ಬೆಳ್ತಂಗಡಿ

ಕರಾಯ ಬ್ರಹ್ಮಕಲಶೋತ್ಸವದ ಶುಭಮೂಹೂರ್ತದಲ್ಲಿ ಕಾಣಿಸಿಕೊಂಡ ಗರುಡ!

ಬೆಳ್ತಂಗಡಿ : Tulu Times l ಏ.14 ಸಂಜೆ 4-00 ಗಂಟೆಗೆ ಸರಿಯಾಗಿ ಶ್ರೀ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯಕ್ಕೆ ವೈಧಿಕ ವಿಧಿವಿಧಾನದೊಂದಿಗೆ ಹೊರಟ ಬ್ರಹ್ಮರಥದ ಶೋಭಾಯಾತ್ರೆ ಬಹಳ ಅದ್ಧೂರಿಯಿಂದ ನಡೆದ ನಂತರ ಏ.15ರಿಂದ ಧಾರ್ಮಿಕ ವಿಧಿವಿಧಾನಗಳು, ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಈ ದಿನ (ಏ.20) ಕರಾಯ ಬ್ರಹ್ಮಕಲಶೋತ್ಸವದ ಶುಭಮೂಹೂರ್ತದ ಸಂದರ್ಭ ಸೋಮವಾರ ದಿನದಂದೇ ಆಗಸದಲ್ಲಿ ಗರುಡ ಕಾಣಿಸಿಕೊಂಡಿರುವುದು ಶುಭ ಸಂಕೇತವಾಗಿದೆ.

ಈ ಶುಭಮುಹೂರ್ತದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಎಡನೀರು ಮಠ ಕಾಸರಗೋಡು, ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ, ದುರ್ಗಾದೇವಿಯ ಪುನಃ ಪ್ರತಿಷ್ಠೆ, ನೂತನ ಧ್ವಜಸ್ತಂಭ ಪ್ರತಿಷ್ಠೆ, ವಾಹನ ಪ್ರತಿಷ್ಠೆ, ನಿದ್ರಾಕಲಶಾಭಿಷೇಕ, ನೂತನ ಬ್ರಹ್ಮರಥ ಸಮರ್ಪಣೆ, ಮಹಾಬಲಿಪೀಠ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ ನಡೆಯಿತು.

ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಅವಸ್ರವ ಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಗಂಟೆ 6-00ರಿಂದ ದೀಪಾರಾಧನೆ, ಧ್ವಜಾರೋಹಣ, ಮಹಾಪೂಜೆ, ಶ್ರೀ ಭೂತಬಲಿ ಮಹೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7-00 ರಿಂದ 8-30ರ ತನಕ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತುಲ್ ಕುಮಾರ್ ಕೆ. ಎನ್. ಹಲೇಜಿ, ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ ಕರಾಯ ಇವರು ನಡೆಸಿಕೊಡಲಿದ್ದು, ಧಾರ್ಮಿಕ ಉಪನ್ಯಾಸವನ್ನು ಕಾರ್ಕಳ ಪತ್ರಕರ್ತರು ಶ್ರೀಕಾಂತ್ ಶೆಟ್ಟಿ ನಡೆಸಿಕೊಡಲಿದ್ದಾರೆ. ಅಲ್ಲದೇ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಿದ್ದಾರೆ.

ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದವಿಶಾರದ ಬಿರುದಾಂಕಿತ ಕೃಷ್ಣಪ್ರಸಾದ್ ದೇವಾಡಿಗ ಸಾರಥ್ಯದ ರಾಗಾಮೃತ ತಂಡದ ವಾದ್ಯಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1-00 ರಿಂದ 3-00 ಗಂಟೆ ತನಕ ಯಕ್ಷ ತೆಲಿಕೆ, ಇವೆಲ್ಲಾ ಕಾರ್ಯಕ್ರಮಗಳ ನೇರಪ್ರಸಾರವನ್ನು ತುಳುಟೈಮ್ಸ್ ನಲ್ಲಿ ವೀಕ್ಷಿಸಬಹುದು.

Garuda appeared at the auspicious time of the Karaya Brahma Kalashotsava! – ತುಳುಟೈಮ್ಸ್

ಇದನ್ನೂ ಓದಿ : ಕರಾಯ ಬ್ರಹ್ಮಕಲಶೋತ್ಸವದ ಶುಭಮೂಹೂರ್ತದಲ್ಲಿ ಕಾಣಿಸಿಕೊಂಡ ಗರುಡ!

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ : https://www.youtube.com/live/p8eprnDyBg0?si=dKtzjJnFWYvgdkQQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page