ಬೆಳ್ತಂಗಡಿ : Tulu Times l ಕರಾಯ ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಇಂದಿನ ಕಾರ್ಯಕ್ರಮಗಳ ವಿವರ ಇಲ್ಲಿವೆ. ದಿನಾಂಕ 17, ಶುಕ್ರವಾರ ಬೆಳಿಗ್ಗೆ ಗಂಟೆ 5:30ರಿಂದ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಸ್ವಶಾಂತಿ, ಶ್ವಾನಶಾಂತಿ, ಅದ್ಭುತಶಾಂತಿ, ಚೋರಶಾಂತಿ, ಹೋಮಾದಿಗಳು. ಮಧ್ಯಾಹ್ನ ಗಂಟೆ 12-00ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
ಸಂಜೆ ಗಂಟೆ 5-30ರಿಂದ : ದೀಪಾರಾಧನೆ, ಅಂಕುರಪೂಜೆ, ಕುಂಭೇಶ ಕರ್ಕರೀಪೂಜೆ, ಅನುಜ್ಞಾ ಕಲಶ ಪೂಜೆ, ಪರಿಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 7-00 ಯಿಂದ 8-30 ರ ತನಕ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಹಾಗೂ ಧಾರ್ಮಿಕ ಉಪನ್ಯಾಸವನ್ನು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಿನ ಉಪನ್ಯಾಸಕರು ಕೇಶವ ಬಂಗೇರ ನಡೆಸಿಕೊಡಲಿದ್ದು, ವಿವಿಧ ಕ್ಷೇತ್ರದವರನ್ನು ಗುರುತಿಸಿ ಗೌರವಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ;
ಸಂಜೆ 4-00 ರಿಂದ 6-30 ರ ತನಕ ವಂದನಾ ಮೂರ್ತಿ ಮತ್ತು ವಿನ್ಯಾಸ್ ಕುದ್ದಣ್ಣಾಯ ಇವರಿಂದ ‘ಸುಗಮ ಸಂಗೀತ’, ರಾತ್ರಿ 9-00 ರಿಂದ ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಗೆಜ್ಜೆಗಿರಿ ಇವರಿಂದ, ‘ಓಂ ನಮಃ ಶಿವಾಯ’ ಪೌರಾಣಿಕ ಕಥಾನಕ ಹಾಗೂ ರಾತ್ರಿ 10.00 ರಿಂದ ಶಾಂತಾ ಕುಂಟಿನಿ ಸಾರಥ್ಯದ ಸತ್ಯ ಶಾಂತ ಪ್ರತಿಷ್ಠಾನ ಅರ್ಪಿಸುವ ‘ಗಾನ ನೃತ್ಯ ಸಂಭ್ರಮ’ ಕಾರ್ಯಕ್ರಮ ಮೂಡಿಬರಲಿದೆ. ತುಳುಟೈಮ್ಸ್ ನಲ್ಲಿ ಕಾರ್ಯಕ್ರಮಗಳ ನೇರಪ್ರಸಾರ ಇರಲಿದೆ.
Karaya Brahmakalash Today’s (Apr. 17) Programs – ತುಳುಟೈಮ್ಸ್
ಇದನ್ನೂ ಓದಿ :ಭಾರತ–ರಷ್ಯಾ ಉಕ್ಕು ಕ್ಷೇತ್ರದಲ್ಲಿ ಸಹಕಾರ ಬಲಪಡಿಸಲು ಚರ್ಚೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/ljxEaovzX1g?si=3jyV37TNmPNOphZN











