ಬ್ರೇಕಿಂಗ್ ನ್ಯೂಸ್
ಕರ್ನಾಟಕ

Singer Palak Mucchal: ಬರೋಬ್ಬರಿ 3,800 ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ ಖ್ಯಾತ ಗಾಯಕಿ!

Singer Palak Mucchal: ಖ್ಯಾತ ಗಾಯಕಿ ಪಾಲಕ್ ಮುಚ್ಚಲ್ ಬರೋಬ್ಬರಿ 3,800 ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಕೊಡಿಸಿ ತಾವು ಸಮಾಜಮುಖಿ ಕಾರ್ಯದಿಂದ ಜನ ಮೆಚ್ಚುಗೆ ಗಳಿಸಿದ್ದಾರೆ. ಬಡ ಮಕ್ಕಳ ಹೃದಯಕ್ಕೆ ಜೀವ ತುಂಬಿರುವ ಕಾರ್ಯಕ್ಕೆ ಗಿನ್ನಿಸ್​​ ಬುಕ್​​​ ಆಫ್ ವರ್ಲ್ಡ್​​ ರೆಕಾರ್ಡ್​ ಹಾಗೂ ಲಿಮ್ಕಾ ಬುಕ್​ ಆಫ್ ರೆಕಾರ್ಡ್​ಗೆ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ: ಪತ್ನಿ ಶಿವಶ್ರೀಯನ್ನು ಎತ್ತಿಕೊಂಡು ಮುದ್ದಾಡಿದ ಸಂಸದ ತೇಜಸ್ವಿ ಸೂರ್ಯ!

ಗಿನ್ನಿಸ್ ದಾಖಲೆ ಬರೆದು​​ ಪುಟ ಸೇರಿದ ಖ್ಯಾತ ಗಾಯಕಿ ಹಲವು ಭಾಷೆಗಳಲ್ಲಿ ಹಾಡಿ ಪಾಲಕ್​ ಮುಚ್ಚಲ್​​​​​  ಹಿಂದಿಯ ಹಿಟ್​​ ಸಾಂಗ್​​ಗಳನ್ನ ಹಾಡಿ ಸಂಗೀತ ಪ್ರಿಯರ ಮನ ಗೆದ್ದಿದ್ದರು. ಇದೀಗ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 3,800 ಬಡ ಮಕ್ಕಳ ಹೃದಯಕ್ಕೆ ಜೀವ ನೀಡಿ, ಸಮಾಜಸೇವೆಯಲ್ಲಿ ಹೆಸರುಗಳಿಸಿದ್ದಾರೆ.

ಪಾಲಕ್​ ಮುಚ್ಚಲ್​​​​​ ಮೂಲತಃ ಮಧ್ಯಪ್ರದೇಶದ ಇಂದೋರ್​ ನವರು. ಹಲವು ವರ್ಷಗಳಿಂದ ಹಾಡು ಮತ್ತು ಗೀತೆರಚನೆ ಮಾಡಿ ಜನರನ್ನ ರಂಜಿಸುತ್ತಿದ್ದ ಇವರು ತಮ್ಮ ಆದಾಯದಿಂದ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಿ ಫಂಡ್ ಸಂಗ್ರಹಿಸಿ 3800 ಬಡ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ.  ಪಾಲಕ್​ ಮುಚ್ಚಲ್​​​​ ಅವರ ಈ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರೈಲಿನಲ್ಲಿ ಹೋಗುವಾಗ ಬಡ ಮಕ್ಕಳ ನೋಡಿ ಮನಕರಗಿತ್ತಂತೆ!

ಪಾಲಕ್​ ಮುಚ್ಚಲ್​​​​, ಒಮ್ಮೆ ರೈಲಿನಲ್ಲಿ ಬಡ ಮಕ್ಕಳನ್ನ ಭೇಟಿಯಾಗಿ ಅವರ ಕಷ್ಟಗಳನ್ನ ಕೇಳಿದ್ದರು, ಅಂದು ಪಾಲಕ್​ ಮುಚ್ಚಲ್​​​, ನಾನು ಒಂದು ದಿನ ನನ್ನ ಕೈಲಾದಷ್ಟು ಬಡ ಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು.  2013ರಲ್ಲಿ ಪಾಲಕ್​​ ಮುಚ್ಚಲ್​​ ಅವರು ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಬರೋಬ್ಬರಿ 2.5 ಕೋಟಿ ಹಣವನ್ನ ಸಂಗ್ರಹಿಸಿ ಸುಮಾರು 572 ಮಕ್ಕಳ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದರು. ಗಾಯಕಿ ಪಾಲಕ್​ ಮುಚ್ಚಲ್ ಕಾರ್ಗಿಲ್​​ ಹುತಾತ್ಮರ ಕುಟುಂಬಕ್ಕೂ ನೆರವಾಗಿದ್ದಾರೆ. ಮಾತ್ರವಲ್ಲದೇ, ಗುಜರಾತ್​​ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನಕ್ಕೆ ಸಿಲುಕಿ ನಲುಗಿ ಹೋಗಿದ್ದ ಸಂತ್ರಸ್ತರ ಕುಟುಂಬಗಳಿಗೆ ₹10 ಲಕ್ಷ ರೂ ಸಹಾಯ ಮಾಡಿದ್ದಾರೆ. ಹೆಂಡತಿಯ ಸಮಾಜ ಸೇವೆಗೆ ಗಂಡನ ಸಾಥ್ ನೀಡುತ್ತಿದ್ದು, ​​ಎಲ್ಲಾ ಕಾರ್ಯಕ್ಕೆ ಪತಿ ಮಿಥುನ್​​ ಬೆನ್ನೆಲುಬಾಗಿ ನಿಂತಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page