ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಯುವುದು ಹೇಗೆ?

ಜೀವನಶೈಲಿ: Tulu Times | ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದಂತಹ ಕಷ್ಟ ಕಾರ್ಪಣ್ಯಗಳು ಇರುತ್ತವೆ.  ಜೀವನದಲ್ಲಿ ಮುಂದೆ ಸಾಗಬೇಕು ಎಂಬ ಹಠ ಛಲ ಇರುತ್ತದೆ. ತಾನು ಕೂಡ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕು ಎನ್ನುವಂತಹ ಆಸೆ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದ್ರೆ, ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸದಿಂದ  ಮುನ್ನಡೆಯುವುದು ಹೇಗೆ ನೋಡೋಣ ಈ ಸ್ಟೋರಿಯಲ್ಲಿ..

ಸಕ್ಸಸ್‌ ಫುಲ್ ಲೈಫ್‌ ಲೀಡ್ ಮಾಡಿ!

ಸಾಕಷ್ಟು ಜನ ಜೀವನದಲ್ಲಿ ಕಷ್ಟಗಳ ಬದುಕನ್ನೇ ನೋಡಿರುತ್ತಾರೆ. ಇನ್ನು ಕೆಲವರು ತಾನು ಸಕ್ಸಸ್‌ ಫುಲ್ ಲೈಫ್‌ ಲೀಡ್ ಅಂತ ಅಂದುಕೊಂಡಿರುತ್ತಾರೆ.  ಕೆಲವರು ತನ್ನ ಜೊತೆಗೆ ಇರುವವರನ್ನು ಮುನ್ನಡೆಸದೆ ತಾನೊಬ್ಬನೇ ಜೀವನದಲ್ಲಿ  ಮುಂದೆ ಸಾಗುತ್ತೇನೆ ಅಂತ ನಡೆಯುವವರು ಬಹಳಷ್ಟು ಜನ ಇದ್ದಾರೆ. ಇನ್ನು ತನಗೆ ಯಾರು ಬೇಡ ನಾನೊಬ್ಬನೇ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎನ್ನುವಂತ ಆಸೆಯನ್ನು ಇಟ್ಟುಕೊಂಡಿರುವವರು ಕೂಡ ಸಾಕಷ್ಟು ಜನ ಇದ್ದಾರೆ. ಆತ್ಮವಿಶ್ವಾಸ ಎನ್ನುವುದು ಎಲ್ಲಾ ಕೆಲಸಗಳಿಗೂ ಬಹಳ ಮುಖ್ಯ.

ನಿಮ್ಮ ಸ್ವಂತ ಆಲೋಚನೆ ಇರಲಿ..!

ಬಹುತೇಕ ಮಂದಿ ತನ್ನ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಪರದಾಡುತ್ತಾರೆ. ಇವರಿಗೆ ತಾನು ಹೇಗೆ ತನ್ನ ಕುಟುಂಬವನ್ನು ಜವಾಬ್ದಾರಿಯುತವಾಗಿ ಮುನ್ನಡೆಸಿಕೊಂಡು ಹೋಗಬೇಕು ಎನ್ನುವಂತಹ ಬುದ್ದಿವಂತಿಕೆ ಇರುವುದಿಲ್ಲ. ಮನೆಯಲ್ಲಿರುವಂತಹ ಹಿರಿಯರ ಸಲಹೆಯಂತೆ ಪ್ರತಿಯೊಂದು ಕೂಡ ಮಾಡುತ್ತಿರುತ್ತಾರೆ. ತನ್ನ ಸ್ವಂತ ಯೋಚನೆಯಿಂದ ಒಂದು ಕೆಲಸವನ್ನು ಮಾಡದೆ ಇನ್ನೊಬ್ಬರ ಅಡಿಯಲ್ಲಿ ನಿಂತು ಕೆಲಸ ಮಾಡುತ್ತಿರುತ್ತಾರೆ. ಆತ್ಮವಿಶ್ವಾಸವನ್ನು ಹುಟ್ಟಿಸಿಕೊಳ್ಳದೆ ಜೀವನ ಪರ್ಯಂತ ಕಷ್ಟದ ಹಾದಿಯಲ್ಲಿ ಇರುತ್ತಾರೆ.

ನಿಮ್ಮ ಆತ್ಮಬಲ ನಿಮ್ಮ ಜೊತೆ ಇರುತ್ತೆ..!

ಆತ್ಮವಿಶ್ವಾಸ ಎನ್ನುವುದು ಜೀವನದಲ್ಲಿ ಬಹಳ ಮುಖ್ಯ. ನಮ್ಮ ಆತ್ಮ ಬಲ ಇದ್ದರೆ ಮಾತ್ರ ಮುನ್ನಡೆಯಲು ಸಾಧ್ಯ. ಅಂದುಕೊಂಡ ಕೆಲಸ ಕಾರ್ಯಗಳು ಸುಲಭವಾಗಿ ಸಾಗಲು ಆತ್ಮವಿಶ್ವಾಸ ಅನ್ನೋದು ಬಹಳ ಮುಖ್ಯ. ಎಲ್ಲವನ್ನು ನಿಭಾಯಿಸಿಕೊಂಡು ಚಾಕಚಕ್ಯತೆಯಿಂದ ಬಹಳ ವಿವೇಕವಾಗಿ ಮುನ್ನಡೆಯುವುದು ಒಳ್ಳೆಯದು. ಮನುಷ್ಯನಿಗೆ ಜವಾಬ್ದಾರಿ ಬಂದರೆ ಮಾತ್ರ ಜೀವನದಲ್ಲಿ ಯಶಸ್ಸಿನ ಶಿಖರ ಏರಲು ಸಾಧ್ಯ. ಇಲ್ಲವಾದಲ್ಲಿ ನಿಂತ ನೀರಾಗಿ ಇರುತ್ತೀರಿ. ತನ್ನ ಹೊಸ ಪ್ರಪಂಚ ಅಥವಾ ತನ್ನದೇ ಆದಂತಹ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಆತ್ಮವಿಶ್ವಾಸದ ಜೊತೆಗೆ ಜವಾಬ್ದಾರಿ ಎನ್ನುವುದು ಕೂಡ ಬಹಳ ಮುಖ್ಯ. ಆತ್ಮವಿಶ್ವಾಸ ಜೀವನದ ಹಾದಿಗೆ ಮೆಟ್ಟಿಲುಗಳಾಗಿ ನಿಲ್ಲುತ್ತೆ. ಹಾಗಾಗಿ ನಿಮ್ಮ ಜೀವನದಲ್ಲಿ ನೀವು ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ಮಾಡಿದರೂ ಕೂಡ ಉಳಿದದ್ದು ತನ್ನಿಂದ ತಾನೇ ನಿಮ್ಮದಾಗುತ್ತದೆ.

How to move forward in life without losing confidence?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page