ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಡಿಕೇರಿ ಆಕಾಶವಾಣಿ : ಆಗಸ್ಟ್ 28ರಂದು ವಿಶೇಷ ಫೋನ್-ಇನ್ ಕಾರ್ಯಕ್ರಮ

ಮಡಿಕೇರಿ: Tulu Times l ಮಡಿಕೇರಿ ಆಕಾಶವಾಣಿ ತನ್ನ ಪ್ರಸಾರ ಸೇವೆಯ 33ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ವಿಶೇಷ ಸಂದರ್ಭವನ್ನು ಕೇಳುಗರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ವಿಶೇಷ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಆಗಸ್ಟ್ 28ರಂದು ಬೆಳಗ್ಗೆ 9.30ರಿಂದ ನಡೆಯಲಿರುವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಕೇಳುಗರು ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಶುಭಾಶಯಗಳನ್ನು ನೇರವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಡಿಕೇರಿ ಆಕಾಶವಾಣಿಯೊಂದಿಗಿನ ತಮ್ಮ ಅನುಭವಗಳು, ಕಾರ್ಯಕ್ರಮಗಳ ಕುರಿತ ಅಭಿಪ್ರಾಯಗಳು ಹಾಗೂ ಪ್ರಸಾರದ ಕುರಿತು ಸಲಹೆಗಳನ್ನು ಕೇಳುಗರು ಕಾರ್ಯಕ್ರಮದ ವೇಳೆ ತಿಳಿಸಬಹುದಾಗಿದೆ.

Process to purchase 15,000 new buses set in motion: Transport Minister Byrathi Suresh
Credit to original source

ಮಡಿಕೇರಿ ಆಕಾಶವಾಣಿಯೊಂದಿಗೆ ಹಲವು ವರ್ಷಗಳಿಂದ ನಂಟು ಹೊಂದಿರುವ ಕೇಳುಗರಿಗೆ ತಮ್ಮ ನೆಚ್ಚಿನ ಕಾರ್ಯಕ್ರಮಗಳು, ನಿರೂಪಕರು ಹಾಗೂ ಪ್ರಸಾರ ಸೇವೆಯ ಕುರಿತು ಮಾತನಾಡಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ. ಆಕಾಶವಾಣಿಯ 33 ವರ್ಷಗಳ ಪಯಣದಲ್ಲಿ ಕೇಳುಗರ ಪ್ರೀತಿ, ಬೆಂಬಲ ಮತ್ತು ಸಹಕಾರ ಮಹತ್ವದ ಪಾತ್ರ ವಹಿಸಿದ್ದು, ಈ ವಿಶೇಷ ಕಾರ್ಯಕ್ರಮದ ಮೂಲಕ ಅವರೊಂದಿಗೆ ನೇರವಾಗಿ ಸಂವಾದ ನಡೆಸಲು ಉದ್ದೇಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಳುಗರು 08272-228558 ಅಥವಾ 08272-228129 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ, ತಮ್ಮ ಅನಿಸಿಕೆ, ಶುಭಾಶಯ ಅಥವಾ ಸಂದೇಶಗಳನ್ನು 63617 03572 ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ.

ವಿಶೇಷ ಕಾರ್ಯಕ್ರಮದ ಅಂಗವಾಗಿ ಕೇಳುಗರಿಂದ ವಿಡಿಯೊ ಸಂದೇಶಗಳನ್ನೂ ಆಹ್ವಾನಿಸಲಾಗಿದೆ. ತಮ್ಮ ವಿಡಿಯೊಗಳನ್ನು radiomadikeri@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಕೇಳುಗರ ವಿಡಿಯೊ ಸಂದೇಶಗಳು ಹಾಗೂ ಶುಭಾಶಯಗಳನ್ನು ಕಾರ್ಯಕ್ರಮದಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಮಡಿಕೇರಿ ಆಕಾಶವಾಣಿಯ 33ನೇ ವರ್ಷದ ಸಂಭ್ರಮವನ್ನು ಕೇಳುಗರೊಂದಿಗೆ ಹಂಚಿಕೊಳ್ಳುವ ಈ ವಿಶೇಷ ಫೋನ್-ಇನ್ ಕಾರ್ಯಕ್ರಮವು ನೇರ ಸಂವಾದದ ಮೂಲಕ ಆಕಾಶವಾಣಿ ಮತ್ತು ಅದರ ಶ್ರೋತೃಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ. ಮಡಿಕೇರಿ ಹಾಗೂ ಕೊಡಗು ಜಿಲ್ಲೆಯ ಆಕಾಶವಾಣಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಮತ್ತು ಶುಭಾಶಯಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದೆ.

Madikeri Akashvani: Special phone-in programme on August 28 – ತುಳುಟೈಮ್ಸ್

ಇದನ್ನೂ ಓದಿ :ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳಿಗಾಗಿ ‘ಸಂಕಲ್ಪ ಮಕ್ಕಳ ಹಬ್ಬ’ 2026

==

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/aaO7S8GGYgs

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page