ಬೆಳ್ತಂಗಡಿ : Tulu Times l ಬೆಳ್ತಂಗಡಿ ತಾಲೂಕಿನ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹೀಗಿದೆ ದಿನಾಂಕ 21, ಮಂಗಳವಾರ ಬೆಳಿಗ್ಗೆ ಗಂಟೆ 6-30ರಿಂದ : ಉಷಃಪೂಜೆ, ದೇವರ ಬಲಿಹೊರಟು ಉತ್ಸವ ನಡೆದಿರುತ್ತದೆ. ಮಧ್ಯಾಹ್ನ ಗಂಟೆ 12.00ಕ್ಕೆ : ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 7.೦೦ಕ್ಕೆ : ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ವಸಂತ ಕಟ್ಟೆ ಪೂಜೆ. ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 7-00 ರಿಂದ 8-30ರ ತನಕ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಬೆಂಗಳೂರಿನ ಉದ್ಯಮಿ ನಾಗಾರ್ಜುನ ರಾವ್ ನಡೆಸಿಕೊಡಲಿದ್ದು, ಧಾರ್ಮಿಕ ಉಪನ್ಯಾಸವನ್ನು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠ ಮುಖ್ಯಸ್ಥ ಡಾ| ತುಕರಾಮ ಪೂಜಾರಿ ನಡೆಸಿಕೊಡಲಿದ್ದಾರೆ. ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ;
ಬೆಳಗ್ಗೆ 11.00 ರಿಂದ 12.30ರ ತನಕ ಭಕ್ತಿ ಭಾವ ಗಾನ ಸಂಭ್ರಮ, ಸಂಜೆ 5.00 ರಿಂದ 6.30ರ ತನಕ ಗಾನ ನೃತ್ಯ ವೈಭವ ಹಾಗೂ ರಾತ್ರಿ 9.00 ರಿಂದ ಮಾನಸ ಡ್ಯಾನ್ಸ್ ಕ್ರೀವ್ ಕಲ್ಲೇರು ಇವರಿಂದ ನೃತ್ಯ ಕಾರ್ಯಕ್ರಮ ಮೂಡಿಬರಲಿದೆ. ಈ ಎಲ್ಲಾ ಕಾರ್ಯಕ್ರಮಗಳು ತುಳುಟೈಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗುತ್ತದೆ.
Karaya Brahmakalash Today’s (Apr. 21) Programs – ತುಳುಟೈಮ್ಸ್
ಇದನ್ನೂ ಓದಿ :ಕನ್ನಡಕ ಒರೆಸುವಾಗ ನಿಮ್ಮ ವಸ್ತ್ರಕ್ಕೆ ಉಜ್ಜುವುದನ್ನು ಬಿಡಿ: ವೈಜ್ಞಾನಿಕ ವಿಧಾನ ಏನು ಹೇಳುತ್ತದೆ?
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/qTCtqJXQ6Ak?si=gaZ7UWnKtgHgZIgS











