ಬ್ರೇಕಿಂಗ್ ನ್ಯೂಸ್
ಪುತ್ತೂರು

ಪುತ್ತೂರು : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧರ್ಮ ಶಿಕ್ಷಣ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

ಪುತ್ತೂರು: Tulu Times l ಧರ್ಮಾಭ್ಯುದಯ–ಧರ್ಮ ಶಿಕ್ಷಣ ಸಮಿತಿ, ಪುತ್ತೂರು, ದಕ್ಷಿಣ ಕನ್ನಡ ವತಿಯಿಂದ ಧರ್ಮ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆ.29ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಭಗವದ್ಗೀತೆ ಕಂಠಪಾಠ, ಭಾಷಣ, ಪ್ರಬಂಧ ಹಾಗೂ ಭಜನೆ ಸ್ಪರ್ಧೆಗಳು ನಡೆಯಲಿವೆ. ಭಗವದ್ಗೀತೆ ಕಂಠಪಾಠ ಸ್ಪರ್ಧೆಗೆ ಕೊನೆಯ ಅಧ್ಯಾಯದ ಮೊದಲ ಹತ್ತು ಶ್ಲೋಕಗಳನ್ನು ನಿಗದಿಪಡಿಸಲಾಗಿದೆ. ಭಾಷಣ ಸ್ಪರ್ಧೆಗೆ ‘ಭಗವಾನ್ ಶ್ರೀಕೃಷ್ಣನ ಸಂದೇಶಗಳು’ ಹಾಗೂ ಪ್ರಬಂಧ ಸ್ಪರ್ಧೆಗೆ ‘ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಬೋಧಿಸಿದ ಜೀವನಪಾಠಗಳು’ ಎಂಬ ವಿಷಯಗಳನ್ನು ನೀಡಲಾಗಿದೆ.

Process to purchase 15,000 new buses set in motion: Transport Minister Byrathi Suresh
Credit to original source

ಸ್ಪರ್ಧೆಗಳನ್ನು ಕಿರಿಯ, ಹಿರಿಯ ಹಾಗೂ ಪ್ರೌಢ ಎಂಬ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. 1ರಿಂದ 3ನೇ ತರಗತಿಯ ವಿದ್ಯಾರ್ಥಿಗಳು ಕಿರಿಯ ವಿಭಾಗದಲ್ಲಿ, 4ರಿಂದ 7ನೇ ತರಗತಿಯವರು ಹಿರಿಯ ವಿಭಾಗದಲ್ಲಿ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಪ್ರೌಢ ವಿಭಾಗದಲ್ಲಿ ಭಾಗವಹಿಸಬಹುದಾಗಿದೆ. ಭಜನಾ ಸ್ಪರ್ಧೆಯನ್ನು ಹೊರತುಪಡಿಸಿ ಒಬ್ಬ ವಿದ್ಯಾರ್ಥಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಭಜನಾ ಸ್ಪರ್ಧೆಯು ತಂಡ ಸ್ಪರ್ಧೆಯಾಗಿದ್ದು, ಕನಿಷ್ಠ 4ರಿಂದ ಗರಿಷ್ಠ 6 ಮಂದಿ ಸದಸ್ಯರ ತಂಡ ರಚಿಸಬಹುದು.

ಸ್ಪರ್ಧೆಯ ಸಮಯ ನಿಗದಿ ;

ಭಗವದ್ಗೀತೆ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಗಳಿಗೆ ತಲಾ 5 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರಬಂಧ ಬರೆಯಲು ಒಂದು ಗಂಟೆ ಸಮಯ ನಿಗದಿಪಡಿಸಲಾಗಿದೆ. ಭಜನಾ ಸ್ಪರ್ಧೆಯಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 10 ನಿಮಿಷಗಳ ಕಾಲಾವಕಾಶ ಇರಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರಾಗಿರುವ ಧರ್ಮ ಶಿಕ್ಷಣ ವಿದ್ಯಾರ್ಥಿಗಳು ಆ.27ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ 96636 24597 ಅಥವಾ 94837 87964 ಸಂಖ್ಯೆಗೆ ಕರೆ ಮಾಡಬಹುದು. ಶ್ರೀಕೃಷ್ಣನ ಜೀವನ ಸಂದೇಶಗಳು, ಭಗವದ್ಗೀತೆಯ ತತ್ವಗಳು ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಧರ್ಮಾಭ್ಯುದಯ–ಧರ್ಮ ಶಿಕ್ಷಣ ಸಮಿತಿ ಮನವಿ ಮಾಡಿದೆ.

Puttur: Various competitions for religious education students on the occasion of Sri Krishna Janmashtami – ತುಳುಟೈಮ್ಸ್

ಇದನ್ನೂ ಓದಿ :ಸುಳ್ಯ: ‘ಕಾಡಂಚಿನ ಹಣತೆಗಳು’ ಕೃತಿ ಬಿಡುಗಡೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/f6_23OBB8ws

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page