ಬ್ರೇಕಿಂಗ್ ನ್ಯೂಸ್
ಕರ್ನಾಟಕ

Night Sleep : ಆರಾಮದಾಯಕ ನಿದ್ರೆ‌ ನಿಮ್ಮದಾಗಬೇಕಾದರೆ ಹೀಗೆ ಮಾಡಿ…!

Night Sleep : ಕತ್ತಲೆ ಅಂದ್ರೆ ಕೆಲವರಿಗೆ ತುಂಬಾ ಭಯ. ಇನ್ನು ಕೆಲವರಿಗೆ ಕತ್ತಲೆ ಅಂದ್ರೆ ಒಬ್ಬರೇ ಏಕಾಂತವಾಗಿ ಇರಬೇಕು ಅಂತ ಇಷ್ಟ ಪಡುವ ಕ್ಷಣ. ಕತ್ತಲೆಯಲ್ಲಿ ಏನೇನೋ ಋಣಾತ್ಮಕ ಆಲೋಚನೆಗಳು, ಅಗೋಚರ ಶಕ್ತಿಗಳ ಬಗ್ಗೆ ಹೆದರಿ, ಬೆವರಿಕೊಂಡ ಕಥೆಗಳನ್ನೂ ಕೇಳಿರುತ್ತೇವೆ. ಹಾಗಿರುವಾಗ ನಾವು ಮಲಗುವ ಕೊಠಡಿ ಹೇಗಿರಬೇಕೆಂದು ಇಲ್ಲಿ ತಿಳಿದುಕೊಳ್ಳಿ…!
ವ್ಯಕ್ತಿಯು ನಿದ್ರಿಸುತ್ತಿರುವಾಗ, ಮೆಲಟೋನಿನ್ ಎಂಬ ಸಣ್ಣ ಹಾರ್ಮೋನ್ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ, ಜೀವಕೋಶಗಳನ್ನು ಸರಿಪಡಿಸುತ್ತದೆ, ಚಯಾಪಚಯ ಕ್ರಿಯೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಆಂತರಿಕ ಶಕ್ತಿಯನ್ನು ಎಚ್ಚರ ಮಾಡುತ್ತದೆ. ಕೆಲವರು ತಾವು ಮಲಗುವ ಕೋಣೆಯಲ್ಲಿ ಪೂರ್ತಿಯಾಗಿ ಕತ್ತಲೆಯನು ಬಯಸಿದರೆ, ಇನ್ನೂ ಕೆಲವರು ಸ್ವಲ್ಪ ಬೆಳಕು ನೀಡುವ ಝೀರೋ ಓಲ್ಟ್ ಬಲ್ಬ್ ಗಳ ಬೆಳಕಿನ ಧೈರ್ಯದಲ್ಲಿ ನಿದ್ರಿಸುತ್ತಾರೆ. ಆದರೆ, ನೀವು ನಿದ್ರಿಸುವ ಅವಧಿಯು ನಿಮ್ಮ ಜೀವಿತಾವಧಿಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಮೆದುಳಿಗೆ ಹಗಲಿನ ಸಮಯ ಅಂತ ಅನ್ನಿಸುತ್ತದೆ;
ಸಾವಿರಾರು ವರ್ಷಗಳಿಂದ ಮನುಷ್ಯನ ದೇಹ ಕತ್ತಲೆಯಾದಂತೆ ವಿಶ್ರಾಂತಿ ಪಡೆಯಲು ಎಂದರೆ ನಿದ್ರಿಸಲು ಸಜ್ಜಾಗುತ್ತದೆ. ಮೆದುಳಿನ ಪೀನಲ್ ಗ್ರಂಥಿಯು ಕತ್ತಲೆಯನ್ನು ಗ್ರಹಿಸಿದಾಗ ಮಾತ್ರ ಮೆಲಟೋನಿನ್ ಬಿಡುಗಡೆ ಮಾಡುತ್ತದೆ. ಮೊಬೈಲ್ ಫೋನ್, ಟಿವಿ ಸ್ಕ್ರೀನ್ ನೋಡುತ್ತಾ ಮಲಗುವುದು ಅಥವಾ ಬೀದಿ ದೀಪದ ಬೆಳಕು ಕಿಟಕಿಯಿಂದ ನುಸುಳುವುದರಿಂದ ಮೆದುಳಿಗೆ ಹಗಲಿನ ಸಮಯ ಅಂತ ಅನ್ನಿಸುತ್ತದೆ ಮತ್ತು ಈ ಅಡಚಣೆಯು ಮೆಲಟೋನಿನ್ ಬಿಡುಗಡೆಯನ್ನು ವಿಳಂಬಗೊಳಿಸುತ್ತದೆ. ಇದು ಗಾಢವಾದ ನಿದ್ರೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಾಲಾನಂತರ, ಹೃದಯ ಮತ್ತು ಚಯಾಪಚಯ ಕ್ರಿಯೆಯಂತಹ ಪ್ರಮುಖ ವ್ಯವಸ್ಥೆಗಳನ್ನು ಒತ್ತಡಕ್ಕೆ ಒಳಪಡಿಸುತ್ತವೆ.

ಕಾಯಿಲೆಯ ಅಪಾಯಗಳನ್ನು ಹೆಚ್ಚಿಸುತ್ತದೆ;

2022ರಲ್ಲಿ ನಡೆಸಿದ ಅಧ್ಯಯನವೊಂದು ಮಧ್ಯಮ ಬೆಳಕಿನಲ್ಲಿ ಮಲಗುವುದರಿಂದ ನಿದ್ರೆಯ ಸಮಯದಲ್ಲಿ ಹೃದಯ ಬಡಿತ ಹೆಚ್ಚಾಗುತ್ತದೆ. ಬೆಳಗ್ಗೆ ಇನ್ಸುಲಿನ್ ಸಂವೇದನೆ ಸಹ ಕಡಿಮೆಯಾಗುತ್ತದೆ ಎಂದು ಕಂಡು ಹಿಡಿದಿದೆ. ಇದರರ್ಥ ದೇಹವು ಅರೆ-ಎಚ್ಚರಿಕೆಯ ಸ್ಥಿತಿಯಲ್ಲಿ ಉಳಿಯುತ್ತದೆ, ಅತ್ತ ಪೂರ್ತಿಯಾಗಿ ವಿಶ್ರಾಂತಿ ಪಡೆಯಲು ಅಥವಾ ಸಂಪೂರ್ಣವಾಗಿ ಚೇತರಿಸಿಕೊಳ್ಳಲೂ ಸಹ ಸಾಧ್ಯವಾಗುವುದಿಲ್ಲ. ನಿದ್ರೆಯ ಸಮಯದಲ್ಲಿ ಈ ರೀತಿಯ ಬೆಳಕಿನ ಅಡಚಣೆ ಬೊಜ್ಜು, ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಯ ಅಪಾಯಗಳನ್ನು ಹೆಚ್ಚಿಸುತ್ತದೆ, ಇದು ಜೀವಿತಾವಧಿಗೆ ನಿಕಟ ಸಂಬಂಧ ಹೊಂದಿರುವ ಅಂಶಗಳಾಗಿವೆ.

ಗಾಢವಾದ ಕತ್ತಲೆಯಲ್ಲಿ ನಿದ್ರಿಸುವುದರಿಂದ ದೇಹದಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ ಹಾಗೂ ಮೆದುಳು ಹಗಲಿನಲ್ಲಿ ಸಂಗ್ರಹವಾಗುವ ವಿಷವನ್ನು ಹೊರ ಹಾಕುತ್ತದೆ. ಆದ್ರೆ ಬೆಳಕಿನಲ್ಲಿ ನಿದ್ರಿಸುವವರು ಬೆಳಗ್ಗೆ ಹಾಸಿಗೆಯಿಂದ ಬೇಸರದಿಂದ ಎಚ್ಚರಗೊಳ್ಳಬಹುದು ಅಥವಾ ಮನಸ್ಸಿಗೆ ಕಿರಿಕಿರಿ ಅಂತ ಅನ್ನಿಸಬಹುದು, ಇವೆಲ್ಲವೂ ಹಾರ್ಮೋನುಗಳ ಅಸಮತೋಲನದ ಸೂಕ್ಷ್ಮ ಚಿಹ್ನೆಗಳಾಗಿರುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ :Sullia : ಸುಬ್ರಮಣ್ಯ ಪುರಪ್ರವೇಶ ಮಾಡಿರುವ ಬೆಳ್ಳಿರಥ

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=oE6YV4WTyyckN1vM

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page