ಜೀವನಶೈಲಿ: Tulu Times | ಮನುಷ್ಯನಿಗೆ ನಿದ್ದೆ ಅನ್ನೋದು ಬಹಳ ಮುಖ್ಯ. ನಿದ್ರೆ ಇರದಿದ್ರೆ ನಮ್ಮ ದೇಹದ ಆರೋಗ್ಯ ಸಂಪೂರ್ಣ ಹದಗೆಡುತ್ತದೆ. ಹಾಗಾದ್ರೆ, ನಮಗೆ ನಮ್ಮ ಜೀವನದಲ್ಲಿ ನಿದ್ರೆ ಅನ್ನೋದು ಎಷ್ಟು ಮುಖ್ಯ? ಬೆಳಗ್ಗಿನ ಸಮಯವೂ ನೀವು ನಿದ್ರೆಯ ಮಂಪರಿನಲ್ಲಿಯೇ ದಿನ ಕಳೆಯುವವರೇ? ಹಾಗಾದ್ರೆ, ಇದರಿಂದ ನಿಮ್ಮ ಲೈಫ್ ಸ್ಟೈಲ್ ಹಾಳಾಗುತ್ತಾ? ನೋಡೋಣ ಈ ಸ್ಟೋರಿಯಲ್ಲಿ..
ದಿನವಿಡೀ ತೂಕಡಿಸುವಿರಾ..?
ನಿದ್ರೆ ಮಾಡದೆ ನಮ್ಮ ದೇಹ ಚಟುವಟಿಕೆಯಿಂದ ಇರಲಾರದು. ಮನುಷ್ಯನ ದೇಹಕ್ಕೆ ನಿದ್ರೆ ನಿತ್ಯವೂ ಬೇಕು. ದೇಹ ಸಂಪೂರ್ಣವಾಗಿ ಸುಸ್ತಾಗಿದ್ದಾಗ ನಾವು ನಿದ್ರೆಗೆ ಜಾರುತ್ತೇವೆ. ನಮ್ಮ ಮೈಂಡ್ ಫ್ರೀ ಆಗುತ್ತೆ. ನಮ್ಮ ದೇಹ ಲವಲವಿಕೆಯಿಂದ ಇರುತ್ತದೆ. ಸಾಕಷ್ಟು ಜನ ದಿನಂಪ್ರತಿ ನಿದ್ದೆಯ ಮಂಪರಿನಲ್ಲಿಯೇ ಇರುತ್ತಾರೆ. ಇವರಿಗೆ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಾತ್ರಿ ಮಲಗಿದಾಗ ನಿದ್ದೆ ಬರಲ್ಲ, ಆದರೆ ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಅಥವಾ ಸುಮ್ಮನೆ ಕೂತಿದ್ದಾಗ ಕಣ್ಣು ತೂಕಡಿಸುತ್ತದೆ.ಇಂಥವರು ತಮ್ಮ ದೇಹವನ್ನು ಬಹಳಷ್ಟು ಚಟುವಟಿಕೆಯಿಂದ ಇರುವ ಹಾಗೆ ನೋಡಿಕೊಳ್ಳಬೇಕು, ಇಲ್ಲವಾದಲ್ಲಿ ನಿಮ್ಮ ದೇಹ ಹಾಗೂ ನಿಮ್ಮ ಮನಸ್ಸು ಕುಗ್ಗುತ್ತದೆ.
ನಾನ್ ವೆಜ್ ಹೆಚ್ಚು ತಿನ್ನದಿರಿ!
ನೀವು ನಿದ್ರೆಯ ಮಂಪರಿನಲ್ಲಿ ಇರುವವರಾದ್ರೆ ನಿಮ್ಮ ದೇಹದಲ್ಲಿ ಯಾವುದೋ ಒಂದು ಅಂಶ ಕಡಿಮೆ ಇದೆ ಅಂತ ಅರ್ಥ. ನೀವು ಸೇವಿಸುವಂತಹ ಆಹಾರ ಇರಬಹುದು. ಅಂದರೆ, ಮಾಂಸಾಹಾರ ಹೆಚ್ಚಾಗಿ ಸೇವಿಸುವವರು ತಮ್ಮ ದೇಹವನ್ನು ನಿದ್ರಾಹೀನತೆಗೆ ಹೆಚ್ಚಾಗಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಮಾಂಸ ತಿಂದು ಮುಂದಿನ ದಿನ ನಮ್ಮ ದೇಹ ಉದಾಸೀನದಿಂದ ಇರುತ್ತದೆ. ಯಾವುದೇ ಕೆಲಸ ಮಾಡೋದು, ಬೇಡ ಸುಮ್ಮನೆ ಇದ್ದುಬಿಡೋಣ ಅಥವಾ ಬೆಳಗ್ಗೆಯೇ ಮಲಗಿ ಬಿಡೋಣ ಎನ್ನುವಂತಹ ಯೋಚನೆಗಳು ಶುರುವಾಗುತ್ತವೆ. ಹಾಗಾಗಿ ಮಾಂಸಹಾರ ಕಡಿಮೆ ಮಾಡುವುದು ಒಳ್ಳೆಯದು.
ಕೆಲಸದ ಸಮಯದಲ್ಲಿ ಕೋಳಿ ನಿದ್ರೆ ಮಾಡ್ತೀರಾ..?
ಬಹುತೇಕ ಮಂದಿ ಕೆಲಸ ಮಾಡುತ್ತಿರಬೇಕಾದರೆ ಒಂದು ಹತ್ತು ನಿಮಿಷ ನಾನು ನಿದ್ರೆಗೆ ಜಾರುತ್ತೇನೆ ಅಂತ ಕೆಲಸದಿಂದ ಎಸ್ಕೇಪ್ ಆಗುತ್ತಾರೆ. ಈ ರೀತಿಯಾದಂತಹ ಹವ್ಯಾಸ ನಿಮಗೆ ಕೆಟ್ಟದ್ದು. ಏಕೆಂದರೆ, ನೀವು ಅದನ್ನೇ ಕಂಟಿನ್ಯೂ ಮಾಡಿದರೆ ನಿಮಗೆ ಮುಂದಿನ ದಿನ ಕೂಡ ನಿದ್ರೆಯಲ್ಲಿ ಇದ್ದುಬಿಡೋಣ ಅಥವಾ ನಿದ್ದೆ ಮಾಡೋಣ ಅಂತ ಮನಸ್ಸು ಹಂಬಲಿಸುತ್ತೆ. ಇದರಿಂದ ನಿಮ್ಮ ಏಕಾಗ್ರತೆ ಕಡಿಮೆಯಾಗುತ್ತದೆ. ಬುದ್ಧಿಶಕ್ತಿ ವಿಪರೀತವಾಗಿ ಕುಗ್ಗಿ ಹೋಗುತ್ತದೆ. ಹೀಗಾಗಿ, ಮಕ್ಕಳು ಬೆಳಗ್ಗಿನ ಹೊತ್ತು ನಿದ್ರೆ ಮಾಡುವುದನ್ನು ತಪ್ಪಿಸಬೇಕು. ಯುವಕ ಯುವತಿಯರೂ ಕೂಡ ಬೆಳಗ್ನಿಗಿನ ಹೊತ್ತು ನಿದ್ದೆ ಮಾಡುವುದು ಒಳ್ಳೆಯದಲ್ಲ. ಇದರಿಂದ, ನಿಮ್ಮ ಆರೋಗ್ಯ ಕೆಡುತ್ತದೆ. ನಿಮ್ಮ ಆರೋಗ್ಯದ ಸಮಸ್ಯೆ ಇದ್ದಾಗ ಮಾತ್ರ ಬೆಳಗಿನ ಜಾವ ನಿದ್ದೆ ಮಾಡಿ.
Do you sleep all day? Then don’t make this mistake!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











