ಬ್ರೇಕಿಂಗ್ ನ್ಯೂಸ್
ಕರ್ನಾಟಕ

KARNATAKA: ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಗೊತ್ತಾ…?

KARNATAKA: ಇಂದು ನಾಡಿನೆಲ್ಲೆಡೆ ಎಪ್ಪತ್ತನೇ ವರುಷದ ಕನ್ನಡ ರಾಜ್ಯೋತ್ಸವದ ಸಂಭ್ರಮ. ನಾಡಿನೆಲ್ಲೆಡೆ ಕನ್ನಡದ ಧ್ವಜವೇ ರಾರಾಜಿಸುತ್ತಿದೆ. ಕನ್ನಡ ಮಣ್ಣಿನ ಮಕ್ಕಳಾದ ನಾವು ಕರುನಾಡ ತಾಯಿಯನ್ನು ಪ್ರೀತಿಯಿಂದ ಆರಾಧಿಸುವ ದಿನ ಇಂದು. ಈ ಕನ್ನಡ ರಾಜ್ಯೋತ್ಸವ ಆಚರಣೆ ಮಾಡೋಕೆ ಮುಂಚೆ ಒಂದಿಷ್ಟು ಹಿನ್ನಲೆ ಬಗ್ಗೆ ತಿಳಿದುಕೊಳ್ಳೋಣ…

ಪ್ರತಿ ದಿನವೂ ಕನ್ನಡ ರಾಜ್ಯೋತ್ಸವವಾಗಿರಲಿ….!

ನವೆಂಬರ್‌ ಒಂದು ಎಂದರೆ ಮನೆ ಮನಗಳಲ್ಲಿ ತನುಮನಗಳಲ್ಲಿ, ಬೀದಿ ಬೀದಿಯಲ್ಲಿ, ಕನ್ನಡದ ಬಾವುಟವೇ ಕಾಣುತ್ತಿರುತ್ತದೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡುಗಳು ಹೀಗೆ ಸಂಭ್ರಮದ ವಾತಾವರಣ. ಈ ದಿನ ಮಾತ್ರವಲ್ಲದೇ ಇಡೀ ತಿಂಗಳು ಸಹ ಕನ್ನಡಿಗರು ಕನ್ನಡ ಭಾಷೆಯ ಹಬ್ಬ ಆಚರಿಸುವುದು, ಕನ್ನಡ ನಾಡಿನ ಸಂಸ್ಕೃತ, ಕಲೆ, ಭಾಷೆ ಬಗ್ಗೆ ನೆನೆದು ಮೆಲುಕುಹಾಕುವುದು ಸಾಮಾನ್ಯ. ಹಾಗಾಗಿ ಇದೊಂದು ಸಡಗರದ ಹಬ್ಬ. ನಮ್ಮ ಶಾಲಾ, ಕಾಲೇಜು ದಿನಗಳಲ್ಲಿ ಈ ಹಬ್ಬ ಹಲವು ಸಾಂಸ್ಕೃತಿಕ ಚಟುವಟಿಕೆಳ ಮೂಲಕ ನಡೆಸಲಾಗುತ್ತದೆ ಕನ್ನಡಿಗರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸುತ್ತಿರುವುದು ಗೊತ್ತಿರುವ ವಿಷಯ.ಇನ್ನು ನಮ್ಮ ಕರ್ನಾಟಕ ರಾಜ್ಯಕ್ಕೆ ಮೊದಲಿದ್ದ ಹೆಸರು ಮೈಸೂರು. 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಆರಂಭವಾಯಿತು.

1950 ರಲ್ಲಿ ಭಾರತವು ಗಣರಾಜ್ಯವಾಗುತ್ತದೆ. ಅಲ್ಲಲ್ಲಿ ಚದುರಿ ಹೋಗಿದ್ದ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ವಿವಿಧ ರಾಜ್ಯಗಳನ್ನು ರಚನೆ ಮಾಡಲಾಯಿತು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. 1956 ರ ರಲ್ಲಿ ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯವಾಗುತ್ತದೆ. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

1973ರ ನವೆಂಬರ್‌ 1ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ರಚನೆಗೊಂಡಾಗ 19 ಜಿಲ್ಲೆಗಳನ್ನು ಒಳಗೊಂಡಿತ್ತು. ಈಗ ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ. ಅಂದಿನಿಂದ ಪ್ರತಿ ವರ್ಷ ಕನ್ನಡಿಗರು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಕನ್ನಡದ ಮಕ್ಕಳಾದ ನಾವು ಇಂದು ವಿಜೃಂಭನೆಯಿಂದ ಕನ್ನಡ ಭಾಷೆಯ ದಿನವನ್ನು ಆಚರಿಸುತ್ತಿದ್ದೇವೆ. ಪರಭಾಷೆಗಳ ಹಾವಳಿಯಿಂದ ಕನ್ನಡವನ್ನು ಉಳಿಸಿ, ಬೆಳೆಸೋಣ..ನಾಡಿನ ಸಮಸ್ತ ಕನ್ನಡಿಗರಿಗೆ ಎಪ್ಪತ್ತನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಇದನ್ನೂ ಓದಿ: Karnataka Rajyothsava ಪ್ರಶಸ್ತಿ ಪ್ರಕಟ – ಇಲ್ಲಿದೆ ಲಿಸ್ಟ್‌

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page