ಪುತ್ತೂರು: Tulu Times l ದ್ವಾರಕಾ ಸಮೂಹ ಸಂಸ್ಥೆಗಳ ವಿವಿಧ ನೂತನ ಪ್ರಕಲ್ಪಗಳ ಲೋಕಾರ್ಪಣೆ ಹಾಗೂ ಸಭಾ ಕಾರ್ಯಕ್ರಮವು ‘ಉಜ್ಜೀವನ’ ಸಭಾಂಗಣದಲ್ಲಿ ಜೂ.21 ಕ್ಕೆ ಆದಿತ್ಯವಾರ ಅಪರಾಹ್ನ 3:30ಕ್ಕೆ ನಡೆಯಲಿದೆ.
ವಿವಿಧ ಪ್ರಕಲ್ಪಗಳ ಲೋಕಾರ್ಪಣೆ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಗಣ್ಯರು ವಿವಿಧ ನೂತನ ವಿಭಾಗಗಳನ್ನು ಉದ್ಘಾಟಿಸಲಿದ್ದಾರೆ.

‘ಉಜ್ಜೀವನ ಬಡಾವಣೆ’: ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಜ್ಜೀವನ ಬಡಾವಣೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
‘ದ್ವಾರಕಾ ನೆಸ್ಟ್’: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಅಶೋಕ್ ಕುಮಾರ್ ರೈ ಅವರು ದ್ವಾರಕಾ ನೆಸ್ಟ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.
‘ದ್ವಾರಕಾ ರಿಫ್ರೆಶ್ಮೆಂಟ್’: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಭಾಗೀರಥಿ ಮುರುಳ್ಯ ಅವರು ದ್ವಾರಕಾ ರಿಫ್ರೆಶ್ಮೆಂಟ್ ಅನ್ನು ಉದ್ಘಾಟಿಸಲಿದ್ದಾರೆ.
‘ದ್ವಾರಕಾ ಮಾರ್ಟ್’: ಕರ್ನಾಟಕ ವಿಧಾನ ಪರಿಷತ್ ಶಾಸಕರು ಕಿಶೋರ್ ಕುಮಾರ್ ಪುತ್ತೂರು ಅವರು ದ್ವಾರಕಾ ಮಾರ್ಟ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಇಡೀ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಗೋಪಾಲಕೃಷ್ಣ ಭಟ್ಟ ಅವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕರು ಸಂಜೀವ ಮಠಂದೂರು, ಹಿಂದೂ ಮುಖಂಡರು ಅರುಣ್ ಕುಮಾರ್ ಪುತ್ತಿಲ, ಪುತ್ತೂರಿನ ಮಾಸ್ಟರ್ ಪ್ಲಾನರ್ ಎಸ್. ಕೆ. ಆನಂದ ಕುಮಾರ್, ಬೆಂಗಳೂರಿನ ಭಟ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕರು ಶ್ಯಾಮ ಭಟ್, ಖ್ಯಾತ ಸಂಗೀತ ವಿದ್ವಾಂಸರಾದ ಕಾಂಚನ ರೋಹಿಣಿ ಸುಬ್ಬರತ್ನಮ್, ಉಪ್ಪಿನಂಗಡಿಯ ಖ್ಯಾತ ಮಕ್ಕಳ ತಜ್ಞರಾದ ಡಾ. ಎಂ. ಎನ್. ಭಟ್ ಹಾಗೂ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ರಮೇಶ ಉಪ್ಪಿನಂಗಡಿ ಇವರೆಲ್ಲರ ಉಪಸ್ಥಿತಿಯನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಬೆಂಗಳೂರಿನ ಉದ್ಯಮಿ ಡಾ. ಹೇಮಂತ ರೈ ಮನವಳಿಕೆ, ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಗಳು ರಾಧಾಕೃಷ್ಣ ಕೆ. ಎಸ್., ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ ಭಂಡಾರಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಗುರುಪ್ರಸಾದ್ ಎ. ಬಿ., ಮಂಗಳೂರು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾದ ಸ್ವಾತಿ ಎನ್. ಸ್ವಾಮಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರು ಸದಾನಂದ ಶೆಟ್ಟಿ ಹಾಗೂ ಹಿರೇಬಂಡಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.
ರಾಹುಲ್ ವೆಲ್ಲಾಲ್ ಅವರಿಂದ ‘ಭಕ್ತಿ ಸಂಗೀತ ಸುಧಾ’:
ಸಭಾ ಕಾರ್ಯಕ್ರಮದ ನಂತರ ಸಾಯಂಕಾಲ 6:00 ರಿಂದ 8:00 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂತರರಾಷ್ಟ್ರೀಯ ಖ್ಯಾತಿಯ ಬಾಲ ಗಾಯಕ ರಾಹುಲ್ ವೆಲ್ಲಾಲ್, ಬೆಂಗಳೂರು ಮತ್ತು ಬಳಗದವರಿಂದ ಸುಶ್ರಾವ್ಯವಾದ ‘ಭಕ್ತಿ ಸಂಗೀತ ಸುಧಾ’ ಕಾರ್ಯಕ್ರಮ ಜರುಗಲಿದೆ.
Ujjivan Senior Citizens’ Settlement Launched in Kemmara – ತುಳು ಟೈಮ್ಸ್
ಇದನ್ನೂ ಓದಿ : ಸಾಮಾಜಿಕ ಜಾಲತಾಣ ಪೋಸ್ಟ್ ಬಳಿಕ ಹಣಕ್ಕೆ ಬೇಡಿಕೆ ಆರೋಪ; ಎಫ್‌ಐಆರ್ ದಾಖಲು
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/LMCs_YZtBlU?feature=share











