ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯದಲ್ಲಿ ಯಕ್ಷಗಾನದ ರಂಗು: ‘ಭೃಗು ಶಾಪ’ ತಾಳಮದ್ದಳೆಗೆ ಭರ್ಜರಿ ಸ್ಪಂದನೆ

ಸುಳ್ಯ : Tulu Times l ರಂಗ ಮಯೂರಿ ಕಲಾಶಾಲೆ (ರಿ.), ಸುಳ್ಯ ವತಿಯಿಂದ ಲಯನ್ಸ್ ಕ್ಲಬ್ ಸುಳ್ಯ, ಸಂದ್ಯಾರಶ್ಮಿ ಸಾಹಿತ್ಯ ಸಂಘ, ಪ್ರೆಸ್ ಕ್ಲಬ್ ಸುಳ್ಯ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜೇಸಿಐ ಪಯಸ್ವಿನಿ, ಜೇಸಿಐ ಸುಳ್ಯ ಸಿಟಿ, ರೋಟರಿ ಕ್ಲಬ್ ಸುಳ್ಯ ಹಾಗೂ ಕಲಾ ಪ್ರಕಾಶ ಪ್ರತಿಷ್ಠಾನ (ರಿ.), ಮುಂಬೈ ಸಂಸ್ಥೆಗಳ ಸಹಯೋಗದಲ್ಲಿ ‘ಭೃಗು ಶಾಪ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಭಾನುವಾರ ಸಂಜೆ ರಂಗ ಮಯೂರಿ ಕಲಾಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೋಟೇರಿಯನ್ ಲತಾ ಮಧುಸೂದನ್ ಕುಂಬಕೋಡು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಳ್ಯದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹ ಮತ್ತು ಸಹಕಾರ ಸದಾ ಇರಲಿದೆ. ಯಕ್ಷಗಾನದಂತಹ ಕಲೆಗಳು ಮತ್ತಷ್ಟು ಬೆಳೆಯಬೇಕು ಹಾಗೂ ಯುವಪೀಳಿಗೆ ಈ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖ್ಯಾತ ಕವಿ ಶ್ರೀಧರ ಡಿ.ಎಸ್. ಅವರ ಕೃತಿಯಾದ ಭೃಗು ಶಾಪ ಪ್ರಸಂಗವನ್ನು ಆಧರಿಸಿದ ತಾಳಮದ್ದಳೆಯಲ್ಲಿ ಸುಬ್ರಾಯ ಸಂಪಾಜೆ ಭಾಗವತಿಕೆಯನ್ನು ನಿರ್ವಹಿಸಿದರು. ಶ್ರೀಧರ ಪಡ್ರೆ ಮದ್ದಳೆ ಹಾಗೂ ವೇಣು ಮಾಂಬಾಡಿ ಚೆಂಡೆ ವಾದನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಅರ್ಥಧಾರಿಗಳಾಗಿ ಜಬ್ಬಾರ್ ಸಮೊ ಸಂಪಾಜೆ (ದೇವೇಂದ್ರ), ದಿನೇಶ್ ಶೆಟ್ಟಿ, ಕಾವಳಕಟ್ಟೆ (ಖ್ಯಾತಿ), ಪ್ರಸಾದ್ ಭಟ್ಕಳ (ವಿಷ್ಣು), ಜಯಾನಂದ ಸಂಪಾಜೆ (ಭೃಗು) ಹಾಗೂ ಜಯಪ್ರಕಾಶ ಗುಂಡಿ (ತಮಾಸುರ) ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸುಳ್ಯ ಅಧ್ಯಕ್ಷ ವಿನೋದ್ ಲಸ್ರಾಡೊ, ಸಂದ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷ ರಾಮಚಂದ್ರ ಪಲ್ಲತ್ತಡ್ಕ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಜೇಸಿಐ ಪಯಸ್ವಿನಿ ಅಧ್ಯಕ್ಷೆ ಲತಾ ಸುಪ್ರೀತ್ ಮೋಂಟಡ್ಕ, ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ ನಾಗವೇಣಿ ದಾಮೋದರ, ರೋಟರಿ ಕ್ಲಬ್ ಸುಳ್ಯ ಅಧ್ಯಕ್ಷ ರೋಟೇರಿಯನ್ ಮಧುಸೂದನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ತಾಳಮದ್ದಳೆ ಕಾರ್ಯಕ್ರಮಕ್ಕೆ ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಸಭಾಂಗಣ ಸಂಪೂರ್ಣ ಭರ್ತಿಯಾಗಿತ್ತು. ರಂಗ ಮಯೂರಿ ಕಲಾಶಾಲೆಯ ನಿರ್ದೇಶಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಲೋಕೇಶ್ ಊರುಬೈಲ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Yakshagana in Sullia: Tremendous Response to ‘Bhrigu Shapa’ Thalamaddale – ತುಳುಟೈಮ್ಸ್

ಇದನ್ನೂ ಓದಿ :ಬಂದಾರಿನಲ್ಲಿ ದನದ ಹಟ್ಟಿಗೆ ನುಗ್ಗಿದ ಚಿರತೆ:ಕರುವಿನ ಮೇಲೆ ದಾಳಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/68z-YcCrQ0o

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page