Sivasri Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ವೇಳೆ ಸಂಸದ ತನ್ನ ಪತ್ನಿ ಶಿವಶ್ರೀ ಅವರನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ರೂಮರ್ಸ್‌ಗೆ ಫುಲ್ ಸ್ಟಾಪ್ ಇಟ್ಟ ಮುರುಗ ಇಶಿತಾ ಜೋಡಿ..!
ಈ ಬಾರಿ ಸಂಸದ ತೇಜಸ್ವಿ ಸೂರ್ಯ 40 ನಿಮಿಷ ವೇಗವಾಗಿ, 7 ಗಂಟೆ 49 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ. ಪತಿಯ ಈ ಸಾಧನೆ ಬಗ್ಗೆ ಶಿವಶ್ರೀ ಸ್ಕಂದಪ್ರಸಾದ್ ಸಂತಸದಲ್ಲಿದ್ದಾರೆ. ತನ್ನ ಪತಿಯನ್ನು ಶಿವಶ್ರೀ ಮ್ಯಾನ್ ಆಫ್ ಸ್ಟೀಲ್ ಎಂದು ಹಾಡಿ ಹೊಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶಿವಶ್ರೀ ಎರಡನೇ ಬಾರಿ ಐರನ್‌ಮ್ಯಾನ್ 70.3 ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕೆ ‘ಮ್ಯಾನ್ ಆಫ್ ಸ್ಟೀಲ್’ ನನ್ನ ಪತಿ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ಹಿಂದಿನ ಬಾರಿ ಹೋಲಿಸಿದರೆ 40 ನಿಮಿಷ ಕಡಿಮೆ ಸಮಯದಲ್ಲಿ ಗುರಿಯನ್ನ ಪೂರ್ಣಗೊಳಿಸಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಧ್ರುವಂತ್ ತಲೆಯಲ್ಲಿ ಸೆಗಣಿ ತುಂಬಿದೆ..ಮಾಳು ಟಾಂಗ್!!
ಶಿವಶ್ರೀ ಸ್ಕಂದಪ್ರಸಾದ್ ಅವರು ಕೂಡ ಐರನ್‌ಮ್ಯಾನ್ 70.3ರಲ್ಲಿ ಭಾಗಿಯಾಗಿದ್ದು, 90 ಕಿ.ಮೀ. ಸೈಕ್ಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ನನ್ನ ವೈಯಕ್ತಿಕ ಕೋಚ್ ಮತ್ತು ಮುಖ್ಯ ಪ್ರೇರಣಾದಾಯಕರಾಗಿ ನನ್ನ ಐರನ್‌ಮ್ಯಾನ್ ಸರಣಿಯನ್ನು ಮುಂದುವರಿಸಲು ನೀವು ನೆರವಾಗಿದ್ದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ನನ್ನ ಬೆನ್ನಿನ ಹಿಂದೆ ಬೆಂಬಲವಾಗಿ ಇದ್ದೀರಿ ಎಂಬುದು ನನಗೆ ಗೊತ್ತಿದೆ ಎಂದು ಶಿವಶ್ರೀ ಸ್ಕಂದಪ್ರಸಾದ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಬಾಂಬ್ ಸ್ಟೋಟದಲ್ಲಿ ಮೃತಪಟ್ಟವರಿಗೆ ಸಿಎಂ 10 ಲಕ್ಷ ಪರಿಹಾರ !
ಸಂಸದ ಸೂರ್ಯ ಸ್ಪರ್ಧೆಯ ಮೂರು ಕಠಿಣ ಹಂತಗಳಾದ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳನ್ನು ತೆಗೆದುಕೊಂಡಿದ್ದರು. ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟದಲ್ಲಿ ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ನೋಡಿ ಸಂತೋಷವಾಯಿತು. ಈ ಐರನ್‌ಮ್ಯಾನ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಲ್ಲಿ ನಮ್ಮ ಪಕ್ಷದ ಯುವ ಸಹೋದ್ಯೋಗಿಗಳಾದ ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಸೇರಿದ್ದಾರೆ ಎನ್ನುವುದು ಸಂತೋಷ ಎಂದಿದ್ದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











