ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಶಬರಿಮಲೆ ಚಿನ್ನ ಕಳವು ಪ್ರಕರಣ ಮತ್ತೆ ಹೈಕೋರ್ಟ್ ಗೆ; ಅಂತಿಮ ವರದಿ ಸಲ್ಲಿಸಲಿರುವ ಎಸ್‌ಐಟಿ

ತಿರುವನಂತಪುರಂ: Tulu Times l ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಶಬರಿಮಲೆ ಚಿನ್ನ ಕಳವು ಪ್ರಕರಣವು ಮತ್ತೆ ನ್ಯಾಯಾಂಗದ ಗಮನ ಸೆಳೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಚಿನ್ನ ಕಳವು ತನಿಖೆಯ ಪ್ರಗತಿ ಕುರಿತು ವಿಶೇಷ ತನಿಖಾ ತಂಡ ಸೋಮವಾರ ಕೇರಳ ಹೈಕೋರ್ಟ್ ದೇವಸ್ವಂ ಪೀಠದ ಮುಂದೆ ಅಂತಿಮ ಪ್ರಗತಿ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ.

ಕಳೆದ ಸುಮಾರು ಏಳು ತಿಂಗಳಿನಿಂದ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಜಾರ್ಖಂಡ್‌ನ ಜಂಶೆಡ್‌ಪುರದ ಪ್ರಯೋಗಾಲಯದಲ್ಲಿ ಚಿನ್ನದ ಫಲಕಗಳ ಮೇಲೆ ನಡೆಸಲಾದ ವೈಜ್ಞಾನಿಕ ಪರೀಕ್ಷೆಯ ವರದಿಯ ವಿವರಗಳನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಪ್ರಕರಣದಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಿಗೆ ನೀಡಿರುವ ಜಾಮೀನನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ನಡೆಯಲಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ಯುಡಿಎಫ್ ಸರ್ಕಾರ ಈ ಪ್ರಕರಣದಲ್ಲಿ ತನ್ನ ಕಾನೂನು ನಿಲುವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿರುವುದರಿಂದ ವಿಚಾರಣೆಗೆ ಹೆಚ್ಚಿನ ಮಹತ್ವ ಬಂದಿದೆ.

ಹಿಂದೆ ಹೈಕೋರ್ಟ್ ಎಸ್‌ಐಟಿಗೆ ನಾಲ್ಕು ಹಂತಗಳಲ್ಲಿ ತನಿಖೆ ನಡೆಸುವಂತೆ ನಿರ್ದೇಶಿಸಿತ್ತು. ಅವುಗಳೆಂದರೆ:
1998ರಲ್ಲಿ ಯುಬಿ ಗ್ರೂಪ್ ನಡೆಸಿದ ಚಿನ್ನದ ಲೇಪನ ಕಾಮಗಾರಿ
2019ರಲ್ಲಿ ಗರ್ಭಗುಡಿಯ ಬಾಗಿಲಿನ ಫಲಕಗಳ ತೆರವು ಮತ್ತು ಮರು ಚಿನ್ನದ ಲೇಪನ, ದ್ವಾರಪಾಲಕ ಮೂರ್ತಿಗಳ ಚಿನ್ನದ ಲೇಪನ, 2025ರಲ್ಲಿ ಮೂರ್ತಿಗಳಿಗೆ ಮರು ಚಿನ್ನದ ಲೇಪನ
ಎಸ್‌ಐಟಿ ಮಾಹಿತಿ ಪ್ರಕಾರ, ದ್ವಾರಪಾಲಕ ಮೂರ್ತಿಗಳ ಪ್ರಕರಣದಲ್ಲಿ 15 ಆರೋಪಿಗಳು ಹಾಗೂ ಗರ್ಭಗುಡಿಯ ಬಾಗಿಲಿನ ಫಲಕಗಳ ಪ್ರಕರಣದಲ್ಲಿ 12 ಆರೋಪಿಗಳು ಇದ್ದಾರೆ.
ಪ್ರಸ್ತುತ ಪ್ರಕರಣದ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕೆ.ಪಿ ಶಂಕರ್ ದಾಸ್ ಸೇರಿದಂತೆ ಕೆಲವರು ಎಸ್‌ಐಟಿ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಜಾಮೀನು ಪಡೆದಿದ್ದರು.

ಇದೇ ವೇಳೆ ಹಿಂದೂ ಐಕ್ಯ ವೇದಿಕೆಯ ರಾಜ್ಯಾಧ್ಯಕ್ಷ ಆರ್.ವಿ ಬಾಬು ಅವರು ಯುಡಿಎಫ್ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ಶಬರಿಮಲೆ ಚಿನ್ನ ಕಳವು ವಿಚಾರವನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಈಗ ಏಕೆ ಮೌನವಾಗಿದೆ? ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಅವರು ಆರೋಪಿಸಿದ್ದಾರೆ.
ಆದರೆ ರಾಜ್ಯ ಗೃಹ ಸಚಿವ ರಮೇಶ್ ಅವರು ಇತ್ತೀಚೆಗೆ ಭ್ರಷ್ಟಾಚಾರ ವಿರೋಧಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಬರಿಮಲೆ ಅಯ್ಯಪ್ಪನ ಚಿನ್ನವನ್ನು ಕಳವು ಮಾಡಿದ ಯಾರನ್ನೂ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳ ಮೇಲೆ ಕೇರಳದ ಭಕ್ತರು ಹಾಗೂ ಸಾರ್ವಜನಿಕರ ಗಮನ ನೆಟ್ಟಿದೆ.

Sabarimala gold theft case reaches High Court again; SIT to submit final report – ತುಳುಟೈಮ್ಸ್

ಇದನ್ನೂ ಓದಿ :ಬೇಸಿಗೆ ಮತ್ತು ಮಳೆಗಾಲದಲ್ಲಿ ಆಹಾರ ವಿಷಬಾಧೆ ಏಕೆ ಹೆಚ್ಚಾಗುತ್ತದೆ?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/xI868u7lWtY?si=GfSjOSU0BundVRRU

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 182

You cannot copy content of this page