ತುಳುಟೈಮ್ಸ್ : ಒಂದು ತುತ್ತು ಅನ್ನಕ್ಕಾಗಿ ಬಿಕ್ಷೆ ಬೇಡುತ್ತಿದ್ದ ಕಾಲವಿತ್ತು.ಹೊಟ್ಟೆಗೆ ಅನ್ನವಿಲ್ಲ ಅಕ್ಕಿಕೊಡಿ ಸ್ವಾಮಿ ಎಂದು ಮನೆಗೆ ಬಂದು ಬಿಕ್ಷಾಟನೆ ಮಾಡುತ್ತಿದ್ದರು.ಮನೆಯೊಡತಿ ಕೊಟ್ಟ ಒಂಚೂರು ಅಕ್ಕಿಯನ್ನು ಕಣ್ಣಿಗೊತ್ತಿ ಹರಸಿ ಹೋಗುತ್ತಿದ್ದ ಕಾಲವಿತ್ತು.ಆದ್ರೆ ಇದೀಗ ಕಾಲ ಬದಲಾಗಿದೆ.ಅನ್ನದ ಅಕ್ಕಿಯನ್ನು ಬಿಕ್ಷುಕರಿಗೆ ಕೊಟ್ರೆ ಕೆಕ್ಕರಿಸಿ ನೋಡ್ತಿದ್ದಾರೆ.
ಅನ್ನದ ಅಕ್ಕಿಯನ್ನು ಮನೆಗೆ ಕೇಳಿ ಬಂದಾಗ ಅದನ್ನು ದಾನವಾಗಿ ಕೊಟ್ರೆ ಪುಣ್ಯದ ಫಲ ದೊರೆಯುತ್ತದೆ ಅನ್ನುವ ನಂಬಿಕೆಯಿತ್ತು ಆದ್ರೆ ಅದನ್ನೀಗ ಬದಲಾಯಿಸುವ ಪರಿಸ್ಥಿತಿ ಬಂದಿದೆ.ಅಕ್ಕಿಗಿಂತ ಕ್ಯಾಶ್ ಕೊಟ್ರೆ ಜಾಸ್ತಿ ಪುಣ್ಯ ಬರುತ್ತೆ ಅಂತಾ ಬಿಕ್ಷಾಟನೆ ಮಾಡುವವರು ಸಂದೇಶ ಕೊಡುವುದಕ್ಕೆ ಶುರುಮಾಡಿದ್ದಾರೆ.ನಮಗೆ ಬಿಕ್ಷೆಯ ರೂಪದಲ್ಲಿ ಅಕ್ಕಿ ಕೊಡ್ಬೇಡಿ ಬದಲಾಗಿ ಹಣ ಕೊಡಿ ಅಂತಿದ್ದಾರೆ.
ಬಿಕ್ಷಾಟನೆಗೆ ಬರುವವರು ಅಕ್ಕಿಯ ದಾನವನ್ನು ನಿರಾಕರಿಸುವುದಕ್ಕೆ ಪ್ರಮುಖ ಕಾರಣ ಅಂದ್ರೆ ಅಕ್ಕಿ ಅಗ್ಗವಾಗಿರುವುದು.ಸರ್ಕಾರ ಪ್ರತಿಯೊಬ್ಬರಿಗೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿಯನ್ನು ಉಚಿತವಾಗಿ ಕೊಡುವ ಕೆಲಸ ಮಾಡುತ್ತಿದೆ.ಇದ್ರಿಂದಾಗಿ ಅಕ್ಕಿಗೆ ಬೆಲೆ ಇಲ್ಲದಂತಾಗಿದೆ.ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಿಂದ ಅಕ್ಕಿ ಪಡೆದವರ ಮನೆಯಲ್ಲಿ ಅಕ್ಕಿ ಹೆಚ್ಚಾಗಿ ಉಳಿಯುತ್ತಿದೆ.ಹೀಗಾಗಿ ಅಕ್ಕಿ ಬೇಕೆಂದು ಯಾರಿಗೂ ಅನಿಸುತ್ತಿಲ್ಲ.ಸಹಾಯಕ್ಕಾಗಿ ಅಕ್ಕಿ ಕೊಟ್ಟರೇ ನಮಗದು ಬೇಡ ದುಡ್ಡು ಕೊಡಿ ಅನ್ನೋರ ಸಂಖ್ಯೆ ಹೆಚ್ಚಾಗ್ತಿದೆ.
ಉಚಿತ ಅಕ್ಕಿಯ ವಿತರಣೆ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ.ಅಕ್ಕಿಯನ್ನು ಪಡೆದುಕೊಂಡ ಜನರು ಹೆಚ್ಚುವರಿ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.ಎಷ್ಟೇ ಪ್ರಯತ್ನ ಪಟ್ಟರೂ ಕಾಳಸಂತೆಯಲ್ಲಿ ಅಕ್ಕಿ ಮಾರಾಟವನ್ನು ತಡೆಯುವುದು ಕಷ್ಟವಾಗುತ್ತಿದೆ.ಹೋಟೇಲ್,ದಿನಸಿ ಅಂಗಡಿಗಳಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿದೆ.
ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯಿಂದಾಗಿ ಅಕ್ಕಿ ಬೆಲೆ ಕಡಿಮೆಯಾಗುತ್ತಿದೆ.ಜನರಿಗೆ ಅಕ್ಕಿಯ ಮಹತ್ವ ಗೊತ್ತಾಗಬೇಕಾದರೆ ಒಂದಷ್ಟು ದಿನ ಅನ್ನಭಾಗ್ಯ ಯೋಜನೆ ನಿಲ್ಲಲಿ ಅನ್ನೋರು ಇದ್ದಾರೆ.
Even beggars don't need rice, the wealth brought by the Annabhagya scheme! tulutimesಇದನ್ನೂ ಓದಿ : ಕಾಂಗ್ರೆಸ್ ಮುಖಂಡನ ಮಹಾಮೋಸಕ್ಕೆ ಬೆಚ್ಚಿಬಿತ್ತು ಸುರತ್ಕಲ್
……………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











