ದೇಶ : Tulu Times l ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಬುಧವಾರದಿಂದ ಜಾರಿಗೆ ಬಂದಿದೆ. ಈ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯಿದೆ. ಈ ಒಪ್ಪಂದದ ಪ್ರಮುಖ ಲಾಭ ಭಾರತೀಯ ರಫ್ತುದಾರರಿಗೆ ದೊರೆಯಲಿದ್ದು, ಬ್ರಿಟನ್‌ಗೆ ರಫ್ತಾಗುವ ಸುಮಾರು ಶೇ.99ರಷ್ಟು ಭಾರತೀಯ ಉತ್ಪನ್ನಗಳಿಗೆ ಸುಂಕ ರಹಿತ ಪ್ರವೇಶ ಸಿಗಲಿದೆ.
ಆಮದು ಸುಂಕವನ್ನು ಹಂತ ಹಂತವಾಗಿ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಈ ಬ್ರಿಟಿಷ್ ಉತ್ಪನ್ನಗಳ ಬೆಲೆ ಇಳಿಯುವ ಸಾಧ್ಯತೆ ಇದೆ. ಉದಾ : ಸ್ಕಾಚ್ ವಿಸ್ಕಿ, ಜಿನ್, ಐಷಾರಾಮಿ ಬ್ರಿಟಿಷ್ ಕಾರುಗಳು, ಲಕ್ಸೂರಿ ಮೋಟಾರ್‌ಸೈಕಲ್‌ಗಳು ಸೌಂದರ್ಯವರ್ಧಕ (ಕಾಸ್ಮೆಟಿಕ್ಸ್) ಉತ್ಪನ್ನಗಳು, ಚಾಕೊಲೇಟ್‌ಗಳು, ಬಿಸ್ಕತ್‌ಗಳು, ವೈದ್ಯಕೀಯ ಸಾಧನಗಳು ಕೆಲವು ಆಹಾರ ಉತ್ಪನ್ನಗಳು, ಆದರೆ ಬೆಲೆಗಳು ತಕ್ಷಣವೇ ಕಡಿಮೆಯಾಗುವುದಿಲ್ಲ. ಸುಂಕ ಕಡಿತವನ್ನು ಹಂತ ಹಂತವಾಗಿ ಜಾರಿಗೊಳಿಸುವುದರಿಂದ ಗ್ರಾಹಕರಿಗೆ ಇದರ ಲಾಭ ಕ್ರಮೇಣ ದೊರೆಯಲಿದೆ.

ಯುಕೆ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳಿಗೆ ಸುಂಕ ರಹಿತ ಪ್ರವೇಶ ಸಿಗುವುದರಿಂದ ಈ ಕ್ಷೇತ್ರಗಳಿಗೆ ಹೆಚ್ಚಿನ ಲಾಭವಾಗುವ ನಿರೀಕ್ಷೆಯಿದೆ. ಜವಳಿ ಮತ್ತು ಉಡುಪು ಉದ್ಯಮ, ಚರ್ಮ ಮತ್ತು ಪಾದರಕ್ಷೆ ಉದ್ಯಮ, ರತ್ನ ಮತ್ತು ಆಭರಣ, ಸಮುದ್ರ ಆಹಾರ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ವಾಹನ ಬಿಡಿಭಾಗಗಳು, ಸಂಸ್ಕರಿತ ಆಹಾರ, ರಾಸಾಯನಿಕ ಉತ್ಪನ್ನಗಳು, ಔಷಧ ಉದ್ಯಮ, ಕೃಷಿ ಉತ್ಪನ್ನಗಳು.
ಈ ಒಪ್ಪಂದದಿಂದ ಭಾರತೀಯ ಐಟಿ ಕಂಪನಿಗಳು, ಎಂಜಿನಿಯರ್‌ಗಳು, ವೈದ್ಯಕೀಯ ತಜ್ಞರು, ವಾಸ್ತುಶಿಲ್ಪಿಗಳು, ಅಕೌಂಟೆಂಟ್‌ಗಳು, ಶಿಕ್ಷಣ ಮತ್ತು ಸಲಹಾ ಸೇವಾ ವಲಯಕ್ಕೂ ಬ್ರಿಟನ್‌ನಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಯುಕೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ ಭಾರತೀಯ ವೃತ್ತಿಪರರಿಗೆ ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್ ಅಡಿಯಲ್ಲಿ ಐದು ವರ್ಷಗಳವರೆಗೆ ಎರಡೂ ದೇಶಗಳಲ್ಲಿ ಸಾಮಾಜಿಕ ಭದ್ರತಾ ಕೊಡುಗೆ ಪಾವತಿಸುವ ವಿನಾಯಿತಿ ದೊರೆಯಲಿದೆ. ಇದರಿಂದ ಉದ್ಯೋಗಿಗಳು ಮತ್ತು ಭಾರತೀಯ ಕಂಪನಿಗಳ ವೆಚ್ಚ ಕಡಿಮೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದವನ್ನು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದು, ರೈತರು, ಕಾರ್ಮಿಕರು, MSMEಗಳು, ಸ್ಟಾರ್ಟ್‌ಅಪ್‌ಗಳು ಮತ್ತು ನವೋದ್ಯಮಿಗಳಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
India-UK Free Trade Agreement: Duty-free access for 99% of Indian exports – ತುಳುಟೈಮ್ಸ್
ಇದನ್ನೂ ಓದಿ :ಬಲೂಚಿಸ್ತಾನ್ ಸ್ವಾತಂತ್ರ್ಯ ಘೋಷಣೆ ವೈರಲ್: ನಿಜವೇ? ವದಂತಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/Nn4MYbE63vE?feature=share











