ಪುತ್ತೂರು : Tulu Times | ಪುತ್ತೂರು ಅಕ್ಷಯ ಪದವಿ ಕಾಲೇಜಿನಲ್ಲಿ ಗ್ಲೋರಿಯಸ್ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ 2K25- 26 ಅತ್ಯುತ್ತಮವಾಗಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಜಯಂತ್ ನಡುಬೈಲು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಳ್ವಾಸ್ ಕಾಲೇಜು ಮೂಡಬಿದಿರೆಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೇಶ್ ಕೈರೋಡಿ ಮಾತನಾಡಿ, ನಾನು ಎಂಬುದು ವೈಶಿಷ್ಟ. ಹಾಗಾಗಿ ಪ್ರಕೃತಿಯಲ್ಲೇ ಕಲಿಕೆ ಇದೆ. ಜೊತೆಗೆ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ನೀವು ಕಲಿಯುತ್ತಿರುವ ಕಾರಣ ಇದು ನಿಮ್ಮ ಪುಣ್ಯ. ನೀವು ಆದರ್ಶವನ್ನು ಪಾಲಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಿರಿ ಎಂದು ಹೇಳಿದರು ಹಾಗೂ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ
ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಕಲಾವತಿ ಜಯಂತ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ, ಆಡಳಿತ ಅಧಿಕಾರಿಯಾದ ಶ್ರೀ ಅರ್ಪಿತ್ ಟಿ. ಎ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಗಂಗಾರತ್ನ, ಐಕ್ಯುಎಸಿ ನಿರ್ದೇಶಕಿ ರಶ್ಮಿ ಮತ್ತು ಲಲಿತಾ ಕಲಾ ಸಂಘದ ಸಂಯೋಜಕಿ ಪ್ರಭಾವತಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಕೀರ್ತನ್ ಕೃಷ್ಣ (ತೃತೀಯ ಬಿಸಿಎ) ಉಪಸ್ಥಿತರಿದ್ದರು.
ಲಲಿತ ಕಲಾ ಸಂಘದ ಸಂಯೋಜಕಿ ಪ್ರಭಾವತಿ ಪ್ರಸ್ತಾವನೆಗೈದು, ಉಪನ್ಯಾಸಕರಾದ ಕಿಶನ್ ಮತ್ತು ಧನ್ಯಶ್ರೀ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಕೃತಿ ತೃತೀಯ ಎಫ್. ಡಿ ಪ್ರಾರ್ಥನೆ ಮಾಡಿ, ಉಪನ್ಯಾಸಕಿ ರಶ್ಮಿ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿಯಾದ ಕೀರ್ತನ್ ಕೃಷ್ಣ ತೃತೀಯ ಬಿಸಿಎ ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಕಿಶನ್ ಮತ್ತು ರಕ್ಷಾ ಕೆ. ಆರ್ (ದ್ವಿತೀಯ ಬಿಸಿಎ) ಕಾರ್ಯಕ್ರಮ ನಿರೂಪಿಸಿದರು.
Glorious annual cultural program at Akshaya Degree College – ತುಳು ಟೈಮ್ಸ್
ಇದನ್ನೂ ಓದಿ :ಮನ್ರೇಗಾ ಯೋಜನೆ ಬದಲಾಗಿ ಹೊಸ ಮಸೂದೆ ಮಂಡನೆ : ವಿಪಕ್ಷಗಳ ವಿರೋಧ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=2uWsULpUSalxRjy9











