ಕರ್ನಾಟಕ : Tulu Times l ಕರ್ನಾಟಕ ಆರೋಗ್ಯ ಇಲಾಖೆ ಎಬೋಲಾ ವೈರಸ್ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಸಲಹೆ ಪ್ರಕಟಿಸಿದ್ದು, ಪ್ರಯಾಣಿಕರು ಮತ್ತು ಆರೋಗ್ಯ ಅಧಿಕಾರಿಗಳು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣಗಳು ದಾಖಲಾಗಿಲ್ಲವಾದರೂ, ಸೋಂಕು ಹರಡಿದ ದೇಶಗಳಿಗೆ ಇತ್ತೀಚೆಗೆ ಭೇಟಿ ನೀಡಿದವರು 21 ದಿನಗಳೊಳಗೆ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆ ವಿಮಾನ ನಿಲ್ದಾಣಗಳಲ್ಲಿ ನಿಗಾವಹಿಸುವ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದೆ. ಜೊತೆಗೆ ಕ್ವಾರಂಟೈನ್ ಮತ್ತು ಐಸೋಲೇಷನ್ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಎಬೋಲಾ ಪ್ರಕರಣಗಳನ್ನು ನಿರ್ವಹಿಸಲು ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ಚಿಕಿತ್ಸೆಗೆ ಸಿದ್ಧ ಆಸ್ಪತ್ರೆಗಳನ್ನೂ ಗುರುತಿಸಲಾಗಿದೆ. ಈ ಸಲಹೆಯು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ನೀಡಿದ ಎಚ್ಚರಿಕೆಯ ನಂತರ ಹೊರಡಿಸಲಾಗಿದೆ. ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಸಾರ್ವಜನಿಕರಿಗೆ ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಎಬೋಲಾ ಲಕ್ಷಣಗಳು ಯಾವುವು?
ಎಬೋಲಾ ರೋಗವು ವೈರಲ್ ಸೋಂಕಾಗಿದ್ದು, ಇದರ ಪ್ರಮುಖ ಲಕ್ಷಣಗಳು: ಜ್ವರ, ತಲೆನೋವು,ದೇಹ ನೋವು, ವಾಂತಿ, ಜಲದೋಷ, ಚರ್ಮದ ಮೇಲಿನ ರಾಶ್‌ಗಳು ಗಂಭೀರ ಪರಿಸ್ಥಿತಿಯಲ್ಲಿ ಕಾರಣವಿಲ್ಲದ ರಕ್ತಸ್ರಾವವೂ ಕಾಣಿಸಬಹುದು. ಎಬೋಲಾ ಸೋಂಕಿತ ವ್ಯಕ್ತಿಯ: ರಕ್ತ, ದೇಹದ ದ್ರವಗಳು, ಸೋಂಕಿತ ವಸ್ತುಗಳು ಇತ್ಯಾದಿ ಇವುಗಳ ನೇರ ಸಂಪರ್ಕದಿಂದ ಸೋಂಕು ಹರಡಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೇರೆ ದೇಶಗಳಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣ ತಪಾಸಣೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಆ ದೇಶಗಳಿಂದ ಆಗಮಿಸಿದವರು 21 ದಿನಗಳೊಳಗೆ ಯಾವುದೇ ಲಕ್ಷಣ ಅನುಭವಿಸಿದರೆ ತಮ್ಮ ಪ್ರಯಾಣ ಇತಿಹಾಸವನ್ನು ಆರೋಗ್ಯ ಅಧಿಕಾರಿಗಳಿಗೆ ತಕ್ಷಣ ತಿಳಿಸಲು ಸಲಹೆ ನೀಡಲಾಗಿದೆ.
Karnataka government issues Ebola alert; screening tightened at airports – ತುಳು ಟೈಮ್ಸ್
ಇದನ್ನೂ ಓದಿ :ಅತ್ಯಂತ ಅಪರೂಪದ ರಕ್ತ ಗುಂಪು ಯಾವುದು? ಏಕೆ ಅದು ವಿಶೇಷ?
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=NM0tBe15Cbzi85Bp











