ಬೆಂಗಳೂರು: Tulu Times l ಬಿಗ್ ಬಾಸ್ ಕನ್ನಡ ಮೂಲಕ ಜನಪ್ರಿಯತೆ ಪಡೆದ ಸ್ಪರ್ಧಿಗಳು ನಂತರ ಮತ್ತಷ್ಟು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದು ಈಗ ಸಾಮಾನ್ಯವಾಗಿದ್ದು, ಇದೇ ಸಾಲಿಗೆ ಇದೀಗ ರಕ್ಷಿತಾ ಶೆಟ್ಟಿ ಕೂಡ ಸೇರಿದ್ದಾರೆ. ರಕ್ಷಿತಾ ಶೆಟ್ಟಿ ಮಂಗಳೂರಿನ ಮೂಲದವರಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ ಬಳಿಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಬಳಿಕ ಅವರು ವ್ಲಾಗಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ರಘು ಜೊತೆ ಯೂಟ್ಯೂಬ್ ಚಾನೆಲ್‌ನಲ್ಲೂ ಕಾಣಿಸಿಕೊಂಡಿದ್ದರು.
ಇದೀಗ ರಕ್ಷಿತಾ ಮತ್ತೊಂದು ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕ್ವಾಟ್ಲೆ ಕಿಚನ್ ಮೊದಲ ಸೀಸನ್‌ನಲ್ಲೇ ಗಮನ ಸೆಳೆದಿದ್ದ ಕುಕ್ಕಿಂಗ್ ರಿಯಾಲಿಟಿ ಶೋ ಆಗಿದ್ದು, ಇದೀಗ ಎರಡನೇ ಸೀಸನ್ ಮೂಲಕ ಮತ್ತೆ ಮರಳುತ್ತಿದೆ. ಈ ಹೊಸ ಸೀಸನ್‌ನಲ್ಲಿ ರಕ್ಷಿತಾ ಶೆಟ್ಟಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಪ್ರೋಮೊದಲ್ಲಿ ಹೊಸ ಹಾಗೂ ಹಳೆಯ ಸ್ಪರ್ಧಿಗಳನ್ನು ಪರಿಚಯಿಸಲಾಗಿದ್ದು, ರಕ್ಷಿತಾ ತಮ್ಮ ಜನಪ್ರಿಯ ಡೈಲಾಗ್ ‘ಎಂಥ ಗೊತ್ತುಂಟಾ ಗೈಸ್’ ಹೇಳುತ್ತಾ ಸ್ಪರ್ಧಿಗಳೊಂದಿಗೆ ಸಂಭಾಷಣೆ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಪ್ರೋಮೊದಲ್ಲಿ ಕ್ವಾಟ್ಲೆ ತಂಡ ಹೊಸ ಸ್ಪರ್ಧಿಗಳ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ದೃಶ್ಯಗಳೂ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಈ ಶೋನಲ್ಲಿ ಸೂರಜ್ ಸಿಂಗ್, ತುಕಾಲಿ ಸಂತೋಷ್, ಓಂಪ್ರಕಾಶ್ ರಾವ್ ಹಾಗೂ ಕರಿಬಸಪ್ಪ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಈ ಹೊಸ ಸೀಸನ್ ಪ್ರಸಾರ ಆರಂಭವಾಗಲಿದೆ. ಮೊದಲ ಸೀಸನ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ರಘು ವಿಜೇತರಾಗಿದ್ದರು.
‘Pataki’ Rakshita Shetty of Bigg Boss fame now enters a new cooking reality show – ತುಳುಟೈಮ್ಸ್ ತುಳುಟೈಮ್ಸ್
ಇದನ್ನೂ ಓದಿ :ದುಬಾರೆ ದುರಂತದ ಬಳಿಕ ಕಟ್ಟುನಿಟ್ಟಿನ ನಿಯಮ : ಸಾಕಾನೆಗಳಿಗೆ ಆಹಾರ ನೀಡುವುದು ನಿಷೇಧ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=RGS4UZWhuY7V20bI











