ಬೆಂಗಳೂರು: Tulu Times l ರಾಜ್ಯದಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇರಿದಂತೆ ಆಹಾರ ವಹಿವಾಟು ಸಂಸ್ಥೆಗಳಿಗೆ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಇತ್ತೀಚಿನ ತಪಾಸಣೆಗಳಲ್ಲಿ ಆಹಾರ ಸಂಗ್ರಹಣೆ ಮತ್ತು ಸ್ವಚ್ಛತೆಯಲ್ಲಿ ಲೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ.

ಮಾರ್ಗಸೂಚಿಯಂತೆ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನಿರ್ವಹಿಸುವುದು ಕಡ್ಡಾಯವಾಗಿದೆ. ಆಹಾರ ಪದಾರ್ಥಗಳು ಪರಸ್ಪರ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕ ಪಾತ್ರೆ, ಉಪಕರಣ ಹಾಗೂ ಸಂಗ್ರಹಣಾ ವ್ಯವಸ್ಥೆ ಬಳಸುವಂತೆ ಸೂಚಿಸಲಾಗಿದೆ.
ಈಗಾಗಲೇ ತಯಾರಿಸಿದ ಆಹಾರವನ್ನು ಮರುಬಿಸಿ ಮಾಡುವಾಗ ಸುರಕ್ಷಿತ ತಾಪಮಾನ ಕಾಪಾಡಬೇಕು. ಮೈಕ್ರೋವೇವ್‌ನಲ್ಲಿ ಮರುಬಿಸಿ ಮಾಡುವ ಆಹಾರವನ್ನು ಕನಿಷ್ಠ 75°C ತಾಪಮಾನಕ್ಕೆ ತಲುಪಿಸುವುದು ಆಹಾರ ಸುರಕ್ಷತಾ ಮಾರ್ಗಸೂಚಿಗಳಲ್ಲಿದೆ.
ಇದರ ಜೊತೆಗೆ ಹೋಟೆಲ್‌ಗಳು ತಮ್ಮ FSSAI ಪರವಾನಗಿ ಅಥವಾ ಪ್ರಮಾಣಪತ್ರವನ್ನು ಗ್ರಾಹಕರಿಗೆ ಗೋಚರಿಸುವ ಸ್ಥಳದಲ್ಲಿ ಪ್ರದರ್ಶಿಸುವುದು ಸೇರಿದಂತೆ ಅಗತ್ಯ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಆಹಾರ ಸಂಗ್ರಹಣೆ, ಅಡುಗೆಮನೆಯ ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ಆಹಾರ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
New guidelines for hotels: Separate storage for vegetarian and non-vegetarian food made mandatory – ತುಳುಟೈಮ್ಸ್
ಇದನ್ನೂ ಓದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸುರಕ್ಷತೆಗೆ ದೊಡ್ಡ ಶಾಕ್
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/OI2pvxDU5y0











