ಬ್ರೇಕಿಂಗ್ ನ್ಯೂಸ್
ಪುತ್ತೂರು

ಮೂರು ವಾರಗಳ ಬಳಿಕ ಮರಳಿದ ನಾಯಿ ; ಸಂತಸದಲ್ಲಿ 50 ಸಾವಿರ ಬಹುಮಾನ ನೀಡಿದ ಮಾಲೀಕ

ಪುತ್ತೂರು : Tulu Times l ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ನಿವಾಸಿ ಗಣೇಶ್ ಅವರ ಮನೆಯಿಂದ ಕಾಣೆಯಾಗಿದ್ದ ‘ಚಿನ್ನು’ ಎಂಬ ಸಾಕು ನಾಯಿ ಮೂರು ವಾರಗಳ ಬಳಿಕ ಪತ್ತೆಯಾಗಿದೆ. ನಾಯಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಕರೆತಂದ ವ್ಯಕ್ತಿಗೆ ಮಾಲೀಕರು ಘೋಷಿಸಿದ್ದಂತೆ ₹50,000 ಬಹುಮಾನ ನೀಡಿ ಮಾತು ಉಳಿಸಿಕೊಂಡಿದ್ದಾರೆ.

ಗಣೇಶ್ ಅವರು ವಿವಿಧ ತಳಿಗಳ ಸುಮಾರು 30ಕ್ಕೂ ಹೆಚ್ಚು ನಾಯಿಗಳನ್ನು ಸಾಕುತ್ತಿದ್ದಾರೆ. ಕಾಣೆಯಾಗಿದ್ದ ‘ಚಿನ್ನು’ ದೇಶಿ ತಳಿಯ ನಾಯಿಯಾಗಿದ್ದು, ಈ ಹಿಂದೆ ಫಿಟ್ಸ್ ಸಮಸ್ಯೆಯಿಂದ ಬಳಲಿದ್ದ ಕಾರಣ ಅದರ ಕಾಲುಗಳ ನಿಯಂತ್ರಣವೂ ಕಡಿಮೆಯಾಗಿತ್ತು ಎಂದು ತಿಳಿದುಬಂದಿದೆ. ಮೂರು ವಾರಗಳ ಹಿಂದೆ ಚಿನ್ನು ಕಾಣೆಯಾಗುತ್ತಿದ್ದಂತೆಯೇ ಗಣೇಶ್ ಅವರು ವ್ಯಾಪಕ ಹುಡುಕಾಟ ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಪಟ್ಟಣದ ವಿವಿಧೆಡೆ ಬ್ಯಾನರ್‌ಗಳನ್ನು ಅಳವಡಿಸಿ ಸಾರ್ವಜನಿಕರಿಂದ ಮಾಹಿತಿ ಕೋರಿದ್ದರು. ಅಲ್ಲದೆ, ನಾಯಿಯನ್ನು ಪತ್ತೆಹಚ್ಚುವವರಿಗೆ ಅಥವಾ ಸುಳಿವು ನೀಡುವವರಿಗೆ ₹50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ನಾಯಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಾಲೀಕರಿಗೆ ಒಪ್ಪಿಸಿದ್ದಾರೆ;

ಕೊನೆಗೆ ಪೋಳ್ಯದ ನಿವಾಸಿ ಪುರಂದರ ಅವರು ನಾಯಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಇದರಿಂದ ಸಂತಸಗೊಂಡ ಗಣೇಶ್  ಅವರು ಘೋಷಿಸಿದಂತೆ ಪುರಂದರ ಅವರಿಗೆ 50,000 ರೂ. ನಗದು ಬಹುಮಾನ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಂತಸ ಹಂಚಿಕೊಂಡಿರುವ ಗಣೇಶ್,‌ ಚಿನ್ನು ಮತ್ತೆ ಮನೆಗೆ ಮರಳಿದೆ. ಅದನ್ನು ಪತ್ತೆಹಚ್ಚಿ ಕರೆತಂದ ಪೋಳ್ಯದ ಪುರಂದರ ಅವರಿಗೆ 50 ಸಾವಿರ ಬಹುಮಾನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

‘Chinnu’ returns after three weeks; Owner gives 50 thousand as reward in joy – ತುಳುಟೈಮ್ಸ್

ಇದನ್ನೂ ಓದಿ :ಗೇಟ್ ಹೊರಗೆ ಕಣ್ಣೀರು, ಒಳಗೆ ಪರೀಕ್ಷೆ; ನೀಟ್ ಕೇಂದ್ರದ ಬಳಿ ಮನಕಲಕುವ ಘಟನೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/NooGV7lnipo

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page