ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇನ್ನು ‘100% Pure’ ಎಂದು ಬರೆಯುವಂತಿಲ್ಲ ; ಎಫ್ಎಸ್ಎಸ್ಎಐ

ನವದೆಹಲಿ: Tulu Times | ಆಹಾರ ಉತ್ಪನ್ನಗಳ ಪ್ಯಾಕೆಟ್‌ಗಳು, ಲೇಬಲ್‌ಗಳು ಹಾಗೂ ಜಾಹೀರಾತುಗಳಲ್ಲಿ “100%”, “100% Pure” ಅಥವಾ ಇದೇ ರೀತಿಯ ಸಂಪೂರ್ಣ ಶುದ್ಧತೆಯನ್ನು ಸೂಚಿಸುವ ಪದಗಳನ್ನು ಬಳಸಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಹಾರ ಉತ್ಪಾದನಾ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಈ ಕ್ರಮದ ಉದ್ದೇಶ ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಯುವುದು ಹಾಗೂ ಆಹಾರ ಉತ್ಪನ್ನಗಳ ಬಗ್ಗೆ ಹೆಚ್ಚು ಪಾರದರ್ಶಕ ಮಾಹಿತಿಯನ್ನು ಒದಗಿಸುವುದಾಗಿದೆ.

ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ನಿಯಮ ;

ಹೊಸ ನಿರ್ದೇಶನದ ಪ್ರಕಾರ, ಎಫ್ಎಸ್ಎಸ್ಎಐ ನಿಯಮಗಳಲ್ಲಿ ಸ್ಪಷ್ಟ ಅನುಮತಿ ಇಲ್ಲದಿದ್ದರೆ ಯಾವುದೇ ಆಹಾರ ಉತ್ಪನ್ನದ ಮೇಲೆ ‘100% Pure’, ‘100%’ ಅಥವಾ ಇದೇ ರೀತಿಯ ಸಂಪೂರ್ಣತೆಯ ಹೇಳಿಕೆಗಳನ್ನು ಬಳಸುವಂತಿಲ್ಲ. ಈ ನಿಯಮವು ಉತ್ಪನ್ನಗಳ: ಪ್ಯಾಕೇಜಿಂಗ್, ಲೇಬಲ್, ಜಾಹೀರಾತು, ಪ್ರಚಾರ ಸಾಮಗ್ರಿಗಳಿಗೂ ಅನ್ವಯವಾಗಲಿದೆ. ಗ್ರಾಹಕರು ತಪ್ಪು ಮಾಹಿತಿಯಿಂದ ದಾರಿತಪ್ಪದಂತೆ ತಡೆಯಲು. ವೈಜ್ಞಾನಿಕವಾಗಿ ಸಾಬೀತುಪಡಿಸಬಹುದಾದ ಹೇಳಿಕೆಗಳನ್ನು ಮಾತ್ರ ಬಳಸುವಂತೆ ಕಂಪನಿಗಳಿಗೆ ಸೂಚಿಸಲು. ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ನಿಯಮ ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳನ್ನು ಜಾರಿಗೊಳಿಸಲು ಎಫ್ಎಸ್ಎಸ್ಎಐ 180 ದಿನಗಳ ಕನಿಷ್ಠ ಪರಿವರ್ತನಾ ಅವಧಿ ;

ಹೊಸ ನಿಯಮದಿಂದ ಆಹಾರ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ಯಾಕೇಜಿಂಗ್ ಹಾಗೂ ಲೇಬಲ್‌ಗಳನ್ನು ಮರು ವಿನ್ಯಾಸಗೊಳಿಸಬೇಕಾಗುತ್ತದೆ. ಇದಲ್ಲದೆ, ಈಗಾಗಲೇ ಮುದ್ರಿಸಲಾದ ಪ್ಯಾಕೆಟ್‌ಗಳು ಮತ್ತು ಲೇಬಲ್‌ಗಳನ್ನು ಬದಲಾಯಿಸಬೇಕಾಗಬಹುದು. ಹಳೆಯ ಸ್ಟಾಕ್‌ಗಳನ್ನು ಮಾರಾಟ ಮಾಡುವುದು ಅಥವಾ ಮರುಪ್ಯಾಕಿಂಗ್ ಮಾಡುವ ಅಗತ್ಯ ಉಂಟಾಗಬಹುದು. ನೂರಾರು ಉತ್ಪನ್ನಗಳನ್ನು ಹೊಂದಿರುವ ದೊಡ್ಡ ಕಂಪನಿಗಳಿಗೆ ಈ ಬದಲಾವಣೆಗಳಿಂದ ನೂರಾರು ಕೋಟಿ ರೂಪಾಯಿ ವೆಚ್ಚ ಆಗುವ ಸಾಧ್ಯತೆಯಿದೆ. ಉದ್ಯಮಕ್ಕೆ 180 ದಿನಗಳ ಕಾಲಾವಕಾಶ ಹೊಸ ನಿಯಮಗಳನ್ನು ಜಾರಿಗೊಳಿಸಲು ಎಫ್ಎಸ್ಎಸ್ಎಐ 180 ದಿನಗಳ ಕನಿಷ್ಠ ಪರಿವರ್ತನಾ ಅವಧಿ ನೀಡಿದೆ. ಈ ಅವಧಿಯಲ್ಲಿ ಕಂಪನಿಗಳು ತಮ್ಮ ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ಅನ್ನು ಹೊಸ ನಿಯಮಗಳಿಗೆ ಅನುಗುಣವಾಗಿ ಬದಲಾಯಿಸಬಹುದು.

‘100% Pure’ cannot be written anymore; FSSAI –  ತುಳು ಟೈಮ್ಸ್

ಇದನ್ನೂ ಓದಿ : 100 ಟ್ರಾಫಿಕ್ ಪ್ರಕರಣಗಳಿದ್ದರೂ ಸಿಕ್ಕಿಬೀಳಲಿಲ್ಲ ; ಈಗ ದಂಡ ಕಟ್ಟಿದ ಬೆಂಗಳೂರಿನ ಸವಾರ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/J9MQHGrBkqg?si=GMyf6zKPg7WpWg42

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page