ಕರ್ನಾಟಕ

ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಭೂಮಿ ಹಂಚಿಕೆ ವಿವಾದ : ನಟ ಚೇತನ್

ಬೆಂಗಳೂರು: Tulu Times l ಕನ್ನಡದ ಅಪ್ರತಿಮ ನಟ, ಡಾ. ರಾಜ್‌ಕುಮಾರ್ ಅವರ ಜನ್ಮದಿನಾಚರಣೆ ರಾಜ್ಯದಾದ್ಯಂತ ಸಂಭ್ರಮದಿಂದ ನಡೆಯುತ್ತಿರುವ ನಡುವೆಯೇ, ನಟ ಹಾಗೂ ಹೋರಾಟಗಾರ ಚೇತನ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಡಾ. ರಾಜ್‌ಕುಮಾರ್ ಸ್ಮಾರಕ ನಿರ್ಮಾಣಕ್ಕಾಗಿ 2006ರಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿ 2.5 ಎಕರೆ ಜಾಗ ಹಂಚಿಕೆ ಮಾಡಲಾಗಿತ್ತು. ಇದೇ ವಿಷಯವನ್ನು ಪ್ರಶ್ನಿಸಿ ಚೇತನ್  ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಚೇತನ್ ಹೇಳಿದ್ದೇನು?

ತಮ್ಮ ಪೋಸ್ಟ್‌ನಲ್ಲಿ ಅವರು, ಡಾ. ರಾಜ್‌ಕುಮಾರ್ ಅವರನ್ನು ಮಹಾನ್ ಕಲಾವಿದ ಹಾಗೂ ಸಾಂಸ್ಕೃತಿಕ ಪ್ರತೀಕ ಎಂದು ಗೌರವಿಸುವುದಾಗಿ ತಿಳಿಸಿದ್ದಾರೆ. ಆದರೆ, ನಗರದ ಮಧ್ಯಭಾಗದಲ್ಲಿ ಒಬ್ಬ ನಟನ ಸಮಾಧಿ ಸಂಕೀರ್ಣಕ್ಕಾಗಿ 2.5 ಎಕರೆ ಅಮೂಲ್ಯ ಜಾಗ ನೀಡಿರುವುದು ಸೂಕ್ತ ನಿರ್ಧಾರವಾಗಿತ್ತೇ ಎಂಬ ಪ್ರಶ್ನೆ ಎತ್ತಿದ್ದಾರೆ. ಇಂದಿನ ಭಾರತದಲ್ಲಿ ಭೂಮಿ ಅತ್ಯಂತ ಪ್ರಮುಖ ಸಂಪನ್ಮೂಲವಾಗಿದ್ದು, ಸರ್ಕಾರಗಳು ಸಾರ್ವಜನಿಕ ಉಪಯೋಗ ಮತ್ತು ಭವಿಷ್ಯೋನ್ಮುಖ ನಗರ ಯೋಜನೆಗೆ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಭಿಮಾನಿಗಳ ಆಕ್ರೋಶ;

ಚೇತನ್ ಹೇಳಿಕೆಯ ಸಮಯವೇ ವಿವಾದ ಹೆಚ್ಚಲು ಕಾರಣವಾಗಿದೆ. ಡಾ. ರಾಜ್‌ಕುಮಾರ್ ಜನ್ಮದಿನದಂದು ಈ ಪೋಸ್ಟ್ ಪ್ರಕಟವಾದ ಕಾರಣ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಪ್ರಕಾರ: ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರಿಗೆ ಸ್ಮಾರಕ ನೀಡುವುದು ನ್ಯಾಯಸಮ್ಮತ ಕೋಟ್ಯಾಂತರ ಕನ್ನಡಿಗರ ಭಾವನೆಗೆ ಇದು ಸಂಬಂಧಿಸಿದೆ.‌ ಸ್ಮಾರಕವು ಕೇವಲ ಕಟ್ಟಡವಲ್ಲ, ಅದು ಸಂಸ್ಕೃತಿ ಮತ್ತು ಸ್ಮರಣೆಯ ಚಿಹ್ನೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಬಗೆಯ ಚರ್ಚೆಗೆ ಕಾರಣವಾಗಿದೆ. ಕೆಲವರು ನಗರಾಭಿವೃದ್ಧಿ ದೃಷ್ಟಿಯಿಂದ ಚೇತನ್ ಮಾತು ಸಮಂಜಸ ಎಂದರೆ, ಮತ್ತೊಬ್ಬರು ಇದು ಡಾ. ರಾಜ್‌ಕುಮಾರ್ ಅಭಿಮಾನಿಗಳಿಗೆ ನೋವುಂಟುಮಾಡುವ ಹೇಳಿಕೆ ಎಂದು ಟೀಕಿಸಿದ್ದಾರೆ.

Controversy over land allocation for Dr. Rajkumar memorial: Actor Chethan – ತುಳುಟೈಮ್ಸ್

ಇದನ್ನೂ ಓದಿ :ಕರ್ನಾಟಕದಲ್ಲಿ ಬರ್ಡ್ ಫ್ಲೂ ಆತಂಕವನ್ನು ಯಶಸ್ವಿಯಾಗಿ ನಿಭಾಯಿಸಿದ ಸರ್ಕಾರ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/EYKaZkoL8Qk?si=jwMR6VPfZHNXvmCL

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 161

You cannot copy content of this page