ಉಜಿರೆ : Tulu Times | ಉಜಿರೆಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾ(ನಿ.) ಸಂಘದ ನೂತನ ಕಟ್ಟಡ ‘ಉತ್ಥಾನ’, ದಿನಾಂಕ ಜೂನ್ 06, 2026ರ ಶನಿವಾರ ಬೆಳಗ್ಗೆ ಗಂಟೆ 10:45 ಕ್ಕೆ ಉದ್ಘಾಟನೆಗೊಳ್ಳಲಿದೆ.
ನೂತನ ಕಟ್ಟಡ ಹಾಗೂ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಮಾನ್ಯ ಅಧ್ಯಕ್ಷರು, ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಉಜಿರೆಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾ(ನಿ.) ಸಂಘದ ಅಧ್ಯಕ್ಷರು ಕೇರಿಮಾರ್ ಬಾಲಕೃಷ್ಣ ಗೌಡ ವಹಿಸಲಿದ್ದಾರೆ.
ಉದ್ಘಾಟಕರುಗಳಾಗಿ;
ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹರೀಶ್ ಪೂಂಜ, ಸಭಾಂಗಣದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರ ವಿಧಾನ ಪರಿಷತ್ ಮಾನ್ಯ ಶಾಸಕರು ಕೆ. ಪ್ರತಾಪಸಿಂಹ ನಾಯಕ್, ಪಡಿತರ ವಿಭಾಗ ಉದ್ಘಾಟಕರು ಮಂಗಳೂರು ಮೆಸ್ಕಾಂ ಮಾನ್ಯ ಅಧ್ಯಕ್ಷರು ಕೆ. ಹರೀಶ್ ಕುಮಾರ್, ಲಿಫ್ಟ್ ಉದ್ಘಾಟನೆಯನ್ನು ಮಂಗಳೂರು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಶಶಿಕುಮಾರ್ ರೈ ಬಾಲ್ಯೊಟ್ಟು, ಮೀಟಿಂಗ್ ಹಾಲ್ ಉದ್ಘಾಟನೆಯನ್ನು ಬೆಂಗಳೂರು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರು ರಕ್ಷಿತ್ ಶಿವರಾಂ ನೆರವೇರಿಸಲಿದ್ದಾರೆ. ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಟ್ವೆಟ್ನಾಯ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಹಾಗೂ ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಕುಶಾಲಪ್ಪ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ;
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ಬೆಳ್ತಂಗಡಿಯ ಮಾನ್ಯ ಅಧ್ಯಕ್ಷರು, ಸಹಕಾರಿ ಯೂನಿಯನ್ ನ ಸತೀಶ್ ಕಾಶಿಪಟ್ಣ, ಮಾನ್ಯ ಸಹಕಾರಿ ಸಂಘಗಳ ಉಪನಿಬಂಧಕರು ರಮೇಶ್ ಹೆಚ್.ಎನ್., ಪುತ್ತೂರಿನ ಮಾನ್ಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ರಘು ಎಸ್.ಎಂ. ಆಗಮಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ;
ಸಂಜೆ ಗಂಟೆ 5.30 ಕ್ಕೆ ಉಜಿರೆಯ ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಇವರಿಂದ ಗಾನನೃತ್ಯ ವೈಭವ, ರಾತ್ರಿ ಗಂಟೆ 7.30 ರಿಂದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಮಂಗಳೂರಿನ ಸಾಯಿಶಕ್ತಿ ಕಲಾಬಳಗ, ಉರ್ವ ಚಿಲಿಂಬಿ ಇವರಿಂದ ‘ಜೋಡು ಜೀಟಿಗೆ’ ತುಳು ಜನಪದ ನಾಟಕ ನಡೆಯಲಿರುವುದು.
ರಾತ್ರಿ ಗಂಟೆ 7.00ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರ ಮಾನ್ಯ ಸಭಾಪತಿ ಯು.ಟಿ ಖಾದರ್ ಫರೀದ್, ಸಭಾಧ್ಯಕ್ಷತೆಯನ್ನು ಉಜಿರೆಯ ಪ್ರಾ.ಕೃ.ಸ.ಸೇ.ಸಂಘದ ಅಧ್ಯಕ್ಷರು ಕೇರಿಮಾರ್ ಬಾಲಕೃಷ್ಣ ಗೌಡ ಹಾಗೂ ಮುಖ್ಯ ಅತಿಥಿಗಳಾಗಿ ಉಜಿರೆಯ ಸಂಸ್ಕರಣಾ ಸಹಕಾರಿ ಸಂಘ ಹಾಗೂ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಅಧ್ಯಕ್ಷರು ಶ್ರೀಧರ ಜಿ. ಭಿಡೆ ಹಾಗೂ ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರುಗಳು ರೆl ಫಾ l ಅವೆಲ್ ಲೋಬೋ ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸ್ವಾಗತ ಬಯಸುವವರು ; ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ರೈ, ಉಪಾಧ್ಯಕ್ಷರು ಕೆ. ಶ್ರೀಧರ ಪೂಜಾರಿ, ಅಧ್ಯಕ್ಷರು ಕೇರಿಮಾರ್ ಬಾಲಕೃಷ್ಣ ಗೌಡ ಹಾಗೂ ನಿರ್ದೇಶಕರುಗಳಾಗಿ, ಅರುಣ್ ಕುಮಾರ್, ಪುಷ್ಪಾವತಿ ಆರ್. ಶೆಟ್ಟಿ, ಗುರುರಾಜ್, ಅನಿಲ್ ಪ್ರಕಾಶ್ ಡಿಸೋಜಾ, ಸಾಧು ಎಂ., ರಜತ್ ಗೌಡ, ವಾರಿಜಾ ಎಸ್. ಗೌಡ, ಅರವಿಂದ ಕಾರಂತ, ಅಣ್ಣು ನಾಯ್ಕ, ಸುದರ್ಶನ್ ಹಾಗೂ ಸಿಬ್ಬಂದಿ ವರ್ಗ.
Ujire: Primary Agricultural Cooperative Society’s new building ‘Utthana’ inaugurated – ತುಳು ಟೈಮ್ಸ್
ಇದನ್ನೂ ಓದಿ : ದೆಹಲಿಯ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ: 21 ಮಂದಿ ಸಾವು, ಹಲವರು ಗಾಯ
==
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=BUkb37feGIv-AGnZ











