ನು ನೀಡಿ ಸಹಕರಿಸಿದ್ದಾರೆ.
ಕನ್ಯಾಡಿ ಸೇವಾಭಾರತಿ ಕೇಂದ್ರದ ಅಧಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್, ಖಜಾoಚಿ ಶ್ರೀ ಎ.ಜೈ ರಾಜ್ ಸಾಲ್ಯಾನ್, ಸಿಬ್ಬಂದಿ ವರ್ಗ, ಮೊಗ್ರು ಗ್ರಾಮ ಅಲೆಕ್ಕಿ ಶಿಶುಮಂದಿರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ನವ ಜೋಡಿಗಳಿಗೆ ಶುಭ ಹಾರೈಸಿ, ಕೃತಜ್ಞತೆ ಸಲ್ಲಿಸಿದರು.
Newlyweds donate to the construction of a new building in Kanyadi – ತುಳುಟೈಮ್ಸ್
ಇದನ್ನೂ ಓದಿ :ಸಿಇಟಿ 2026 ಆರಂಭ: ಕಟ್ಟುನಿಟ್ಟಿನ ಡ್ರೆಸ್ ಕೋಡ್ ಮತ್ತು ಸಿಸಿಟಿವಿ ನಿಗಾವಳಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/6VVbw42TjY0?si=0b5DckLA0uOg2T7J








